ಸಾಮಾಜಿಕ ನಾಟಕಗಳಿಂದ ಸಮನ್ವಯತೆ ವೃದ್ಧಿ: ಕಳಕಪ್ಪ ಕಂಬಳಿ

| Published : May 14 2024, 01:01 AM IST

ಸಾರಾಂಶ

ಗ್ರಾಮಸ್ಥರು ಜಾತ್ರೆಗಳ ಪ್ರಯುಕ್ತ ನಾಟಕಗಳನ್ನು ಹಮ್ಮಿಕೊಳ್ಳುವುದು ಒಗ್ಗಟ್ಟಿನ ಸಂಕೇತ. ಗ್ರಾಮದಲ್ಲಿ ಇರುವ ಕಲಾವಿದರ ಪರಿಚಯ ಸಹ ಆಗುತ್ತದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಕುಕನೂರು

ಜಗತ್ತಿನಲ್ಲಿ ಮಾನವೀಯ ಮೌಲ್ಯದಿಂದ ಸಮನ್ವಯ ಭಾವ ಮೂಡಿದಾಗ ಸರ್ವರೂ ಸಮರಾಗುತ್ತಾರೆ. ಅಂತಹ ಸಾಮಾಜಿಕ ಕಳಕಳಿಯನ್ನು ನಾಟಕಗಳು ಹೊಂದಿರುತ್ತವೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ತಾಲೂಕಿನ ಭಟಪ್ಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬೀಕಾ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಜರುಗಿದ ರೈತ ರಾಜ್ಯದಲ್ಲಿ ಅರ್ಥಾರ್ಥ ದುಷ್ಟ ಶಕ್ತಿಗಳ ಸಂಹಾರ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.ಅನ್ನ ನೀಡುವ ರೈತರನ್ನು, ಗಡಿ ಕಾಯುವ ಸೈನಿಕರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅವರಿಬ್ಬರೂ ದೇಶದ ಸಂಪತ್ತು. ಅವರಿಂದ ದೇಶದ ಪ್ರಗತಿ. ರೈತರ ಕಷ್ಟಗಳನ್ನು ಜಗತ್ತಿಗೆ ತೋರಿಸುವ ನಾಟಕ ಅಭಿನಯಿಸುತ್ತಿರುವುದು ಹೆಮ್ಮೆ ಸಂಗತಿ ಎಂದರು.ಗ್ರಾಮಸ್ಥರು ಜಾತ್ರೆಗಳ ಪ್ರಯುಕ್ತ ನಾಟಕಗಳನ್ನು ಹಮ್ಮಿಕೊಳ್ಳುವುದು ಒಗ್ಗಟ್ಟಿನ ಸಂಕೇತ. ಗ್ರಾಮದಲ್ಲಿ ಇರುವ ಕಲಾವಿದರ ಪರಿಚಯ ಸಹ ಆಗುತ್ತದೆ. ಅವರ ಕಲಾ ಪ್ರತಿಭೆಗೆ ಒಂದು ವೇದಿಕೆ ಸಿಕ್ಕಂತ್ತಾಗುತ್ತದೆ ಎಂದರು.

ಪಪಂ ಸದಸ್ಯ ಗಗನ ನೋಟಗಾರ ಮಾತನಾಡಿ, ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಗ್ರಾಮೀಣ ಪ್ರದೇಶದಲ್ಲಿ ಜಾತ್ರೆಗಳ ಪ್ರಯುಕ್ತ ಜರುಗುವ ನಾಟಕಗಳಿಗೆ ಪ್ರೋತ್ಸಾಹ ದೊರಕಬೇಕು. ಒಂದು ಒಳ್ಳೆ ನಾಟಕದ ಕಥೆ, ಅಭಿನಯ ವ್ಯಕ್ತಿಗೆ ಉತ್ತಮ ಬದುಕು ನೀಡುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ಮಹೇಶ ದೊಡ್ಮನಿ, ಸೋಮಶೇಖರಯ್ಯ, ಪ್ರಶಾಂತ ಆರಬೆರಳಿನ್, ಮಹೇಶ ಹೊಸಮನಿ, ಶರಣಪ್ಪ ಹಾದಿಮನಿ, ಕೆಂಚಪ್ಪ, ಗವಿಸಿದ್ದಪ್ಪ ಭಾವಿಕಟ್ಟಿ ಇತರರಿದ್ದರು.