ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಜನಾಕ್ರೋಶ ಇದಿಯೋ ಇಲ್ಲವೋ ಎಂಬುವುದನ್ನು ಕಾಲವೇ ನಿರ್ಧರಿಸಲಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.ರಾಯಚೂರು ಪ್ರವಾಸ ಕೈಗೊಂಡಿದ್ದ ಅವರು, ಮಂತ್ರಾಲಯಕ್ಕೆ ಭೇಟಿ ನೀಡಿ ಗುರುವಾರ ಮಾತನಾಡಿದರು. ಪ್ರಸ್ತುತ ರಾಜಕೀಯ ಬೆಳವಳಿಗೆ ಕುರಿತು ಏನನ್ನು ಹೇಳುವ ಶಕ್ತಿಯಿಲ್ಲ. ಕಾಂಗ್ರೆಸ್‌ಗೆ ಜನರು ಐದು ವರ್ಷ ಅಧಿಕಾರ ನೀಡಿದ್ದಾರೆ. ಸರ್ಕಾರ ಏನು ಮಾಡುತ್ತದೆ ಎಂಬುವುದನ್ನು ನೋಡೋಣ, ಈಗಾಗಲೇ ಐದು ಗ್ಯಾರಂಟಿ ಘೋಷಿಸಿರುವ ಸರ್ಕಾರ ಆರನೇ ಮತ್ತು ಏಳನೇ ಗ್ಯಾರಂಟಿಗಳ ಬಗ್ಗೆಯೂ ಹೇಳಿಕೆಗಳನ್ನು ನೀಡುತ್ತಿದೆ. ಪದೇ ಪದೇ ವಿದ್ಯುತ್ ದರ ಏರಿಕೆ ಮಾಡಲಾಗುತ್ತಿದೆ. ರಾಜ್ಯದ ರೈತರು ಹಾಗೂ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆಹಾಕಿ ಗ್ಯಾರಂಟಿಗೆ ದುಡ್ಡು ಕೊಡುತ್ತಿದ್ದಾರೆ ಎಂದು ದೂರಿದರು.ಬೆಂಗಳೂರಿನಲ್ಲಿ ಧಾರಾಕಾರ ಮಳೆ ಲೆಕ್ಕಿಸದೇ ಕಾಂಗ್ರೆಸ್ ಸರ್ಕಾರ ಸಮಾವೇಶ ಮಾಡಿದ ವಿಚಾರಕ್ಕೆ ಉತ್ತರಿಸಿದ ರೇವಣ್ಣ, ರಾಜ್ಯದ ಜನರಿಗೇ ಬಿಡಲಾಗಿದೆ. ಸರ್ಕಾರ ಎರಡು ವರ್ಷ ಏನು ಕೆಲಸ ಮಾಡಿದೆ ಎಂಬುವುದನ್ನು ಅವರೇ ತೀರ್ಮಾನಿಸಲಿದ್ದಾರೆ ಎಂದರು.ಗ್ರೇಟರ್ ಬೆಂಗಳೂರು ಮಾಡುತ್ತಾರೋ ಇನ್ನೇನೋ ಮಾಡುತ್ತಾರೋ ಮಾಡಲಿ, ಜನರ ಸಂಕಷ್ಟಕ್ಕೆ ಮೊದಲು ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕು. ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ನಾಶವಾಗಿದ್ದು ಸರ್ಕಾರ ತಕ್ಷಣ ಪರಿಹಾರ ನಿಡಬೇಕು ಎಂದ ಅವರು ಗೃಹಲಕ್ಷ್ಮೀ ಹಣದ ವಿಚಾರವಾಗಿ ಪ್ರತಿಕ್ರಿಯಿಸಲು ಶಕ್ತಿಯಿಲ್ಲ ಎಂದು ಹೇಳಿದರು.ರಾಯಚೂರು ಜಿಲ್ಲೆಯೊಂದರಲ್ಲಿಯೇ ಸುಮಾರು ಒಂದು ಲಕ್ಷ ಎಕರೆ ಭತ್ತ ಬೆಳೆ ಮಳೆಯಿಂದ ಹಾನಿಯಾಗಿದೆ. ಬೆಳೆ ಹಾನಿಗೆ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಭತ್ತ ಬೆಳೆಯುವುದನ್ನೇ ಕೈ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತಕ್ಕೆ ಬೆಲೆ ಕುಸಿದು ಖರೀದಿ ನಡೆದಿಲ್ಲ. ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ರೇವಣ್ಣನವನ್ನು ಯಾರು ಕುಗ್ಗಿಸುವದಕ್ಕೆ ಆಗುವದಿಲ್ಲ. ದೇವರು, ಜನತೆ ಮಾತ್ರ ಕುಗ್ಗಿಸಬಹುದು. ಕಾಲ ಬರುತ್ತೆ ಎಲ್ಲವನ್ನು ರಾಜ್ಯದ ಜನತೆ ಮುಂದೆ ಸವಿಸ್ತಾರವಾಗಿ ಹೇಳುವೆ. ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ರೈತರ ಸಂಕಷ್ಟದ ಕುರಿತು ಮಾಹಿತಿ ಪಡೆದಿರುವದಾಗಿ ತಿಳಿಸಿದರು.ಮಂತ್ರಾಲಯದ ಭೇಟಿಯ ವಿಶೇಷತೆಯಿಲ್ಲ, ಕೆಲವು ಶಕ್ತಿಗಳನ್ನು ದಮನ ಮಾಡಲು ದೇವರ ಹತ್ತಿರ ಹೋಗಬೇಕಲ್ವಾ? ಆ ಕೆಲಸವನ್ನು ಮಾಡುತ್ತಿದ್ದು, ಯಾವ ಶಕ್ತಿ ಕಾಡುತ್ತಿಲ್ಲ. ದೈಶ-ಜನಶಕ್ತಿ ಇರೋತನಕ ಯಾವ ಶಕ್ತಿ ಕಾಡಲ್ಲ ಸಾಮಾನ್ಯವಾಗಿ ದೇವಸ್ಥಾನಗಳಿಗೆ ಬರುವಂತೆಯೇ ರಾಯರ ಮಠಕ್ಕೆ ಆಗಮಿಸಿರುವುದಾಗಿ ತಿಳಿಸಿದರು.ಈ ವೇಳೆ ಪಕ್ಷದ ಮುಖಂಡರು,ಕಾರ್ಯಕರ್ತರು ಇದ್ದರು.---- 22ಕೆಪಿಆರ್‌ಸಿಆರ್ 05: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ರನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.