ಬಿ. ಸೋಮಶೇಖರ್‌ಗೆ ಕಾಂಗ್ರೆಸ್ ಟಿಕೆಟ್‌ ನೀಡುವಂತೆ ಮನವಿ

| Published : Feb 16 2024, 01:49 AM IST

ಸಾರಾಂಶ

ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಜಿ. ಮರಹಳ್ಳಿ ರಂಗಸ್ವಾಮಿ ಮಾತನಾಡಿ, ಬಿ. ಸೋಮಶೇಖರ್ ಅವರು ಸಚಿವರಾಗಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನತೆಯ ಮನೆ ಮಾತಾಗಿದ್ದಾರೆ, ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಮಣಿಸಲು ಸೂಕ್ತ ಅಭ್ಯರ್ಥಿ ಬಿ. ಸೋಮಶೇಖರ್ ಅವರಿಗೆ ಎಲ್ಲ ಅರ್ಹತೆಗಳಿವೆ, ಇದನ್ನ ಹೈಕಮಾಂಡ್ ಪರಿಶೀಲಿಸಿ, ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ನಾವುಗಳು ಶ್ರಮವಹಿಸಿ ಗೆಲುವಿಗೆ ಸಹಕಾರಿಯಾಗಲಿದ್ದೇವೆ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ. ಸೋಮಶೇಖರ್ ಅವರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿ ಕೊಡಬೇಕೆಂದು ಮುಖಂಡರು ಹಾಗೂ ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ, ಒತ್ತಾಯಿಸಿದರು.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಿಂದ ನಿಯೋಗ ಬೆಂಗಳೂರಿನ ಮುಖ್ಯಮಂತ್ರಿ ರವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಜಿ. ಮರಹಳ್ಳಿ ರಂಗಸ್ವಾಮಿ ಮಾತನಾಡಿ, ಬಿ. ಸೋಮಶೇಖರ್ ಅವರು ಸಚಿವರಾಗಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನತೆಯ ಮನೆ ಮಾತಾಗಿದ್ದಾರೆ, ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಮಣಿಸಲು ಸೂಕ್ತ ಅಭ್ಯರ್ಥಿ ಬಿ. ಸೋಮಶೇಖರ್ ಅವರಿಗೆ ಎಲ್ಲ ಅರ್ಹತೆಗಳಿವೆ, ಇದನ್ನ ಹೈಕಮಾಂಡ್ ಪರಿಶೀಲಿಸಿ, ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ನಾವುಗಳು ಶ್ರಮವಹಿಸಿ ಗೆಲುವಿಗೆ ಸಹಕಾರಿಯಾಗಲಿದ್ದೇವೆ ಎಂದರು.

ಸೋಮಶೇಖರ್‌ಗೆ ಟಿಕೆಟ್ ನೀಡಿದರೆ ಪ್ರಗತಿಪರ ಸಂಘಟನೆಗಳ ಎಲ್ಲರೂ ಒಗ್ಗೂಡಿ ಅವರನ್ನು ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸಲು ಕಟಿಬದ್ದರಾಗಿ ಕೆಲಸ ಮಾಡುತ್ತೇವೆ ಎಂದರು.

ಎಂಟು ವಿಧಾನಸಭಾ ಕ್ಷೇತ್ರಗಳ ದಸಂಸ, ಪ್ರಗತಿಪರ ಸಂಘಟನೆಗಳು, ರೈತಪರ ಸಂಘಟನೆ, ಅಂಬೇಡ್ಕರ್ ಭೀಮ ಸೇನೆ, ವೀರಶೈವ ಮುಖಂಡರು, ಪ್ರಗತಿಪರ ಚಿಂತಕರು, ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.