ಕನ್ನಡಪ್ರಭವಾರ್ತೆ ನುಗ್ಗೇಹಳ್ಳಿ

ತಾಲೂಕಿನ ಕಾಂಗ್ರೆಸ್ ಧುರೀಣರು ಮಾಜಿ ಸಚಿವರಾದ ಎಚ್. ಸಿ. ಶ್ರೀಕಂಠಯ್ಯನವರ 100ನೇ ಜನ್ಮದಿನದ ಅಂಗವಾಗಿ ಹೋಬಳಿ ಕೇಂದ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ಜನ್ಮದಿನವನ್ನು ಆಚರಿಸಿದರು.ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಲಲಿತ ರಾಘವ ದೀಪು ಅಭಿಮಾನಿಗಳ ಸಂಘ ಹಾಗೂ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳು ಮಾಜಿ ಸಚಿವರಾದ ಎಚ್ ಸಿ ಶ್ರೀಕಂಠಯ್ಯನವರ 100ನೇ ಜನ್ಮದಿನದ ಪ್ರಯುಕ್ತ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲುಗಳು ಮತ್ತು ಬ್ರೆಡ್ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ಹೋಬಳಿ ಕೇಂದ್ರದ ಯಂಗ್ ಸ್ಟಾರ್ ವಾಲಿಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೋಬಳಿ ವ್ಯಾಪ್ತಿಯ ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಿಸಲಾಯಿತು. ಲಲಿತ ರಾಘವ ದೀಪು ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿವಂಗತ ಶ್ರೀಕಂಠಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಹೋಬಳಿ ಕಾಂಗ್ರೆಸ್ ಯುವ ಮುಖಂಡ ಹುಲಿಕೆರೆ ಶಿವಸ್ವಾಮಿ ಮಾತನಾಡಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದರೆ ಅದು ಶ್ರೀಕಂಠಯ್ಯನವರ ಕಾಲದಲ್ಲಿ ಮಾತ್ರ ಅವರ ದೂರದೃಷ್ಟಿ ಪರಿಣಾಮ ತಾಲೂಕಿನಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆ ಪಿಎಲ್‌ಡಿ ಬ್ಯಾಂಕ್ ಸ್ಥಾಪನೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಪ್ರಾರಂಭ ಸೇರಿದಂತೆ ಅನೇಕ ಸಂಘಸಂಸ್ಥೆಗಳನ್ನು ತೆರೆಯುವ ಮೂಲಕ ಇಂದು ತಾಲೂಕು ಅಭಿವೃದ್ಧಿ ಪಥದಲ್ಲಿ ಇರಲು ಅವರ ದೃಷ್ಟಿಯೇ ಕಾರಣ ಅವರ ಮೊಮ್ಮಗ ಲಲಿತ ರಾಘವಾ ದೀಪು ತಾತನ ರಾಜಕೀಯ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಮೂಲಕ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸುಹಾಸ್, ಡಾ. ರಮ್ಯಾ, ಮಾಜಿ ತಾಪಂ ಅಧ್ಯಕ್ಷ ಎಚ್ಎಮ್ ಜಯರಾಮ್, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವೇಣುಗೋಪಾಲ್, ಮುಖಂಡರುಗಳಾದ ಜಂಬೂರು ಕುಮಾರಸ್ವಾಮಿ, ಬಾಣನಕೆರೆ ಕುಮಾರಣ್ಣ, ಅಶೋಕ್, ಮುದ್ದನಹಳ್ಳಿ ರಮೇಶ್, ರಾಮಕೃಷ್ಣ, ಕಾರೇಕೆರೆ ಕುಮಾರ್‌, ಅವೇರಹಳ್ಳಿ ವೇಣು, ಬಂಡೆಕೆರಿ ಮಹೇಶ್, ಎಂ ದಾಸಾಪುರ ಜ್ಞಾನ ಪ್ರಕಾಶ್, ಬಸವನಪುರ ಬಾಬು, ಶಿವ ಸ್ವಾಮಿ, ವಿರುಪಾಕ್ಷಪುರ ಧನಂಜಯ್, ಬೇಲೂರಯ್ಯ, ಧರ್ಮಪಾಲ್, ರಮೇಶ್, ಸಂಗಮ್, ನಾಗರಾಜ್, ಜಮ್ಮು, ಸೋಮಶೇಖರ್, ಸೇರಿದಂತೆ ಇತರರು ಹಾಜರಿದ್ದರು.