ಟೆಕ್ಕಿ ಅತುಲ್‌ ಕೇಸ್‌ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿ : ಅನಿಲ್‌ ಮೂರ್ತಿ ಆಗ್ರಹ

| Published : Dec 15 2024, 02:04 AM IST / Updated: Dec 15 2024, 05:01 AM IST

atul subhas
ಟೆಕ್ಕಿ ಅತುಲ್‌ ಕೇಸ್‌ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿ : ಅನಿಲ್‌ ಮೂರ್ತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

  ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಹಾಗೂ ವಿಚ್ಛೇದನ ಮತ್ತು ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆಗೆ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕೆಂದು ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ ಸಹ ಸಂಸ್ಥಾಪಕ ಅನಿಲ್‌ ಮೂರ್ತಿ ಆಗ್ರಹಿಸಿದ್ದಾರೆ.

 ಬೆಂಗಳೂರು : ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಹಾಗೂ ವಿಚ್ಛೇದನ ಮತ್ತು ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆಗೆ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕೆಂದು ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ ಸಹ ಸಂಸ್ಥಾಪಕ ಅನಿಲ್‌ ಮೂರ್ತಿ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 4 ವರ್ಷಗಳಿಂದ ವಿಚ್ಛೇದಿತ ಪತ್ನಿಯ ಕಿರುಕುಳ ಹಾಗೂ ಕಾನೂನು ವ್ಯವಸ್ಥೆಯ ವಿರುದ್ಧ ನೊಂದು ಡೆತ್‌ನೋಟ್‌ ಬರೆದಿಟ್ಟು ಟೆಕ್ಕಿ ಅತುಲ್ ಸುಭಾಷ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಂಸದರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ರಚನೆ ಮಾಡಿ ಎಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ, ಕೌಟುಂಬಿಕ ಕಲಹ ಪ್ರಕರಣ ಹೆಚ್ಚಾಗುತ್ತಿವೆ. ನ್ಯಾಯಾಲಯದಲ್ಲಿ ಕೌಟುಂಬಿಕ ಪ್ರಕರಣಗಳ ವಿಚಾರಣೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಈ ಕುರಿತು ಕಾನೂನು ಪುನರ್‌ ಪರಿಶೀಲನೆಗೆ ಸಂಸದರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ವರದಿ ಪಡೆದು ಕ್ರಮ ಕೈಗೊಳ್ಳಬೇಕು.

ವಿಚ್ಛೇದನ ಅಥವಾ ವೈವಾಹಿಕ ವಿವಾದ ಪ್ರಕರಣಗಳ ಸಂಬಂಧ ವಿವಿಧ ಕಡೆಗಳಲ್ಲಿ ದಾಖಲಾಗಿರುವ ಸಿವಿಲ್, ಕ್ರಿಮಿನಲ್ ಮಾದರಿ ಪ್ರಕರಣಗಳ ವಿವಾದಗಳನ್ನು ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. 300 ಕಿ.ಮೀ ದೂರದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಪ್ರಕರಣದಲ್ಲಿ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ಉದ್ಯೋಗಕ್ಕೆ ಯಾವುದೇ ತೊಂದರೆ ಉಂಟಾಗಬಾರದು.

ವಿಚ್ಛೇದನ ಪಡೆದ ಬಳಿಕ ಪತ್ತಿಗೆ ನೀಡುವ ಜೀವನಾಂಶದ ಹಣ ಎಂಬುದನ್ನು ರದ್ದುಪಡಿಸಿ ‘ಸಹಾಯನಿಧಿ’ ಎಂದು ಬದಲಿಸಬೇಕು. ಜೀವನ ನಿರ್ವಹಣೆಗೆ ನೀಡುವ ಹಣವನ್ನು ಸೀಮಿತ ಅವಧಿಗೆ ಮಿತಿಗೊಳಿಸಬೇಕು. ದೈಹಿಕ, ಮಾನಸಿಕ ಅಸಮರ್ಥರನ್ನು ಹೊರತುಪಡಿಸಿ ಸಿ.ಎ, ಎಂಬಿಎ, ವೈದ್ಯರು, ಎಂಜಿನಿಯರ್ ಸೇರಿ ತೆರಿಗೆ ಪಾವತಿದಾರರು ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ಆರಂಭದಲ್ಲಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಎಂದು ಮನವಿ ಮಾಡಿದರು.

ಮುಖ್ಯವಾಗಿ 498 (ಎ) ಪ್ರಕರಣದಡಿ ದೂರು ದಾಖಲಾದಾಗ ಯಾವುದೇ ವಿಚಾರಣೆ ಇಲ್ಲದೇ ಏಕಾಏಕಿ ಪತಿ ಹಾಗೂ ಪತಿಯ ಕುಟುಂಬ ಸದಸ್ಯರನ್ನು ಬಂಧಿಸಲು ಅವಕಾಶವಿದೆ. ಇದಕ್ಕೆ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನಿನಲ್ಲಿ ಅಗತ್ಯ ಸುಧಾರಣೆ ತರಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಸಂಸ್ಥಾಪಕ ಪಾಂಡುರಂಗ ಕಟ್ಟಿ, ವಕೀಲ ಮಂಜುನಾಥ್ ಇದ್ದರು.