ಸಾರಾಂಶ
ಚನ್ನಪಟ್ಟಣ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನನ್ನನ್ನು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸಿದ್ದೀರಾ. ನೀವೇ ನಿಂತು ಚುನಾವಣೆ ನಡೆಸಿ ಗೆಲುವು ಸಾಧಿಸುವಂತೆ ಮಾಡಿದ್ದು, ನಿಮ್ಮ ಪ್ರೀತಿಗೆ ಚಿರಋಣಿಯಾಗಿದ್ದೇನೆ ಎಂದು ಸಂಸದ ಡಾ. ಮಂಜುನಾಥ್ ತಿಳಿಸಿದರು.
ನಗರದ ಕೆಎಚ್‌ಬಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ೩೨೦ ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಪ್ರೀತಿಯ ಕಾರಣಕ್ಕೆ ಇಂದು ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಸಿಎಂ ಆಗಿದ್ದಾಗ ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಮುಂದೆಯೂ ಆದ್ಯತೆ ನೀಡಲಿದ್ದಾರೆ ಎಂದರು.ದೇಶಾದ್ಯಂತ ವಿಸ್ತರಣೆ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಎಲ್ಲ ವಯೋಮಾನದವರಲ್ಲೂ ಸಾಮಾನ್ಯವೆನಿಸಿದೆ. ಹೃದಯಾಘಾತ ಆದ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಜಿಲ್ಲೆಯ ಎಲ್ಲ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜಾರಿಯಾಗಿದೆ. ಇಡೀ ದೇಶದಲ್ಲಿ ಈ ಯೋಜನೆ ಜಾರಿಯಾಗಬೇಕು ಎಂಬ ಕನಸಿದೆ. ರಾಮನಗರಸ ಜಿಲ್ಲಾ ಆಸ್ಪತ್ರೆಯಲ್ಲಿ ಎಕೋ ಕಾರ್ಡಿಯೋಗ್ರಾಂ ಯಂತ್ರ ಇಲ್ಲದಿದ್ದು, ರೋಟರಿ ಅವರೊಂದಿಗೆ ಮಾತನಾಡಿದ್ದು, ಒಂದು ತಿಂಗಳ ಒಳಗೆ ಯಂತ್ರ ಅಳವಡಿಸಲಾಗುವುದು. ಚನ್ನಪಟ್ಟಣದಲ್ಲಿ ಅಲ್ಟ್ರಾ ಸೌಂಡ್ ಅಬ್‌ಡಾಮಿನಲ್ ಯಂತ್ರ ಇಲ್ಲ ಎಂದು ಮನವಿ ಮಾಡಿದ್ದು, ಇನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕುಮಾರಸ್ವಾಮಿ ಮೇಲೆ ಜನ ಸಾಕಷ್ಡು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಮಾಧಾನದಿಂದ ಇದ್ದರೆ ಅವರು ಎಲ್ಲ ಭರವಸೆ ಈಡೇರಿಸಲಿದ್ದಾರೆ ಎಂದರು.
ಬೆಂಬಲಿಸಿದ ಜನ:ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಾರಿ ಬೆಂಬಲ ವ್ಯಕ್ತವಾಗಿದೆ. ನಿಮ್ಮ ಬೆಂಬಲದಿಂದ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದರು.
ಜೆಡಿಎಸ್-ಬಿಜೆಪಿ ಕಿತ್ತಾಟದ ಕಾರಣಕ್ಕೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದನ್ನು ಮನಗೊಂಡು ನಾವು ಮೈತ್ರಿ ಮಾಡಿಕೊಂಡೆವು. ಇದನ್ನು ಒಪ್ಪಿಕೊಂಡ ಜನ ನಮ್ಮನ್ನು ಬೆಂಬಲಿಸಿದ್ದಾರೆ. ನಿಮ್ಮ ಬೆಂಬಲದ ಕಾರಣಕ್ಕೆ ಇಂದು ಎಚ್‌ಡಿಕೆಗೆ ಉನ್ನತ ಸ್ಥಾನ ಸಿಕ್ಕಿದೆ. ಅವರ ಕಾರ್ಯವ್ಯಾಪ್ತಿ ಇದೀಗ ದೇಶಕ್ಕೆ ವಿಸ್ತರಿಸಿದೆ. ಮೋದಿ ಅವರಿಗೆ ದೊಡ್ಡ ಜವಬ್ದಾರಿ ನೀಡಿದ್ದು, ಅದನ್ನು ಅವರು ಸೂಕ್ತವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾವಿದೆ ಎಂದರು.ಇದೇ ವೇಳೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿಯವರಿಗೆ ನಂದಿ ವಿಗ್ರಹ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಸಕ ಕುಕ್ಕೂರುದೊಡ್ಡಿ ಜಯರಾಮು, ತಹಸೀಲ್ದಾರ್ ನರಸಿಂಹಮೂರ್ತಿ, ಪೌರಾಯುಕ್ತ ಪುಟ್ಟಸ್ವಾಮಿ, ಇಒ ಶಿವಕುಮಾರ್ ಮುಂತಾದವರು ಹಾಜರಿದ್ದರು.ಪೊಟೋ೧೫ಸಿಪಿಟಿ೧:ಚನ್ನಪಟ್ಟಣದ ಕೆಎಚ್‌ಬಿ ಕಾಲೋನಿ ಮೈದಾನದಲ್ಲಿ ನಡೆದ ೩೨೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಪೊಟೋ೧೫ಸಿಪಿಟಿ೨:
ಚನ್ನಪಟ್ಟಣದ ಕೆಎಚ್‌ಬಿ ಕಾಲೋನಿ ಮೈದಾನದಲ್ಲಿ ನಡೆದ ೩೨೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಂಎಲ್‌ಸಿ ಯೋಗೇಶ್ವರ್ ನಂದಿ ವಿಗ್ರಹ ನೀಡಿ ಸನ್ಮಾನಿಸಿದರು. ಪೊಟೋ೧೫ಸಿಪಿಟಿ೩:ಚನ್ನಪಟ್ಟಣದಲ್ಲಿ ಕೆಎಚ್‌ಬಿ ಕಾಲೋನಿ ಮೈದಾನದಲ್ಲಿ ನಡೆದ ೩೨೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಾ.ಮಂಜುನಾಥ್, ಎಂಎಲ್‌ಸಿ ಯೋಗೇಶ್ವರ್ ಅವರಿಗೆ ಬೃಹತ್ ಹೂವಿನಹಾರ ಹಾಕಿ ಸನ್ಮಾನಿಸಲಾಯಿತು.