ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಶಾಸಕ ನರೇಂದ್ರ ಭೇಟಿ

| Published : May 05 2024, 02:09 AM IST / Updated: May 05 2024, 02:10 AM IST

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಶಾಸಕ ನರೇಂದ್ರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಬಿದ್ದ ಗುಡುಗು ಸಹಿತ ಮಳೆಗೆ ಹಾನಿಯಾಗಿದ್ದ ಪ್ರದೇಶಗಳಿಗೆ ಮಾಜಿ ಶಾಸಕ ಆರ್ ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹನೂರು: ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಬಿದ್ದ ಗುಡುಗು ಸಹಿತ ಮಳೆಗೆ ಹಾನಿಯಾಗಿದ್ದ ಪ್ರದೇಶಗಳಿಗೆ ಮಾಜಿ ಶಾಸಕ ಆರ್ ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಹನೂರು ತಾಲೂಕಿನ ಶಾಗ್ಯ ಗ್ರಾಪಂ ವ್ಯಾಪ್ತಿಯ ಬೀರೂಟ ಗ್ರಾಮದ ರತ್ನಮ್ಮ ಎಂಬವರಿಗೆ ಸೇರಿದ ಮೂರು ಎಮ್ಮೆ ಸಿಡಿಲಿಗೆ ಬಲಿಯಾಗಿತ್ತು. ಜೀವನಕ್ಕೆ ಆಧಾರವಾಗಿದ್ದ ಮೂರು ಎಮ್ಮೆ ಕಳೆದುಕೊಂಡು ಗೋಳಾಡುವ ದೃಶ್ಯ ಮನಕುಲವಂತಿತ್ತು, ಇದಲ್ಲದೆ ಕುರಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯ ಚೆನ್ನೂರು ಗ್ರಾಮದಲ್ಲಿಯೂ ಗುರುವಾರ ರಾತ್ರಿ ಬೆಳೆದ ಸಿಡಿಲಿಗೆ 3 ಹಸುಗಳು ಮೃತಪಟ್ಟಿದ್ದ ಹಿನ್ನೆಲೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಆದಷ್ಟು ಬೇಗ ಪರಿಹಾರ ನೀಡುವಂತೆ ಚರ್ಚೆ ನಡೆಸಿದ್ದೇನೆ . ಅವರು ಸಹ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ದಾಖಲಾತಿ ಒದಗಿಸಿದ ನಂತರ ಒಂದು ಹಸುವಿಗೆ 32 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಇನ್ನು ತಾಲೂಕು ವ್ಯಾಪ್ತಿಯ ಪುಷ್ಪಾಪುರ ಗ್ರಾಮದ ಶಾಂತಿ ಸಗಾಯ ಮೇರಿರವರ ಮನೆ ಸಂಪೂರ್ಣ ಹಾನಿಯಾಗಿದೆ, ಸವರಿಯಮ್ಮ, ನಿರ್ಮಲಾ ಮೇರಿ, ಸೆಲ್ವರಾಜ್, ಲೂರ್ದು ಮೇರಿ, ಮೋಕ್ಷ ರಾಕಿಣಿ, ಮರಿಯಮಂಗಲ ಗ್ರಾಮದ ವೆರೋನಿಕಾ, ದೇವದಾಸ್, ಸಾಯಮೇರಿ, ಜಯರಾಕಿಣಿ, ಕೊಳಂದೆಯಮ್ಮ, ಗೋವಿಂದಮ್ಮ, ಮುನಿಯಮ್ಮ, ಕರಿಯಪ್ಪ ಎಂಬುವರ ಮನೆಗಳು ಗುರುವಾರ ಬಿದ್ದ ಗಾಳಿ ಮಳೆಗೆ ಮೇಲ್ಚಾವಣಿ ಹಾರಿಹೋಗಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರು ಸಹ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ನಂತರ ಅವರಿಗೂ ಸಹ ಪರಿಹಾರ ಸಿಗಲಿದೆ ಈ ಬಗ್ಗೆ ಅಧಿಕಾರಿಗಳಿಗೆ ಆದಷ್ಟು ಬೇಗ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.ಹೂಗ್ಯಂ, ಮಿಣ್ಯಂ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 100 ಎಕರೆಗೂ ಹೆಚ್ಚು ಬಾಳೆ ಬೆಳೆ ನೆಲ ಕಚ್ಚಿದೆ ಇದಲ್ಲದೆ ಹೊನ್ನಮ್ಮ ಎಂಬುವರಿಗೆ ಸೇರಿದ ಗೋಡೆ ಕುಸಿದಿದ್ದು, ಮಾದಮ್ಮ ಮನೆಯ ಮೇಲ್ಚಾವಣಿ, ದುಂಡಮ್ಮ ಎಂಬುವರ ಶೀಟ್ ಮನೆಯ ಸಹ ದುರಸ್ತಿಯಾಗಿದೆ. ಇವರಿಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪರಿಶೀಲನೆ ವೇಳೆ ಶಾಗ್ಯ ಗ್ರಾಪಂ ಅಧ್ಯಕ್ಷ ವೀರತಪ್ಪ, ಮಾಜಿ ಅಧ್ಯಕ್ಷ ಜಾನ್ ಪೌಲ್, ಸದಸ್ಯ ಯೋಗೇಶ್, ತಾಪಂ ಮಾಜಿ ಸದಸ್ಯ ಜವಾದ್ ಅಹಮದ್, ಮುಖಂಡ ಹುಚ್ಚಿರಪ್ಪ, ಬಸವರಾಜು, ಮಲ್ಲೇಶ್ ಹಾಜರಿದ್ದರು.