ಮಕ್ಕಳ ಭವಿಷ್ಯ ಬುನಾದಿ, ವೇದ ಕೋಚಿಂಗ್‌ ಅಕಾಡೆಮಿ

| Published : May 25 2024, 12:50 AM IST

ಮಕ್ಕಳ ಭವಿಷ್ಯ ಬುನಾದಿ, ವೇದ ಕೋಚಿಂಗ್‌ ಅಕಾಡೆಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜ್ಞಾನ, ಬುದ್ಧಿವಂತಿಕೆಯ ಮತ್ತೊಂದು ಹೆಸರೇ ವೇದ. ಇಂತಹ ಹೆಸರಿನಿಂದ ಆರಂಭವಾಗಿರುವ ವೇದ ಕೋಚಿಂಗ್ ಅಕಾಡೆಮಿ ಸೈನಿಕ, ನವೋದಯ, ಆರ್ಎಂಎಸ್, ಕಿತ್ತೂರು ಶಾಲೆಗಳಿಗೆ ಪ್ರವೇಶ ಪರೀಕ್ಷೆ ತರಬೇತಿ ಕೇಂದ್ರವಾಗಿದೆ. ಇಲ್ಲಿ ಅನೇಕ ಮಕ್ಕಳಿಗೆ ಭವಿಷ್ಯ ರೂಪಿಸುವಲ್ಲಿ ಸಾಧನೆಗೈದಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಜ್ಞಾನ, ಬುದ್ಧಿವಂತಿಕೆಯ ಮತ್ತೊಂದು ಹೆಸರೇ ವೇದ. ಇಂತಹ ಹೆಸರಿನಿಂದ ಆರಂಭವಾಗಿರುವ ವೇದ ಕೋಚಿಂಗ್ ಅಕಾಡೆಮಿ ಸೈನಿಕ, ನವೋದಯ, ಆರ್‌ಎಂಎಸ್, ಕಿತ್ತೂರು ಶಾಲೆಗಳಿಗೆ ಪ್ರವೇಶ ಪರೀಕ್ಷೆ ತರಬೇತಿ ಕೇಂದ್ರವಾಗಿದೆ. ಇಲ್ಲಿ ಅನೇಕ ಮಕ್ಕಳಿಗೆ ಭವಿಷ್ಯ ರೂಪಿಸುವಲ್ಲಿ ಸಾಧನೆಗೈದಿದೆ.

ದಶಕಗಳ ಕೋಚಿಂಗ್ ಅನುಭವವಿರುವ 40ಕ್ಕೂ ಅಧಿಕ ನುರಿತ ಶಿಕ್ಷಕರು ತರಬೇತಿ ಪಡೆದು, 2024ರ ಸೈನಿಕ, ನವೋದಯ, ಆರ್‌ಎಂಎಸ್, ಕಿತ್ತೂರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ 300 ವಿದ್ಯಾರ್ಥಿಗಳಲ್ಲಿ 270 ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ. 93 ವಿದ್ಯಾರ್ಥಿಗಳು 200ಕ್ಕೂ ಅಧಿಕ ಅಂಕಗಳನ್ನು ಪಡೆದಿರುವುದೇ ವೇದ ಕೋಚಿಂಗ್ ಅಕಾಡೆಮಿಯ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಸ್ಪರ್ಧಾತ್ಮಕ ಆಯ್ಕೆ:

ಇಂಗ್ಲಿಷ್‌ ಮಾಧ್ಯಮದಲ್ಲಿ ವೇದ ಕೋಚಿಂಗ್‌ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಆಯ್ಕೆಯಾಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಸೈನಿಕ, ನವೋದಯ, ಆರ್‌ಎಂಎಸ್, ಕಿತ್ತೂರು ಸೇರಿದಂತೆ ಯಾವುದೇ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ (ಎಐಎಸ್‌ಎಸ್‌ಇಇ)ಯಲ್ಲಿ ವೇದ ಕೋಚಿಂಗ್ ವಿದ್ಯಾರ್ಥಿಗಳು ನಿರೀಕ್ಷೆ ಮೀರಿ ಗುರಿ ಮುಟ್ಟುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.

30 ವರ್ಷದ ಅನುಭವಿ ವೃಂದ:

ಸೈನಿಕ ಶಾಲಾ ಪ್ರವೇಶ ಪರೀಕ್ಷಾ ತರಬೇತಿಯಲ್ಲಿ ಸುದೀರ್ಘ 30 ವರ್ಷಗಳಿಂದ ಎಕ್ಸಲೆಂಟ್ ಕೋಚಿಂಗ್ ಮೂಲಕ ಅನುಭವ ಹೊಂದಿದ ಡಾ.ಶಿವಾನಂದ ಕೆಲೂರ ಹಾಗೂ ಸುಮಾರು 25 ವರ್ಷಗಳ ಅನುಭವ ಹೊಂದಿದ ಶ್ರೀ ದಯಾನಂದ ಕೆಲೂರ ಅವರ ಸಮರ್ಥ ಮಾರ್ಗದರ್ಶನವೇ ವೇದ ಕೋಚಿಂಗ್ ಅಕಾಡೆಮಿಯ ಜೀವಾಳವಾಗಿದೆ. ನುರಿತ ಹಾಗೂ ತರಬೇತಿ ಹೊಂದಿದ 40ಕ್ಕೂ ಅಧಿಕ ಬೋಧಕರ ಪರಿಶ್ರಮ ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಿದೆ. ಜತೆಗೆ ