ಬಿಜೆಪಿ ಸಂಘಟನೆಗೆ ಮಾಜಿ ಪ್ರಧಾನಿ ವಾಜಪೇಯಿ ಸದಾ ಸ್ಫೂರ್ತಿ: ಸದಾಶಿವು

| Published : Feb 24 2025, 12:31 AM IST

ಬಿಜೆಪಿ ಸಂಘಟನೆಗೆ ಮಾಜಿ ಪ್ರಧಾನಿ ವಾಜಪೇಯಿ ಸದಾ ಸ್ಫೂರ್ತಿ: ಸದಾಶಿವು
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಕಾರ್ಯಕರ್ತರಾದ ಡಿ.ವಿ.ನಾರಾಯಣಶರ್ಮ, ಎಂ.ಪಿ.ನಾಗರಾಜ್, ಕೆ.ಮೋಹನ್‌ಕುಮಾರ್, ಕೆ.ವಿ.ರಾಜಣ್ಣ, ಕೆ.ಮಲ್ಲಿಕಾರ್ಜುನ್ ಅವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಯ್ಯ ಹಾಗೂ ಮುಖಂಡರು ಮನೆಗಳಿಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಮಾಜಿ ಪ್ರಧಾನ ಮಂತ್ರಿ, ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಜನಸಂಘ ಮತ್ತು ಬಿಜೆಪಿ ಕಾರ್ಯಕ್ರಮಗಳಲ್ಲಿ ವಾಜಪೇಯಿ ಅವರೊಂದಿಗೆ ಒಡನಾಟ, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನಗರದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಹಿರಿಯ ಕಾರ್ಯಕರ್ತರಾದ ಡಿ.ವಿ.ನಾರಾಯಣಶರ್ಮ, ಎಂ.ಪಿ.ನಾಗರಾಜ್, ಕೆ.ಮೋಹನ್‌ಕುಮಾರ್, ಕೆ.ವಿ.ರಾಜಣ್ಣ, ಕೆ.ಮಲ್ಲಿಕಾರ್ಜುನ್ ಅವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಯ್ಯ ಹಾಗೂ ಮುಖಂಡರು ಮನೆಗಳಿಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಚಾಲಕ ಸದಾಶಿವು, ರಾಮಕೃಷ್ಣಯ್ಯ, ಅಧಿಕಾರ,ಸ್ವಾರ್ಥದ ಕೆಲಸಗಳಿಗಾಗಿ ಆಸೆ ಪಡದೆ ಪಕ್ಷ ಸಂಘಟನೆ ಮಾತ್ರವೇ ಮುಖ್ಯವೆಂದು ಹಿರಿಯರು ದುಡಿದಿದ್ದರ ಫಲವಾಗಿಯೇ ಇಂದು ಕೇಂದ್ರದಲ್ಲಿ ಬಿಜೆಪಿ ಮೂರು ಬಾರಿ ಆಡಳಿತ ನಡೆಸಲು ಸಾಧ್ಯವಾಗಿದೆ. ನಿಸ್ವಾರ್ಥ ಬಿಜೆಪಿ ಕಾರ್ಯಕರ್ತರ ನಿಸ್ವಾರ್ಥ ಸೇವೆಗೆ ಸ್ಫೂರ್ತಿಯಾಗಿದ್ದ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ಇಡೀ ದೇಶದಲ್ಲಿ ಅವರ ಒಡನಾಡಿಗಳಾಗಿದ್ದ ಹಿರಿಯ ಕಾರ್ಯಕರ್ತರನ್ನು ಗುರುತಿಸಿ ಅಭಿನಂದಿಸಲಾಗುತ್ತಿದೆ. ಹಿರಿಯ ಕಾರ್ಯಕರ್ತರಿಂದ ಪಕ್ಷದ ಈಗಿನ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ಕೊಡಿಸಲಾಗುತ್ತಿದೆ ಎಂದರು. ಬಿಜೆಪಿ ಜಿಲ್ಲಾ ಹಿರಿಯ ಮುಖಂಡ ಗೋಪಿ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎನ್.ಟಿ.ರಾಮಕೃಷ್ಣಯ್ಯ, ಜಿಲ್ಲಾ ಸಂಚಾಲಕ ನಾಗೇಶ್, ನಾಗರಾಜ್, ವತ್ಸಲಾ, ವೆಂಕಟೇಶ್ ಇದ್ದರು.