ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮೂರು ದಿನಗಳಿಂದ ನಡೆದ ರಾಮನಗರ ಸಂಭ್ರಮ - ಫುಡ್ , ಫನ್ , ಫ್ಯಾಷನ್ ಫೆಸ್ಟಿವಲ್ ಗೆ ಭಾನುವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು
ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮೂರು ದಿನಗಳಿಂದ ನಡೆದ ರಾಮನಗರ ಸಂಭ್ರಮ - ಫುಡ್ , ಫನ್ , ಫ್ಯಾಷನ್ ಫೆಸ್ಟಿವಲ್ ಗೆ ಭಾನುವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು.
ವಾರಾಂತ್ಯದ ಹಿನ್ನೆಲೆಯಲ್ಲಿ ರಾಮನಗರ ಟೌನ್ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಜನರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ರಾಮನಗರ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದುಕೊಟ್ಟರು. ಶುಕ್ರವಾರ ಮತ್ತು ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಸಹಸ್ರಾರು ಜನರು ಭೇಟಿ ನೀಡಿದ್ದರು.ಸಂಜೆ ಆಗುತ್ತಿದ್ದಂತೆ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರಿಂದ ಫೆಸ್ಟಿವಲ್ ಗೆ ಕಳೆ ಬಂದಿತು. ಶಾಸಕ ಇಕ್ಬಾಲ್ ಹುಸೇನ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಸೇರಿದಂತೆ ಪ್ರಮುಖ ಗಣ್ಯರು ಸಂಭ್ರಮಕ್ಕೆ ಸಾಕ್ಷಿಯಾದರು. ಜನರು ತಮ್ಮ ಕುಟುಂಬ, ಸ್ನೇಹಿತರ ಜೊತೆಗೆ ಆಗಮಿಸಿ ವಿವಿಧ ಖಾದ್ಯಗಳನ್ನು ಸವಿದು, ಶಾಪಿಂಗ್ ಮಾಡಿದರು. ಎಬಿಸಿಡಿ ಮತ್ತು ದೀಪಕ್ ಡ್ಯಾನ್ಸ್ ಗ್ರೂಪ್ ನವರು ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾಯಿತು.
ನಗರದಲ್ಲಿ ಮೊದಲ ಬಾರಿಗೆ ನಡೆದ ಫುಡ್, ಫನ್, ಫ್ಯಾಷನ್ ಫೆಸ್ಟಿವಲ್ ಆದ ರಾಮನಗರ ಸಂಭ್ರಮಕ್ಕೆ ಮೂರು ದಿನಗಳ ಕಾಲವೂ ಜನರು ಆಗಮಿಸಿ ತಮಗಿಷ್ಟವಾದ ಗೃಹಪಯೋಗಿ ವಸ್ತುಗಳು, ಪದಾರ್ಥಗಳು ಖರೀದಿಸಿ ಮನೆಗೆ ಕೊಂಡೊಯ್ದರು. ಕರ್ನಾಟಕದ ವಿವಿಧ ಭಾಗ ಸೇರಿ ಉತ್ತರ ಭಾರತದ ವೈವಿಧ್ಯಮಯ ಖಾದ್ಯಗಳ ಆಹಾರ ಮೇಳವಿದ್ದು, ತಮಿಗಿಷ್ಟವಾದ ಖಾದ್ಯ ಸವಿದು ಖುಷಿಪಟ್ಟರು.ಸಂಗೀತದ ರಸದೌತಣ:
