ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುತಾಲೂಕಿನ ಧನಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ. ಗುರುಸ್ವಾಮಿ, ಉಪಾಧ್ಯಕ್ಷೆಯಾಗಿ ಕೆಂಪಮ್ಮ ತಲಾ 8 ಮತಗಳನ್ನು ಪಡೆದು ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರತಿಸ್ಪರ್ಧಿ ಮಹೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾದೇವ್ ತಲಾ 5 ಮತಗಳನ್ನು ಪಡೆದು ಪರಾಜಿತರಾದರು.ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಮುಡಾ ಮಾಜಿ ಅಧ್ಯಕ್ಷ ಕೆ. ಮರೀಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪ್ರತಿ ಗ್ರಾಪಂಯಲ್ಲಿಯೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಬೇಕು ಎಂದು ಆದೇಶಿಸಿದ ಹಿನ್ನೆಲೆ, ಮೈಸೂರು ತಾಲೂಕಿನಲ್ಲಿ ಹೊಸದಾಗಿ ಮೂರು ಸಂಘಗಳನ್ನು ಸ್ಥಾಪಿಸಲಾಗಿದೆ. ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕಾದರೆ ಸಹಕಾರ ಸಂಘಗಳ ಪಾತ್ರ ಬಹಳ ಮುಖ್ಯವಾಗಿದ್ದು, ಧನಗಳ್ಳಿಯಲ್ಲಿ ಸಹಕಾರ ಬ್ಯಾಂಕ್ ಅನ್ನು ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡಿ ಎಲ್ಲಾ ಸದಸ್ಯರು ಹಾಗೂ ನಿರ್ದೇಶಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಉತ್ತಮವಾಗಿ ಬೆಳೆಸಿಕೊಂಡು ಹೋಗಿ ಎಂದರು.ಸಂಘದ ನೂತನ ಅಧ್ಯಕ್ಷ ಬಿ. ಗುರುಸ್ವಾಮಿ ಮಾತನಾಡಿ, ಸಂಘದ ಎಲ್ಲ ಸದಸ್ಯರು ಹಾಗೂ ನಿರ್ದೇಶಕರುಗಳ ಸಹಕಾರದಿಂದ 2ನೇ ಬಾರಿಗೆ ಅಧ್ಯಕ್ಷನಾಗಿದ್ದೇನೆ. ನಾನು ಅಧ್ಯಕ್ಷನಾದ ಮೇಲೆ ಸಂಘಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಸುಮಾರು 6 ಕೋಟಿ ರು. ಗಳನ್ನು ರೈತರಿಗೆ ಸಾಲವನ್ನು ನೀಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಶೀರ್ವಾದದಿಂದ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ನಿರ್ದೇಶಕರಾದ ಚಿಕ್ಕಣ್ಣ, ಅಂದಾನಿ, ನಾಗೇಶ್, ಚಂದ್ರು, ದೊಡ್ಡತಾಯಮ್ಮ, ಮುಖಂಡರಾದ ಸಿ.ಎಂ. ಸಿದ್ದರಾಮೇಗೌಡ, ಜಿ.ಕೆ. ಬಸವಣ್ಣ, ಉದ್ಬೂರು ಕೃಷ್ಣ, ಕೇರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಕೋಟೆಹುಂಡಿ ಮಹಾದೇವ, ಬಿ. ರವಿ, ಸಾಲುಂಡಿ ಮಹಾದೇವ, ಗಡ್ಡಬಸಪ್ಪ, ಚಂದ್ರ, ಧನಗಳ್ಳಿ ಬಸವರಾಜು, ರಾಜೇಗೌಡ, ಕೃಷ್ಣಮೂರ್ತಿ, ಸಿದ್ದರಾಜು, ರವಿಶಂಕರ್, ಜಿ.ಎಸ್. ಬಸವರಾಜು, ಮಹೇಶ್, ಸುರೇಶ್, ಕುಮಾರ್, ಶಂಕರೇಗೌಡ, ಹನುಮಂತ, ಬೀರಲಿಂಗು, ಜಿ.ಎಂ. ಸಿದ್ದರಾಮೇಗೌಡ, ನಂಜುಂಡೇಗೌಡ, ತಮಡಿಗೌಡ, ಶಂಕರನಾಯ್ಕ, ರಾಕೇಶ್, ಶಿವಣ್ಣ, ಪಾಪೇಗೌಡ, ಸಿಇಒ ಮಾಲೇಗೌಡ, ಚುನಾವಣಾಧಿಕಾರಿ ರಮೇಶ್, ಗಿರೀಶ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))