ಸಾರಾಂಶ
ಕಡೂರು ಬ್ಲಾಕ್ ಕಾಂಗ್ರೆಸ್ ನಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆ.ಎಸ್.ಆನಂದ್
ಕನ್ನಡಪ್ರಭ ವಾರ್ತೆ, ಕಡೂರುತಮ್ಮ ಸರಳ ನಡವಳಿಕೆ ಹಾಗೂ ಹೋರಾಟದ ಮನೋಭಾವದಿಂದ ಶಾಸಕರಾಗಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಕಡೂರು ಬ್ಲಾಕ್ ಕಾಂಗ್ರೆಸ್ ನಿಂದ ಆಯೋಜಿಸಿದ್ದ ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ ಮಾತನಾಡಿ, ತರೀಕೆರೆ ಕ್ಷೇತ್ರದ ಶಾಸಕರಾಗಿ ಅನೇಕ ಜನಮುಖಿ ಕಾರ್ಯಗಳೊಂದಿಗೆ ಸೇವೆ ಸಲ್ಲಿಸಿದ್ದರು. ಹೋರಾಟದ ಹಾದಿಯಲ್ಲಿ ರಾಜಕಾರಣಕ್ಕೆ ಧುಮುಕಿ ಜನಮನ್ನಣೆ ಗಳಿಸಿದ್ದರು ಎಂದರು. ಇದೇ ಸಂದರ್ಭದಲ್ಲಿ ಸಖರಾಯಪಟ್ಟಣದ ಜನಪರ ನಿಲುವು ಹೊಂದಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಕೆ. ಕಲ್ಮುರಡಪ್ಪ ಅವರ ನಿಧನಕ್ಕೂ ಸಂತಾಪ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿಗಳಾದ ಕಲ್ಮರುಡಪ್ಪನವರ ನಿಧನವೂ ಕೂಡ ಪಕ್ಷಕ್ಕೆ ಮತ್ತು ನಮ್ಮೆಲ್ಲರಿಗೂ ನಷ್ಟವಾಗಿದೆ. ಅವರ ಕುಟುಂಬಗಳಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಮುಖಂಡರಾದ ಹೋಚಿಹಳ್ಳಿ ಭೋಗಪ್ಪ, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಅಬಿದ್‌ಪಾಷಾ, ತಿಪ್ಪೇಶಪ್ಪ, ಕೃಷ್ಣಪ್ಪ, ಚನ್ನಪ್ಪ, ಮಂಜುನಾಥ್, ಹಳೇಪೇಟೆ ಕೆ.ಎಸ್.ತಿಪ್ಪೇಶ್, ಪಂಚಾಕ್ಷರಿ, ಧರ್ಮರಾಜ್, ದಿನೇಶ್, ಗೋವಿಂದ್ ಮತ್ತಿತರಿದ್ದರು.
12ಕೆಕೆಡಿಯು1.ಕಡೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಮಾಜಿ ಶಾಸಕ ಟಿ.ಎಚ್.ಶಂಕರಪ್ಪ ನಿಧನದ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಚಂದ್ರಮೌಳಿ, ಹೋಚಿಹಳ್ಳಿ ಭೋಗಪ್ಪ, ಪಂಚಾಕ್ಷರಿ, ಶ್ರೀನಿವಾಸ್‌ಮೂರ್ತಿ ಮತ್ತಿತರಿದ್ದರು.