ಒಂದೆಡೆ ಝಗಮಗಿಸುವ ವೇದಿಕೆಯಲ್ಲಿದ್ದ ಗಾಯಕರು ಸುಶ್ರಾವ್ಯವಾಗಿ ಹಾಡು ಹೇಳುತ್ತಾ ಸಂಗೀತದ ರಸದೌತಣ ಉಣಬಡಿಸುತ್ತಿದ್ದರೆ , ಮತ್ತೊಂದೆಡೆ ಬಗೆ ಬಗೆಯ ಖಾದ್ಯಗಳು ಜನರನ್ನು ಸೆಳೆದವು. ರುಚಿಯಾದ ಹಲವು ಬಗೆಯ ದೋಸೆ, ಬಜ್ಜಿ-ಬೋಂಡ, ಪಾಪ್ ಕಾರ್ನ್, ನೈಸರ್ಗಿಕ ಜ್ಯೂಸ್, ಪಡ್ಡು, ಮಶ್ರೂಮ್ ಬಿರಿಯಾನಿ ಸೇರಿದಂತೆ ಹಲವು ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿತ್ತು.ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಫ್ರೀಡಮ್ ಹೆಲ್ತಿ ಕುಕಿಂಗ್ ಆಯಿಲ್, ಭಾಗ್ಯಲಕ್ಷ್ಮಿ, ಗಣೇಶ್ ಜ್ಯುವೆಲರ್ಸ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಸಮರ್ಥ್ ಟಿವಿಎಸ್ , ನಂದಿ ಟೊಯೋಟಾ ಪ್ರಸ್ತುತ ಪಡಿಸಿದ್ದ ಈ ಫುಡ್, ಫನ್, ಫ್ಯಾ,ನ್ ಫೆಸ್ಟಿವಲ್ ಕೇವಲ ಆಹಾರಕ್ಕೆ ಮಾತ್ರ ಸೀಮಿತವಾಗದೆ ಶಾಪಿಂಗ್ ಗೂ ಹೇಳಿ ಮಾಡಿಸಿದಂತಿತ್ತು. ಮಹಿಳೆಯರ ಮನಕ್ಕೊಪ್ಪುವ ವಿವಿಧ ರೀತಿಯ ವಸ್ತ್ರಗಳು, ಆಭರಣಗಳು, ಕೈಮಗ್ಗದ ವಸ್ತುಗಳು, ಗೃಹಪಯೋಗಿ ವಸ್ತುಗಳೂ ಈ ಮೇಳದಲ್ಲಿ ಇದ್ದದ್ದು ವಿಶೇಷವಾಗಿತ್ತು.
ಮಕ್ಕಳ ಪ್ರತಿಭೆ ಅನಾವರಣ:ಈ ಮೇಳದಲ್ಲಿ ಮಕ್ಕಳಿಗೆ ಮುದ್ದು ಮಗು ಮತ್ತು ವೇಷಭೂಷಣ, ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ಅಡುಗೆ ಮಹಾರಾಣಿ, ಬೆಂಕಿ ರಹಿತ ಅಡುಗಡೆ ಸ್ಪರ್ಧೆಗಳ ಮೂಲಕ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿತು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಗಣ್ಯರು ಬಹುಮಾನ ವಿತರಿಸಿದರು. ಸಾಲುಮರದ ತಿಮ್ಮಕ್ಕನ ಪೋಷಾಕಿನಲ್ಲಿ ಬಂದಿದ್ದ ಹೋಲಿ ಕ್ರೆಸೆಂಟ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಆಸಿಯಾ ದನಿನ್ ಫಾತಿಮಾ ಗಮನ ಸೆಳೆದರು.ಅಸೋಸಿಯೆಟ್ ವೈಸ್ ಪ್ರೆಸಿಡೆಂಟ್ ಇವೆಂಟ್ಸ್ ಅಂಡ್ ಆಕ್ಟಿವೇಷನ್ ವಿಜಯ್ ಕುಮಾರ್, ಬಿ.ಎಂ.ಶ್ರೀನಿವಾಸ್ ,ಕನ್ನಡಪ್ರಭ ಹಿರಿಯ ವರದಿಗಾರ ಎಂ.ಅಫ್ರೋಜ್ ಖಾನ್, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಜಗದೀಶ್ (ಯೋಗಿ), ಸಿಬ್ಬಂದಿಗಳಾದ ಸಿ.ಭರತ್ , ಅಭಿಷೇಕ್, ಇವೆಂಟ್ ನ ಮುಖ್ಯಸ್ಥರಾದ ಹರಿಪ್ರಸಾದ್ , ಅರವಿಂದ್ ಉಪಸ್ಥಿತರಿದ್ದರು. ಸುವರ್ಣ ನ್ಯೂಸ್ ನಿರೂಪಕಿ ವೀಣಾ ಪೂಜಾರಿ ನಿರೂಪಣೆ ಮಾಡಿದರು.
