ಸಾರ್ವಜನಿಕರಲ್ಲಿ ಅದರಲ್ಲೂ ಮುಖ್ಯವಾಗಿ ಹಳ್ಳಿಯ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಿ ಸಾಮಾನ್ಯರ ವಿಶ್ವವಿದ್ಯಾಲಯಗಳು ಎನಿಸಿರುವ ಗ್ರಾಮೀಣ ಗ್ರಂಥಾಲಯಗಳ ಸಾಕಷ್ಟು ಉಪಯುಕ್ತವಾಗಿವೆ.
ಅಳ್ನಾವರ
ಸಾರ್ವಜನಿಕರಲ್ಲಿ ಅದರಲ್ಲೂ ಮುಖ್ಯವಾಗಿ ಹಳ್ಳಿಯ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಿ ಸಾಮಾನ್ಯರ ವಿಶ್ವವಿದ್ಯಾಲಯಗಳು ಎನಿಸಿರುವ ಗ್ರಾಮೀಣ ಗ್ರಂಥಾಲಯಗಳ ಸಾಕಷ್ಟು ಉಪಯುಕ್ತವಾಗಿವೆ ಎಂದು ಅಳ್ನಾವರ ತಾಪಂ ಯೋಜನಾಧಿಕಾರಿ ಹಾಗೂ ಬೆನಚಿ ಗ್ರಾಪಂ ಆಡಳಿತಾಧಿಕಾರಿ ಪ್ರಕಾಶ ಹಾಲಮತ ಅಭಿಪ್ರಾಯಪಟ್ಟರು.ತಾಲೂಕಿನ ಬೆಣಚಿ ಗ್ರಾಮದಲ್ಲಿ ಅರಿವು ಕೇಂದ್ರ ಮತ್ತು ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ತೆರೆಯಲಾಗಿರುವ ಅರಿವು ಕೇಂದ್ರಗಳು ಡಿಜಿಟಲೀಕರಣಗೊಂಡಿದ್ದು, ಸ್ಪರ್ಧಾತ್ಮಕ ಪರಿಕ್ಷೇಯ ತಯಾರಿಗೆ ಅವಶ್ಯಕ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯುವಂತೆ ಸರ್ಕಾರ ಮಾಡಿದೆ. ಇದರ ಸದುಪಯೋಗ ಪಡೆದುಕೊಂಡು ಮತ್ತು ನಿಯಮಿತವಾಗಿ ಗ್ರಂಥಾಲಯಗಳಿಗೆ ಭೇಟಿ ನೀಡಿದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗಲಿದೆ ಎಂದರು.
ಪಿಡಿಒ ಆನಂದ ಪಾಟೀಲ ಮಾತನಾಡಿ, ನಗರ ಪ್ರದೇಶದಲ್ಲಿ ನಿಗದಿತ ಶುಲ್ಕ ಕೊಟ್ಟು ಓದುತ್ತಾರೆ. ಗ್ರಾಮೀಣ ಭಾಗದಲ್ಲಿ ಉಚಿತ ಸೌಲಭ್ಯವಿದ್ದರೂ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದ್ದು ಮೊಬೈಲ್ ಬಳಕೆ ಕಡಿಮೆ ಮಾಡಿ ಮಕ್ಕಳನ್ನು ಗ್ರಂಥಾಯಕ್ಕೆ ಕಳುಹಿಸಲು ಪಾಲಕರು ಆಸಕ್ತಿ ವಹಿಸಬೇಕೆಂದರು.ಗ್ರಂಥಾಲಯಕ್ಕೆ ನಿಯಮಿತವಾಗಿ ಭೇಟಿ ಕೊಡುವವರನ್ನು ಗುರುತಿಸಿ ಗೌರವಿಸಲಾಯಿತು. ಗ್ರಂಥಪಾಲಕ ರಘು, ಶಿಕ್ಷಕರಾದ ಕೃಷ್ಣ ಕುಂದಗೋಳ, ವಿದ್ಯಾ ಅನಸ್ಕರ, ವಿಜಯಲಕ್ಷ್ಮೀ, ಮಂಜುನಾಥ, ಮುಖ್ಯ ಶಿಕ್ಷಕ ಏಕನಾಥ ಹೋನಗೆಕರ, ಗ್ರಂಥಾಲಯ ಮೇಲ್ವಿಚಾರಕ ಗುರುರಾಜ, ಪಿಡಿಒ ಆನಂದ ಪಾಟೀಲ, ಕಾರ್ಯದರ್ಶೀ ಷಣ್ಮುಖ ಸುಳಗೇಕರ, ಸ್ವ-ಸಹಾಯ ಸಂಘದ ಮಂಗಲಾ ಪಾಟೀಲ, ದಿವ್ಯಾ, ಅಖಿಲಾ ಇದ್ದರು.ಬೆಣಚಿ ಮತ್ತು ಕಡಬಗಟ್ಟಿ ಗ್ರಂಥಾಲಯಗಳಲ್ಲಿ ಒಂದು ವಾರ ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸಿ ಓದುವ ಹವ್ಯಾಸ ಮೂಡಿಸಲು ಸ್ಪರ್ಧಾತ್ಮ ಚಟುವಟಿಕೆಗಳನ್ನು ಕೈಕೊಳ್ಳಲಾಗಿತ್ತು.