ಭಿನ್ನಾಭಿಪ್ರಾಯ ಮರೆತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಸಹಕರಿಸಿ: ಮುದ್ದಹನುಮೇಗೌಡ

| Published : Mar 29 2024, 12:54 AM IST / Updated: Mar 29 2024, 12:55 AM IST

ಭಿನ್ನಾಭಿಪ್ರಾಯ ಮರೆತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಸಹಕರಿಸಿ: ಮುದ್ದಹನುಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕಾಂಗ್ರೆಸ್‌ನಲ್ಲಿ ಬಣಗಳಾಗಿ ಭಿನ್ನಾಭಿಪ್ರಾಯಗಳಿದ್ದ ಕಾರಣ ಕಾಂಗ್ರೆಸ್ ಮುಖಂಡ ಲೋಕೇಶ್ವರ ಮನೆಗೆ ಖುದ್ದು ತುಮಕೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಗುರುವಾರ ಭೇಟಿ ನೀಡಿ, ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕು ಕಾಂಗ್ರೆಸ್‌ನಲ್ಲಿ ಬಣಗಳಾಗಿ ಭಿನ್ನಾಭಿಪ್ರಾಯಗಳಿದ್ದ ಕಾರಣ ಕಾಂಗ್ರೆಸ್ ಮುಖಂಡ ಲೋಕೇಶ್ವರ ಮನೆಗೆ ಖುದ್ದು ತುಮಕೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಗುರುವಾರ ಭೇಟಿ ನೀಡಿ, ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.

ಗುರುವಾರ ಬೆಳಗ್ಗೆ ಲೋಕೇಶ್ವರ ಮನೆಗೆ ಭೇಟಿ ನೀಡಿ ನಂತರ ಮಾತನಾಡಿದ ಅಭ್ಯರ್ಥಿ ಮುದ್ದಹನುಮೇಗೌಡರು, ಪಕ್ಷಗಳಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ಒಗ್ಗಟ್ಟಾಗಿ ಕೆಲಸ ಮಾಡಿದಾಗ ಅವೆಲ್ಲವೂ ದೂರವಾಗಲಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಷಡಕ್ಷರಿ ಗೆಲುವಿಗೆ ಲೋಕೇಶ್ವರ ಮತ್ತು ಅವರ ಕಾರ್ಯಕರ್ತರು ಶ್ರಮಿಸಿದ್ದರು. ಆದರೆ ಭಿನ್ನಾಭಿಪ್ರಾಯಗಳಿಂದ ಪಕ್ಷಕ್ಕೆ ತೊಂದರೆಯಾಗುವುದು ಬೇಡ. ನಿಮಗೆ ಹಾಗೂ ನಿಮ್ಮ ಬೆಂಬಲಿಗರಿಗೆ ನಾನು ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ದೊರಕಿಸಿಕೊಡುವಲ್ಲಿ ಪ್ರಯತ್ನ ಪಡುತ್ತೇನೆ. ನೀವು ನನ್ನ ಜೊತೆ ಕೈಜೋಡಿಸಿ ಈ ಬಾರಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಲೋಕೇಶ್ವರ್ ಪೊಲೀಸ್ ಅಧಿಕಾರಿಯಾಗಿದ್ದಾಗಿನಿಂದಲೂ ನನಗೆ ಬಹಳ ಆತ್ಮೀಯರು. ಯಾವುದೇ ರಾಜಕೀಯ ವಿಚಾರಗಳು ಅಡ್ಡ ಬಂದಿಲ್ಲ ಅವರ ಮತ್ತು ನಮ್ಮ ವಿಶ್ವಾಸ ಹಾಗೆ ಮುಂದುವರೆಯುತ್ತಿದೆ ಎಂದರು.

ಮುಖಂಡ ಲೋಕೇಶ್ವರ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವವರೆಗೂ ನಮ್ಮ ಮತ್ತು ಕಾರ್ಯಕರ್ತರ ಬೆಂಬಲ ಪಡೆದ ಇಲ್ಲಿನ ಶಾಸಕ ಕೆ. ಷಡಕ್ಷರಿ ಗೆದ್ದ ಮೇಲೆ ನಮ್ಮ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಅವರಿಗೆ ಬೇಕಾದವರಿಗೆ ರಾಜಕೀಯ ಸ್ಥಾನಮಾನ ನೀಡಿದ್ದಾರೆ. ಪಕ್ಷದ ಯಾವುದೇ ಸಭೆ, ಸಮಾರಂಭಗಳಿಗೆ ನಮ್ಮನ್ನು ಆಹ್ವಾನಿಸುವುದಿಲ್ಲ. ಈ ಬಗ್ಗೆ ರಾಜ್ಯ, ಜಿಲ್ಲೆಯ ಮುಖಂಡರ ಗಮನಕ್ಕೂ ಬಂದರೂ ಪ್ರಯೋಜನವಾಗಿಲ್ಲ. ನಿಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸವಿದ್ದು ಚುನಾವಣೆ ಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರುಗಳಾದ ಸೊಪ್ಪುಗಣೇಶ್, ಪ್ರಭುಕೋಟೆ, ಯಮುನಾ, ಭಾರತಿ, ಆಶೀಪಾಬಾನು, ಎಪಿಎಂಸಿ ನಿರ್ದೇಶಕ ಬಸವರಾಜು, ಕಾರ್ಯಕರ್ತರಾದ ಡಾಬಾ ಶಂಕರ್, ಕಾಂತರಾಜು, ನಟರಾಜು, ವನಿತಾ, ಶಿವು, ಮಧು, ಅನಿಲ್, ಪ್ರಕಾಶ್ ಸೇರಿ ಇತರರಿದ್ದರು.