ಸಾರಾಂಶ
ಮಾಗಡಿ: ಸರ್ಕಾರದಿಂದ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ನಾಯಕ ಡಿ.ದೇವರಾಜು ಅರಸು ಸಮುದಾಯ ಭವನವನ್ನು ನಿರ್ಮಿಸುವ ಮೂಲಕ ದೇವರಾಜು ಅರಸುಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದು ಡಿ.ದೇವರಾಜ ಅರಸು ಸಾಂಸ್ಕೃತಿಕ ವಿಚಾರ ವೇದಿಕೆ ಅಧ್ಯಕ್ಷ ಪಿ.ವಿ.ಸೀತಾರಾಂ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಡಿ.ದೇವರಾಜ ಅರಸು 109ನೇ ಜನ್ಮದಿನಾಚರಣೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಅರಸು ದೂರದೃಷ್ಟಿಯಿಂದಾಗಿ ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ, ಕನ್ನಡಿಗರ ಅಸ್ಮಿತೆಗೆ ಮನ್ನಣೆ ನೀಡಿದರು. ಮಲ ಹೊರುವ ಪದ್ಧತಿ, ಜೀತ ಪದ್ಧತಿ, ದೇವದಾಸಿ ಪದ್ಧತಿಯಂತಹ ಅನಿಷ್ಟಗಳನ್ನು ದೂರ ಮಾಡಿ ದಲಿತ, ಹಿಂದುಳಿದ ಸಮುದಾಯಗಳ ಏಳಿಗೆಗೆ ಶ್ರಮಿಸಿದರು. ಅವರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿ, ದೇವರಾಜ ಅರಸು ಅವರ ಆದರ್ಶಗಳನ್ನು ಮಕ್ಕಳಿಗೆ ಕಲಿಸಿಕೊಡುವ ಮೂಲಕ ಅವರನ್ನು ಯುವಜನತೆಗೆ ಪರಿಚಯಿಸುವ ಅಗತ್ಯವಿದೆ ಎಂದರು.ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಆರ್.ಬಸವರಾಜು, ಸುನಿತಾ, ಸುರೇಶ್, ಮಾರುತಿ ಯಾದವ್, ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಮುನಿಕೃಷ್ಣ, ತಿಗಳರ ಸಂಘದ ಮುಖಂಡರಾದ ಗಂಗರೇವಣ್ಣ, ಶಿವಶಂಕರ್, ಗಾಣಿಗರ ಸಂಘದ ಪವನ್ ಕುಮಾರ್, ಕುಂಬಾರ ಸಂಘದ ವೆಂಕಟೇಶಯ್ಯ, ಅರಸು ಕ್ಷತ್ರಿಯ ಸಂಘದ ಲಕ್ಷ್ಮೀಪತಿರಾಜು, ರಜಪೂತರ ಸಂಘದ ಚಂದ್ರಭಾನುಸಿಂಗ್, ಮರಾಠರ ಸಂಘದ ಈಶ್ವರ್, ಕುರುಬರ ಸಂಘದ ಶಿವಕುಮಾರ್, ತೇಜಸ್ ಕುಮಾರ್, ತಾಲೂಕು ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್, ಸವಿತಾ ಸಮಾಜದ ವೆಂಕಟೇಶ್, ಈಡಿಗರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರಿದ್ದರು.