ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಆಸ್ತಿ ರು. 29.58 ಕೋಟಿ

| Published : Apr 16 2024, 01:05 AM IST

ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಆಸ್ತಿ ರು. 29.58 ಕೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ 29.58 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ 29.58 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೋಮವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ಬಳಿ ೩ ಲಕ್ಷ ರು. ನಗದು, ಬ್ಯಾಂಕ್ ಹಾಗೂ ಫೈನಾನ್ಸ್‌ಗಳಲ್ಲಿ ೫೧ ಲಕ್ಷ ರು. ಠೇವಣಿ, ಬಾಂಡ್, ವಿವಿಧ ಕಂಪನಿ ಶೇರುಗಳಲ್ಲಿ ೩.೩೦ ಕೋಟಿ ರು. ಹೂಡಿಕೆ, ೧೦ ಲಕ್ಷ ರು. ಸಾಲ ನೀಡಿದ್ದು, ೧.೫೯ ಕೋಟಿ ರು. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಆದರೆ, ಇವರು ಯಾವುದೇ ಸ್ವಂತ ವಾಹನ ಹೊಂದಿಲ್ಲ. ಒಟ್ಟು ೬.೧೨ ಕೋಟಿ ರು. ಮೌಲ್ಯದ ಚರಾಸ್ತಿ ಬೊಮ್ಮಾಯಿ ಅವರ ಬಳಿಯಿದೆ.

೯೬.೮೦ ಲಕ್ಷ ರು. ಮೌಲ್ಯದ ಕೃಷಿ ಜಮೀನು, ೭ ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು, ೬.೩೦ ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡ, ಬೆಂಗಳೂರು ಹಾಗೂ ಶಿಗ್ಗಾವಿಯಲ್ಲಿ ೯.೧೮ ಕೋಟಿ ರು. ಮೌಲ್ಯದ ವಾಸದ ಮನೆ ಸೇರಿದಂತೆ ೨೩.೪೫ ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ೫.೩೧ ಕೋಟಿ ರು. ಸಾಲದ ಹೊರೆಯೂ ಇವರಿಗಿದೆ. ೨೦ ಕೋಟಿ ರು. ಮೌಲ್ಯದ ಪಿತ್ರಾರ್ಜಿತ ಆಸ್ತಿ ಬಸವರಾಜ ಬೊಮ್ಮಾಯಿ ಅವರಿಗೆ ಬಂದಿದ್ದು,

ಪತ್ನಿ ಬಳಿ ೧.೩೨ ಕೋಟಿ ಮೌಲ್ಯದ ಚರಾಸ್ತಿ, ಪುತ್ರಿ ಬಳಿ ೧.೫೩ ಕೋಟಿ ಮೌಲ್ಯದ ಚರಾಸ್ತಿ ಇದೆ.