ಬಾಕ್ಸ್..............20 ಮಂದಿ ಅದೃಷ್ಟದ ವಿಜೇತರು :
ರಾಮನಗರ ಸಂಭ್ರಮ ವೀಕ್ಷಣೆಗೆ ಆಗಮಿಸಿದ್ದ ಜನರು ತಮ್ಮ ಹೆಸರು ಬರೆದು ಪೆಟ್ಟಿಗೆಯಲ್ಲಿ ಹಾಕಿದ್ದರು. ಗಂಟೆಗೆ ಒಂದರಂತೆ ಒಟ್ಟು 20 ಮಂದಿ ವಿಜೇತರಿಗೆ ಶ್ರೀಸ್ಟಾರ್ ಗೋಲ್ಡ್ ಕಂಪನಿ ವತಿಯಿಂದ ಬೆಳ್ಳಿ ನಾಣ್ಯಗಳನ್ನು ನೀಡಲಾಯಿತು.ಬಾಕ್ಸ್...........
ಗಮನಸೆಳೆದ ಭರತನಾಟ್ಯಬೆಳಗ್ಗೆ 11 ಗಂಟೆಗೆ ಮಕ್ಕಳು ಪ್ರದರ್ಶಿಸಿದ ಭರತ ನಾಟ್ಯ ಜನರ ಮೆಚ್ಚುಗೆಗೆ ಪಾತ್ರವಾಯಿತು. ಬೆಂಕಿ ರಹಿತ ಅಡುಗೆ ತಯಾರಿಕೆಯಲ್ಲಿ ಇಬ್ಬರು ಮಕ್ಕಳು ಭಾಗವಹಿಸಿ ಗಮನ ಸೆಳೆದರು. ಇದಾದ ನಂತರ 1 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ಮಕ್ಕಳಿಗೆ ಮೂರು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಮಕ್ಕಳು ಭಾಗ ವಹಿಸಿದ್ದರು. ಪ್ರತಿ ವಿಭಾಗದಿಂದ ಮೂವರು ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಣೆ ಮಾಡಲಾಯಿತು.
ಬಾಕ್ಸ್ ..........ರಾಮನಗರ ಸಂಭ್ರಮಕ್ಕೆ ಮಕ್ಕಳ ಸಂಭ್ರಮ ಸಾಕ್ಷಿ!
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಿಂದ ಆಯೋಜನೆಗೊಂಡಿದ್ದ ರಾಮನಗರ ಸಂಭ್ರಮಕ್ಕೆ ಚಿಕ್ಕಪುಟ್ಟ ಮಕ್ಕಳು ಮತ್ತಷ್ಟು ರಂಗು ತಂದರು. ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಂಭ್ರಮದ ಕಡೆಯ ದಿನವಾದ ಭಾನುವಾರ ಮಕ್ಕಳ ಸಂಭ್ರಮ, ಮಕ್ಕಳ ಕಲರವ ಗಮನ ಸೆಳೆಯಿತು. ಮುದ್ದು ಮಕ್ಕಳಿಗಾಗಿ ಮುದ್ದು ಮಗು ಪ್ರದರ್ಶನದಲ್ಲಿ ಪಾಲಕರು ಸಹ ಉತ್ಸಾಹದಿಂದ ಭಾಗಿಯಾಗಿದ್ದರು. ತಮ್ಮ ಮುದ್ದು ಮಕ್ಕಳನ್ನು ಸಿಂಗರಿಸಿ ಕರೆ ತಂದಿದ್ದ ಹೆತ್ತವರು, ಅಜ್ಜ-ಅಜ್ಜಿ, ಬಂಧು-ಬಳಗದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮುದ್ದು ಮಗು ಸರ್ಧೆ ಬಳಿಕ 7 ವರ್ಷದ ಮಕ್ಕಳಿಗೆ ವೇಷಭೂಷಣ ಪ್ರದರ್ಶನ ನಡೆಯಿತು. ರಾಮನಗರ ಸಂಭ್ರಮದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದ ಪೋಷಕರು ಮುಂದಿನ ವರ್ಷವೂ ಇದಕ್ಕಿಂತ ದೊಡ್ಡ ಮಟ್ಟದ ಸಂಭ್ರಮ ಮಾಡುವಂತೆ ಮನವಿ ಮಾಡಿದರುಕೋಟ್ .............
ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಆಯೋಜಿಸಿರುವ ರಾಮನಗರ ಸಂಭ್ರಮ ತುಂಬಾ ಯಶಸ್ವಿಯಾಗಿ ಮೂಡಿ ಬಂದಿದೆ. ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಿದ್ದು ಖುಷಿ ತಂದಿತು. ಇಂತಹ ವಿಭಿನ್ನವಾದ ಕಾರ್ಯಕ್ರಮಗಳು ಆಗಿಂದಾಗೆ ನಡೆಯುತ್ತಿರಬೇಕು. ನಮ್ಮಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗಲಿದೆ.- ಅನಿತಾ ಅರವಿಂದ್, ರಾಮನಗರ.
ಕೋಟ್ ..............ರಾಮನಗರ ನೆಲವು ಕಲೆ, ಸಾಹಿತ್ಯ , ಸಂಗೀತ, ನೃತ್ಯ, ಜನಪದ ರಂಗಭೂಮಿ ಸೇರಿದಂತೆ ಎಲ್ಲವೂ ಒಳಗೊಂಡಿದೆ. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ವಿಶೇಷವಾಗಿ ರಾಮನಗರ ಸಂಭ್ರಮ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
- ಕುಮಾರಸ್ವಾಮಿ, ಸಂಸ್ಥಾಪಕ ಕಾರ್ಯದರ್ಶಿ, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳು, ರಾಮನಗರ.ಬಾಕ್ಸ್ ................
ಬೆಂಕಿ ರಹಿತ ಅಡುಗೆ ಸ್ಪರ್ಧೆ ವಿಜೇತರು :ರಿಫಾ ನಜ್ಮೀನ್ (ಪ್ರಥಮ), ಉಮನ್ ಅಲಿ ಖಾನ್ (ದ್ವಿತೀಯ), ತನ್ವಿ ಕೆ. ಕುಮಾರ್ (ತೃತೀಯ), ನೂರ್ ಸಬಾ, ಮಹಮ್ಮದ್ ದಾನಿಶ್ (ಸಮಾಧಾನ) ಬಹುಮಾನ ಪಡೆದಿದ್ದಾರೆ.
ಅಡುಗೆ ಮಹಾರಾಣಿಯರು ಸ್ಪರ್ಧೆ ವಿಜೇತರು :ಅಜ್ಮತ್ (ಪ್ರಥಮ), ಅಶ್ವಿನಿ (ದ್ವಿತೀಯ), ರಮಾಮಣಿ (ತೃತೀಯ) ಬಹುಮಾನ ಗಳಿಸಿದ್ದಾರೆ.
ಚಿತ್ರಕಲಾ ಸ್ಪರ್ಧೆ ವಿಜೇತರು:1 ರಿಂದ 4ನೇ ತರಗತಿ ವಿಭಾಗದ ಸ್ಪರ್ಧೆಯಲ್ಲಿ ಕುಸ್ಮಿತ್ ವಿ.ಗೌಡ (ಪ್ರಥಮ), ಕೃಷ್ಣವ್ ಜಿ.ಸಿ. (ದ್ವಿತೀಯ), ಎಂ.ಬಿ.ತಾಹೀರ್ (ತೃತೀಯ), 5 ರಿಂದ 7ನೇ ತರಗತಿ ವಿಭಾಗದ ಸ್ಪರ್ಧೆಯಲ್ಲಿ ರಾಜಶ್ರೀ (ಪ್ರಥಮ), ಸುಚಿತ್ ಮಾಲಗ (ದ್ವಿತೀಯ), ಎಂ.ವಿಶ್ವಾಸ್ (ತೃತೀಯ), 8ರಿಂದ 10ನೇ ತರಗತಿ ವಿಭಾಗದ ಸ್ಪರ್ಧೆಯಲ್ಲಿ ರಜನ್ಯಪೌಲ್ (ಪ್ರಥಮ), ಎನ್.ಕೆ.ಪವನ್ (ದ್ವಿತೀಯ) ಲೂಬಾ ನಿಸಾರ್ (ತೃತೀಯ)
