ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಮತ್ತು ಪಿ.ಯು. ಕಾಲೇಜಿನಲ್ಲಿ ಗಣೇಶೋತ್ಸವದ ಅಂಗವಾಗಿ 3000 ವಿದ್ಯಾರ್ಥಿಗಳು, 5000 ದೀಪಗಳಿಂದ ಬೃಹತ್ ಗಾತ್ರದ ಗಣೇಶನ ಆಕೃತಿ ರಚಿಸಿ ಗಮನ ಸೆಳೆದಿದ್ದಾರೆ.

ಗಂಗಾವತಿ: ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಮತ್ತು ಪಿ.ಯು. ಕಾಲೇಜಿನಲ್ಲಿ ಗಣೇಶೋತ್ಸವದ ಅಂಗವಾಗಿ 3000 ವಿದ್ಯಾರ್ಥಿಗಳು, 5000 ದೀಪಗಳಿಂದ ಬೃಹತ್ ಗಾತ್ರದ ಗಣೇಶನ ಆಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಗಳು ಗಣೇಶನ ಮುಖವಾಡವನ್ನು ಧರಿಸಿ, ಗಣೇಶನ ಕುರಿತು ಭಕ್ತಿಯಿಂದ ಶ್ಲೋಕಗಳನ್ನು ಪಠಿಸಿದರು.

ಶಾಲೆಯ ಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕರಾದ ವಿನೋದ್‌ಕುಮಾರ್, ತನುಜಾ, ಹನುಮೇಶ, ಮಂಜುನಾಥ ಟಿ. ಹಾಗೂ ಎಲ್ಲ ಶಿಕ್ಷಕ ಮತ್ತು ಸಿಬ್ಬಂದಿ ಮಾರ್ಗದರ್ಶನದಲ್ಲಿ ಎಲ್ಲ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅವರು ವಿದ್ಯಾರ್ಥಿಗಳ ಕಲೆಗೆ ಮೆಚ್ಚಿ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರಿದರು.ಈ ಕಾರ್ಯಕ್ರಮಗಳಲ್ಲಿ ಶಾಲೆಯ ಉಪಾಧ್ಯಕ್ಷರಾದ ನೆಕ್ಕಂಟಿ ಆದರ್ಶ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಅಖಿಲಾ ನೆಕ್ಕಂಟಿ, ಶಾಲೆಯ ಸಿಇಒ ನರೇಶ, ಜಿ. ನಾಗೇಶ್ವರ್‌ರಾವ್, ಕೃಷ್ಣವೇಣಿ, ಲಕ್ಷ್ಮೀ ಜೆ., ನಿಂಗಪ್ಪ, ಮಂಜುನಾಥ, ಕಾಳೇಶ, ಪಿ.ಆರ್.ಒ. ಮಲ್ಲನಗೌಡ ಪಾಟೀಲ್ ಹಾಗೂ ಶಿಕ್ಷಕ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.