ಕಾಲೇಜಿನಲ್ಲಿ ಆ್ಯಂಟಿ ರ್‍ಯಾಗಿಂಗ್ ಕಮಿಟಿ ರಚಿಸಿ: ಚೇತನ್ .ಆರ್‌

| Published : Oct 15 2023, 12:46 AM IST

ಕಾಲೇಜಿನಲ್ಲಿ ಆ್ಯಂಟಿ ರ್‍ಯಾಗಿಂಗ್ ಕಮಿಟಿ ರಚಿಸಿ: ಚೇತನ್ .ಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಂಶುಪಾಲರೊಂದಿಗೆ ಪೊಲೀಸ್ ಆಯುಕ್ತರ ಸಭೆ
ಕಲಬುರಗಿ: ಕಾಲೇಜು ಕ್ಯಾಂಪಸ್‍ನಲ್ಲಿ ರ್‍ಯಾಗಿಂಗ್ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಲಬುರಗಿ ನಗರದ ಎಲ್ಲಾ ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್ ಕಾಲೇಜಿನಲ್ಲಿ ಆ್ಯಂಟಿ ರ್‍ಯಾಗಿಂಗ್ ಕಮಿಟಿ ರಚಿಸಬೇಕು ಮತ್ತು ಈ ಸಂಬಂಧ ಸಹಾಯವಾಣಿ ಸ್ಥಾಪಿಸಬೇಕೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ತಿಳಿಸಿದರು. ತಮ್ಮ ಕಚೇರಿಯಲ್ಲಿ ರ್‍ಯಾಗಿಂಗ್ ಮತ್ತು ಮಾದಕ ದ್ರವ್ಯ ಸೇವನೆ ತಡೆ ಕುರಿತಂತೆ ಕಲಬುರಗಿ ನಗರದ ವಿವಿಧ ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್‌ ಕಾಲೇಜುಗಳ ಪ್ರಾಂಶುಪಾಲರ ಮತ್ತು ವಸತಿ ನಿಲಯಗಳ ವಾರ್ಡ್‍ನ್‍ಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಶಿಕ್ಷಣ ಸ್ನೇಹಿ ವಾತಾವರಣ ನಿರ್ಮಿಸುವುದು ಆಡಳಿತ ಮಂಡಳಿ ಜವಾಬ್ದಾರಿಯಾಗಿದೆ ಎಂದರು. ಕಾಲೇಜಿನಲ್ಲಿ ಯಾವುದೇ ರೀತಿಯ ಮಾದಕ ವಸ್ತ ಬಳಕೆಯಾಗದಂತೆ ಕಟ್ಟೆಚ್ಚರ ವಹಿಸಬೇಕು. ಯಾವುದೇ ವಿದ್ಯಾರ್ಥಿ ಅಸಹಜ ನಡವಳಿಕೆ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಪ್ರಾಂಶುಪಾಲರು ಮತ್ತು ಡೀನ್‌ಗೆ ನಿರ್ದೇಶನ ನೀಡಿದ ಅವರು, ವಸತಿ ನಿಲಯಗಳಲ್ಲಿ ವಾರ್ಡ್‍ನ್‍ಗಳು ಇದರ ಬಗ್ಗೆ ನಿಗಾ ವಹಿಸಬೇಕು ಎಂದರು. ಇದಲ್ಲದೆ ಪ್ರತಿ ಕಾಲೇಜಿನಲ್ಲಿ ರ್‍ಯಾಗಿಂಗ್ ಬ್ಯಾನ್ ಫಲಕ ಅಳವಡಿಸಬೇಕು ಎಂದು ಕಾಲೇಜುಗಳ ಮುಖ್ಯಸ್ಥರಿಗೆ ಸೂಚಿಸಿದರು. ಸಭೆಯಲ್ಲಿ ಕಲಬುರಗಿ ಡಿಸಿಪಿ ಕನಿಕಾ ಸಿಕ್ರಿವಾಲ್, ಜಿಮ್ಸ್, ಎಂಆರ್‌ಎಂಸಿ, ಕೆಬಿಎನ್, ಇಎಸ್ಐಸಿ ಮೆಡಿಕಲ್ ಕಾಲೇಜ್, ಅಲ್-ಬದರ್, ನಿಜಲಿಂಗಪ್ಪ, ಇಎಸ್ಐಸಿ ಡೆಂಟಲ್ ಕಾಲೇಜ್, ಪಿಡಿಎ, ಅಪ್ಪಾ ಇನ್ಸ್‍ಟ್ಯೂಟ್ ಆಫ್ ಎಂಜಿನಿಯರಿಂಗ್, ಕೆಸಿಟಿ, ಶೆಟ್ಟಿ, ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ಡೀನ್‌ಗಳು, ಹಾಸ್ಟೆಲ್ ವಾರ್ಡನ್‌ಗಳು ಭಾಗವಹಿಸಿದ್ದರು.