ಗ್ರಾಮಸ್ಥರು ಸಿ.ಎಸ್.ಪುಟ್ಟರಾಜು ಅವರ ಅಭಿಮಾನಿಗಳ ಬಳಗದ ನಾಮಫಲಕ ಸ್ಥಾಪನೆ ಮಾಡಿರುವುದು ಅವರ ಪ್ರೀತಿ, ವಿಶ್ವಾಸಕ್ಕೆ ಇಟ್ಟಿರುವ ಕೈಗನ್ನಡಿಯಾಗಿದೆ.
ಪಾಂಡವಪುರ: ಪಟ್ಟಣದ ಹಾರೋಹಳ್ಳಿಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಮಾನಿಗಳ ಬಳಗದ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ನಾಮಫಲಕ ಅನಾವರಣಗೊಳಿಸಿದ ಸಿ.ಎಸ್.ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜು ಮಾತನಾಡಿ, ಗ್ರಾಮಸ್ಥರು ಸಿ.ಎಸ್.ಪುಟ್ಟರಾಜು ಅವರ ಅಭಿಮಾನಿಗಳ ಬಳಗದ ನಾಮಫಲಕ ಸ್ಥಾಪನೆ ಮಾಡಿರುವುದು ಅವರ ಪ್ರೀತಿ, ವಿಶ್ವಾಸಕ್ಕೆ ಇಟ್ಟಿರುವ ಕೈಗನ್ನಡಿಯಾಗಿದೆ. ಗ್ರಾಮಸ್ಥರ ಈ ಪ್ರೀತಿ, ವಿಶ್ವಾಸಕ್ಕೆ ಎಂದೆಂದಿಗೂ ಚಿರ ಋಣಿಯಾಗಿರುತ್ತೇವೆ. ಜನರ ಸೇವೆಗೆ ಸದಾ ಸಿದ್ಧರಿದ್ದೇವೆ ಎಂದರು. ಈ ವೇಳೆ ಜೆಡಿಎಸ್ ಮುಖಂಡರಾದ ಎಚ್.ಎಲ್.ನಂಜೇಗೌಡ, ನಾರಾಯಣಗೌಡ, ಕಾಳುಕಡ್ಡಿ ಸತೀಶ್, ಶ್ರೀನಿವಾಸ್, ಬಾಲೇಗೌಡ, ಚಿಕ್ಕಾಡೆ ರವಿ, ಹಾರೋಹಳ್ಳಿ ನವೀನ್, ಹರಳಹಳ್ಳಿ ಅಮ್ಮರ ಸತೀಶ್, ಪಟೇಲ್ ಕೃಷ್ಣೇಗೌಡ, ಪುರಸಭೆ ಮಾಜಿ ಸದಸ್ಯ ಸೋಮಶೇಖರ್, ಜೆಡಿಎಸ್ ಯುವ ಮುಖಂಡರಾದ ಪವನ್, ರೇವಣ್ಣ, ರಘು, ಮಂಜ ಅಪ್ಪು ರವಿ, ಡೈಮಂಡ್ ರವಿ, ಜಯರಾಂ, ಪುನೀತ್, ಬೇಬಿ ಅಭಿ, ಗಿರೀಶ್, ನಂದಿ, ಆಟೋ ಮಂಜು, ಪಟ್ಟಸೋಮನಹಳ್ಳಿ ಪಾಂಡು ಸೇರಿದಂತೆ ಇತರರು ಇದ್ದರು. ಈ ವೇಳೆ ಸಿ.ಪಿ.ಶಿವರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.