ಪಾಂಡವಪುರ ಪುರಸಭೆಯಲ್ಲಿ ಬಿಜೆಪಿ ಸದಸ್ಯ ಎಲ್.ಅಶೋಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಮುಖಂಡರು, ಕಾರ್‍ಯಕರ್ತರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪುರಸಭೆಯಲ್ಲಿ ಬಿಜೆಪಿ ಸದಸ್ಯ ಎಲ್.ಅಶೋಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಮುಖಂಡರು, ಕಾರ್‍ಯಕರ್ತರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂದಿಸಿದರು.

ಪಟ್ಟಣದ ಸಿ.ಎಸ್.ಪುಟ್ಟರಾಜು ನಿವಾಸಕ್ಕೆ ಆಗಮಿಸಿದ ಬಿಜೆಪಿ ಕಾರ್‍ಯಕರ್ತರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜುರನ್ನು ಅಭಿನಂದಿಸಿ ಎನ್‌ಡಿಎ ಮೈತ್ರಿ ಪಾಲನೆ ಮಾಡಿದಕ್ಕೆ ಧನ್ಯವಾದ ಅರ್ಪಿಸಿದರು. ಮಾಜಿ ಸಚಿವರು ಕೂಡ ಎಲ್.ಅಶೋಕ್ ಅವರನ್ನು ಅಭಿನಂದಿಸಿದರು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಗಳನವೀನ್‌ಕುಮಾರ್, ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಎಸ್‌ಎನ್‌ಟಿ ಸೋಮಶೇಖರ್, ಚಿಕ್ಕಮರಳಿ ನವೀನ್, ಶ್ರೀನಿವಾಸ್‌ನಾಯ್ಕ, ನರಸಿಂಹಚಾರಿ, ಸೋಮಾಚಾರಿ, ಡೇರಿರಾಮು ಸೇರಿದಂತೆ ಹಲವರು ಇದ್ದರು.ಪರಿಸರಯುಕ್ತ ಗಣಪತಿ ಪ್ರತಿಷ್ಠಾಪಿಸಿ, ಪೂಜಿಸಿ: ಡಿ.ಸಿ.ತಮ್ಮಣ

ಭಾರತೀನಗರ:ಉತ್ತಮ ಪರಿಸರ ಕಾಪಾಡುವ ದೃಷ್ಟಿಯಿಂದ ಮನೆಯಲ್ಲೇ ಅರಿಶಿಣ ಅಥವಾ ಮಣ್ಣಿನಿಂದ ಮಾಡಿದ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜಣೆ ಮಾಡೋಣ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಗಣೇಶ ಉತ್ಸವ ಹಿಂದುಗಳ, ಹೆಣ್ಣುಮಕ್ಕಳಿಗೆ ಬಹಳ ಪ್ರೀತಿಯ ಹಬ್ಬ. ಗಣೇಶ ಎಂದರೆ ವಿಘ್ನನಿವಾರಕ ಹಾಗೂ ಜ್ಞಾನದಾಯಕ. ಹಾಗಾಗಿ ಪ್ರತಿಯೊಬ್ಬರು ಭಕ್ತಿಯಿಂದ ಪ್ರತಿವರ್ಷ ಆಚರಣೆ ಮಾಡುತ್ತಾ ಬಂದಿದ್ದಾರೆ ಎಂದರು. ಪವಿತ್ರ ಗಣೇಶ ಹಬ್ಬವನ್ನು ಎಲ್ಲಾ ಜನಾಂಗದವರು ಗ್ರಾಮಗಳಲ್ಲಿ ಸೌಹಾರ್ದತೆಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿ ಗ್ರಾಮದಲ್ಲಿ ಶಾಂತಿ ಕಾಪಾಡಬೇಕು. ರಾಸಾಯನಿಕ ಗಣಪತಿ ತಿರಸ್ಕರಿಸಿ, ಪರಿಸರಯುಕ್ತ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದ್ದಾರೆ.