ಸಾರಾಂಶ
ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿಯವರ ಆಸ್ತಿ ಮೌಲ್ಯ ₹1.15 ಕೋಟಿ.
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿಯವರ ಆಸ್ತಿ ಮೌಲ್ಯ ₹1.15 ಕೋಟಿ.ಖಾದ್ರಿ ಬಳಿ ₹50 ಸಾವಿರ ನಗದು ಇದೆ. ₹30 ಲಕ್ಷ ಮೌಲ್ಯದ ಟೊಯೋಟಾ ಕಾರಿದೆ. ಶಿಗ್ಗಾಂವಿ ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ₹25 ಲಕ್ಷ ಮೌಲ್ಯದ 17 ಎಕರೆ ಕೃಷಿ ಭೂಮಿಯಿದೆ. ಹುಲಗೂರು ಗ್ರಾಮದಲ್ಲಿ ಮನೆ, ಹುಬ್ಬಳ್ಳಿಯಲ್ಲಿ ಪ್ಲಾಟ್, ಬೆಂಗಳೂರಿನಲ್ಲಿ ಬಿಡಿಎಯಲ್ಲಿ ನಿವೇಶನ ಹೊಂದಿದ್ದು, ಇವುಗಳ ಮೌಲ್ಯ 84 ಲಕ್ಷ ರು. ಎಂದು ತಿಳಿಸಿದ್ದಾರೆ.
16 ಲಕ್ಷ ರು. ಸಾಲ ಮಾಡಿಕೊಂಡಿದ್ದಾರೆ. ಹುಲಗೂರು ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಒಂದು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದಿಂದಜಿದಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇವರ ಪತ್ನಿ ಬಳಿ ₹10 ಸಾವಿರ ನಗದು, ₹1.20 ಲಕ್ಷ ಮೌಲ್ಯದ ಚಿನ್ನಾಭರಣವಿದೆ.