ಸಾರಾಂಶ
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಥಮಿಕ ಹಂತವೇ ಬುನಾದಿ ಎಂದು ವೈದ್ಯ ಡಾ.ಎಂ.ವಿ.ಹಾದಿಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಥಮಿಕ ಹಂತವೇ ಬುನಾದಿ, ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವಂತೆ ಅಮೀನಗಡದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಚೇರ್‌ಮನ್, ವೈದ್ಯ ಡಾ.ಎಂ.ವಿ.ಹಾದಿಮನಿ ಹೇಳಿದರು.
ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ, ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ 2024-25ನೇ ಸಾಲಿನ ಶಾಲೆ ಪ್ರಾರಂಭೋತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಆಸಕ್ತಿ ವಹಿಸಬೇಕು ಎಂದರು.ಈ ವೇಳೆ ಮಕ್ಕಳಿಗೆ ಆರತಿ ಬೆಳಗಿ, ಪುಷ್ಪಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು. ಅಧ್ಯಕ್ಷತೆಯನ್ನು ಆರ್.ಬಿ.ರೂಡಗಿ ವಹಿಸಿದ್ದರು. ಶಿಕ್ಷಕರಾದ ಎಸ್.ಎಂ.ರಜಪೂತ್, ಎಂ.ಎಚ್.ಗೌಡರ, ಎಸ್.ಬಿ.ಅಂಗಡಿ,ಗುರುಮಾತೆಯರಾದ ಎಂ.ಎಂ.ಕಲಕಂಬ, ಶ್ವೇತಾ ರಾಂಪುರ, ಎ.ಎಂ.ಕಲಾದಗಿ, ಎ.ಎಸ್.ನಿಡಗುಂದಿ, ಯರಿಗೇರಿ, ಜೋಶಿ, ಸುಮಿತ್ರಾ ಕಂಬಾಳಿಮಠ, ಬಡಿಗೇರ ಮುಂತಾದವರು ಭಾಗವಹಿಸಿದ್ದರು.