ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 109ನೇ ಜನ್ಮದಿನಾಚರಣೆ

| Published : Oct 28 2024, 12:51 AM IST / Updated: Oct 28 2024, 12:52 AM IST

ಸಾರಾಂಶ

ಈ ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ ದೇವರಾಜು ಅರಸು. ಅವರ ಅರ್ದಶವನ್ನು ಅಳವಡಿಸಿಕೊಳ್ಳವುದರ ಮೂಲಕ ಅಹಿಂದ ಸಮಾಜದವರು ಮುಖ್ಯವಾಹಿನಿಗೆ ಬರಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕು ಅಹಿಂದ ಸಂರಕ್ಷಣಾ ವೇದಿಕೆಯಿಂದ ಹಿಂದುಳಿದ ವರ್ಗಗಳ ನೇತಾರ ಡಿ.ದೇವರಾಜು ಅರಸು 109ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರೇಟ್-2 ತಹಸೀಲ್ದಾರ್ ಸೋಮಶೇಖರ್ ಜ್ಯೋತಿ ಬೆಳಗಿಸಿ ಮಾತನಾಡಿ, ದೇವರಾಜ ಅರಸು ತುಳಿತಕ್ಕೆ ಒಳಗಾದ ಜನರಿಗಾಗಿ ಹೋರಾಡಿದವರು. ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿ ಬಡವರ ದಾರಿದೀಪವಾದರು ಎಂದರು.

ಅಹಿಂದ ಸಂರಕ್ಷಣಾ ವೇದಿಕೆ ಅಧ್ಯಕ್ಷ ಅತಗೂರು ನಿಂಗಪ್ಪ ಮಾತನಾಡಿ, ಈ ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ ದೇವರಾಜು ಅರಸು. ಅವರ ಅರ್ದಶವನ್ನು ಅಳವಡಿಸಿಕೊಳ್ಳವುದರ ಮೂಲಕ ಅಹಿಂದ ಸಮಾಜದವರು ಮುಖ್ಯವಾಹಿನಿಗೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಹಿಂದ ಸಂರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಮರಿ ಹೆಗ್ಗಡೆ, ಪ್ರದಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್‌, ಪದಾಧಿಕಾರಿಗಳಾದ ಕೆ.ಟಿ.ಶಿವಕುಮಾರ್, ಮಲ್ಲರಾಜು, ದಾಕ್ಷಾಯಿಣಿ , ಮಹದೇವಯ್ಯ ವೈರಮುಡಿ ಗೋವಿಂದಯ್ಯ, ಮಮತಾ, ನಾಗಲಿಂಗ, ಚಿಕ್ಕನಂಜಚಾರಿ, ಮುಖಂಡರಾದ ವಿಶ್ವ ಕರ್ಮ ಜಿಲ್ಲಾ ಅಧ್ಯಕ್ಷ ಆನಂದಾಚಾರಿ, ರಾಚಯ್ಯ, ಧನಂಜಯ, ಕರಡಕೆರೆ ಯೋಗೇಶ್, ಅಣ್ಣೂರು ರಾಜಣ್ಣ, ಕ.ಜೆ.ಗೋವಿಂದರಾಜು, ಮಡೇನಹಳ್ಳಿ ತಿಮ್ಮಯ್ಯ, ಶಿವಲಿಂಗಯ್ಯ, ಗಂಟಯ್ಯ, ಬಾಬು, ಬಸವಾಚಾರಿ ಹಾಗೂ ಇತರರಿದ್ದರು.