ಸಾರಾಂಶ
ಗ್ರಾಮದ ಯುವಕರನ್ನು ಶಾಲು ಹೊದಿಸಿ ಅಭಿನಂದಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರದ ಕುರಿತು ಚರ್ಚಿಸಿದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ನೆರಿಯ ಗ್ರಾಮ ಪಂಚಾಯತಿಯ ಬಾಂಜಾರುಮಲೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಎಸ್. ಶುಕ್ರವಾರ ಭೇಟಿ ನೀಡಿದರು.ಚಾರ್ಮಾಡಿ ಹೆದ್ದಾರಿಯಿಂದ ಸುಮಾರು 11 ಕಿ.ಮೀ. ದೂರದ ದುರ್ಗಮ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನ (111 ಮತಗಳು) ಚಲಾವಣೆಯದ ಮತಗಟ್ಟೆ ಇದಾಗಿದ್ದು, ಗ್ರಾಮದಿಂದ ಹೊರಗೆ ವಾಸಿಸುತ್ತಿರುವ ವ್ಯಕ್ತಿಗಳು ಸಹ ದೂರದಿಂದ ಬಂದು ಮತ ಚಲಾಯಿಸಿರುವುದು ವಿಶೇಷ ಎಂದು ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಗ್ರಾಮದ ಯುವಕರನ್ನು ಶಾಲು ಹೊದಿಸಿ ಅಭಿನಂದಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರದ ಕುರಿತು ಚರ್ಚಿಸಿದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ವಿಶ್ವನಾಥ್, ಸ್ಥಳೀಯರಾದ ಸುಜಿತ್, ಲೋಕೇಶ್, ಲಕ್ಷ್ಮಣ, ರಮೇಶ್, ಚಂದ್ರಶೇಖರ್, ವಿಘ್ನೇಶ್, ಶೇಖರ್ ಮತ್ತಿತರಿದ್ದರು.