ಸಾರಾಂಶ
ಪ್ರತಿ ಹದಿನೈದು ದಿನಕ್ಕೊಮ್ಮೆ ರೈಲ್ವೆ ಸುರಕ್ಷತೆ ಕ್ರಿಯಾ ಯೋಜನೆ ರೂಪಿಸಬೇಕು. ಎಲ್ಲ ವಲಯಗಳಲ್ಲೂ ಈ ಕೆಲಸ ಆಗಬೇಕು. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಎಲ್ಲ ರೈಲ್ವೆ ಯಾರ್ಡ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಆಧುನೀಕರಣಗೊಳಿಸಬೇಕೆಂದು ಕೇಂದ್ರ ರೈಲ್ವೆ, ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರತಿ ಹದಿನೈದು ದಿನಕ್ಕೊಮ್ಮೆ ರೈಲ್ವೆ ಸುರಕ್ಷತೆ ಕ್ರಿಯಾ ಯೋಜನೆ ರೂಪಿಸಬೇಕು. ಎಲ್ಲ ವಲಯಗಳಲ್ಲೂ ಈ ಕೆಲಸ ಆಗಬೇಕು. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಎಲ್ಲ ರೈಲ್ವೆ ಯಾರ್ಡ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಆಧುನೀಕರಣಗೊಳಿಸಬೇಕೆಂದು ಕೇಂದ್ರ ರೈಲ್ವೆ, ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.ಭಾರತೀಯ ರೈಲ್ವೆಯ ವಿವಿಧ ಸುರಕ್ಷತಾ ಅಂಶಗಳ ಕುರಿತು ಇಲಾಖೆ ಎಲ್ಲ ವಲಯಗಳ ಮಹಾಪ್ರಬಂಧಕರು ಹಾಗೂ17 ರೈಲ್ವೆ ವಲಯಗಳ ಜನರಲ್ ಮ್ಯಾನೇಜರ್‌ಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದರು. ಈ ವೇಳೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸುರಕ್ಷತೆಯಲ್ಲಿ ಯಾವುದೇ ಬಗೆಯ ನಿರ್ಲಕ್ಷ್ಯವಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೈಲ್ವೆ ಕಾರ್ಯಾಚರಣೆಗಳ ವಿವಿಧ ಅಂಶಗಳಾದ ಸ್ವಯಂಚಾಲಿತ ಸಿಗ್ನಲಿಂಗ್, ಸಿಬ್ಬಂದಿಯ ಕೆಲಸದ ಸಮಯ, ಇತ್ತೀಚಿನ ಸುರಕ್ಷತೆಯ ಮಾನದಂಡ ಒಳಗೊಂಡಿರುವ ಇತ್ತೀಚಿನ ತಂತ್ರಜ್ಞಾನದ ಒಳಹರಿವಿನೊಂದಿಗೆ ರೈಲ್ವೆ ಯಾರ್ಡ್‌ಗಳ ಆಧುನೀಕರಣದ ಕುರಿತು ಮಾಹಿತಿ ಪಡೆದರು. ಅಲ್ಪಾವಧಿಯಲ್ಲಿ ಯಾವುದೇ ಸವಾಲನ್ನು ಎದುರಿಸಲು ವಿಪತ್ತು ನಿರ್ವಹಣಾ ತಂಡ ಮತ್ತು ಸಲಕರಣೆಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದರು.ರೈಲ್ವೆಸಚಿವಾಲಯದ ಹಿರಿಯ ಅಧಿಕಾರಿಗಳು, ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ್ ಸೇರಿದಂತೆ ರಾಷ್ಟ್ರದ 17 ವಲಯಗಳ ಮಹಾಪ್ರಬಂಧಕರು, ನೈರುತ್ಯ ರೈಲ್ವೆವಲಯದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))