ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕೊಡಗು ಮತ್ತು ಕೊಡವ ಜನಾಂಗದ ಹಿತಾಸಕ್ತಿ ಕಾಪಾಡುವ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ 1942ರಲ್ಲಿ ಸ್ಥಾಪನೆಯಾದ ಕೊಡವ ಜನಾಂಗದ ತಕ್ಕಾಮೆ ಮೂಲಕ ಪ್ರಾಧಿನಿಧಿಕ ಸಂಸ್ಥೆಯಾದ ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅದ್ಯಕ್ಷತೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ರಚನೆ ಮಾಡಲಾಯಿತು.ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆ ಮಾಡಲಾದ ಕೇಂದ್ರ ಸಮಿತಿ 42 ಸದಸ್ಯರ ಸಭೆಯಲ್ಲಿ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ದೇಶ ತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ, ಉಪಾಧ್ಯಕ್ಷರಾಗಿ ಪೋರೆರ ಬಿದ್ದಪ್ಪ,
ಗೌರವ ಕಾರ್ಯದರ್ಶಿಯಾಗಿ ಚೊಟ್ಟಂಡ ಪ್ರಭು ಸೋಮಯ್ಯ, ಜಂಟಿ ಕಾರ್ಯದರ್ಶಿಗಳಾಗಿ ಚೇoದ್ರಿಮಾಡ ಡಿ. ಪೃಥ್ವಿಮತ್ತು ಮನ್ನೇರ ಸರಸ್ವತಿ ರಮೇಶ್, ಖಜಾಂಚಿಯಾಗಿ ಕಾಯಪಂಡ ಸುನಿಲ್, ಕಾನೂನು ಸಲಹೆಗಾರರಾಗಿ ಕುಟ್ಟಂಡ ವಿಜಯ ಉತ್ತಪ್ಪ ಆಯ್ಕೆಯಾಗಿದ್ದಾರೆ.
ಶನಿವಾರ ವಿರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.