ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರತಿಷ್ಠಿತ ಸಂಸ್ಥೆ. ಅದನ್ನು ಉಳಿಸಿ ಬೆಳೆಸುವುದು ಕನ್ನಡಿಗರ ಕರ್ತವ್ಯವಾಗಿದೆ. ಆದರೆ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜೋಷಿ ಸಂಘದಲ್ಲಿ ಎಳೆಂಟು ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ ನವೆಂಬರ್ ತಿಂಗಳಲ್ಲಿ ಮುಗಿಯುವ ಹಿನ್ನೆಲೆ ಅಧ್ಯಕ್ಷ ಗಾದಿಯೇರಲು ಅನೇಕ ಆಕಾಂಕ್ಷಿಗಳು ಜಿಲ್ಲಾ ಪ್ರವಾಸ ನಡೆಸಿ ಮತದಾರ ಸದಸ್ಯರಿಗೆ ತಮ್ಮ ಪರಿಚಯ ಮಾಡಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಭಾನುವಾರ ಸಾಹಿತಿ, ಪತ್ರಕರ್ತ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜಾಣಗೆರೆ ವೆಂಕಟರಾಮಯ್ಯ ಜಿಲ್ಲಾ ಪ್ರವಾಸ ಮಾಡಿ ಹಿಂದಿನ ಕಸಾಪ ಅಧ್ಯಕ್ಷರ ಅವಧಿಯಲ್ಲಿ ಕೋಟ್ಯಾಂತರ ರುಪಾಯಿ ಹಣ ಗುಳುಂ ವಿಚಾರ ಹೊರಗಿಟ್ಟರು. ಮತ್ತೊಂದು ಬಾರಿ ಅಂಥವರೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಂಥವರನ್ನು ಗೆಲ್ಲಿಸಬೇಡಿ ಎಂದು ಮನವಿ ಮಾಡಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರತಿಷ್ಠಿತ ಸಂಸ್ಥೆ. ಅದನ್ನು ಉಳಿಸಿ ಬೆಳೆಸುವುದು ಕನ್ನಡಿಗರ ಕರ್ತವ್ಯವಾಗಿದೆ. ಆದರೆ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜೋಷಿ ಸಂಘದಲ್ಲಿ ಎಳೆಂಟು ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಮೇಲಿನ 17 ಆರೋಪಗಳ ಪೈಕಿ 16 ಆರೋಪಗಳು ದೃಢಪಟ್ಟಿವೆ. ಸರ್ಕಾರ ಆತನನ್ನು ವಜಾ ಮಾಡಿ ಆಡಳಿತಾಧಿಕಾರಿಗಳ ನೇಮಕ ಮಾಡಿದ್ದಾರೆ. ಅವರಿಂದ ಗುಳುಂ ಮಾಡಿದ್ಧ ಅಷ್ಟೂ ಹಣ ರಿಕವರಿ ಮಾಡಬೇಕು. ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದು ಸಂಘದ ಬೆಳವಣಿಗೆಗೆ ಶ್ರಮಿಸಿ ಅಬಿವೃದ್ಧಿಪಡಿಸುವ ಬದಲು ನುಂಗಿ ನೀರು ಕುಡಿದ ಆತನನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳಾದ ಗೌರಿಬಿದನೂರಿನ ದಸ್ತಗಿರಿ ಸಾಬ್, ಬಂಡ್ಲಹಳ್ಳಿ ವಿಜಯ್ ಕುಮಾರ್, ಆರ್.ಜಿ.ಹಳ್ಳಿ ನಾಗರಾಜ್, ಸಿ.ಕೆ.ರಾಮೇಗೌಡ, ಪಾವೆಂ ಚಲಪತಿ ಗೌಡ, ಮತ್ತಿತರರು ಇದ್ದರು.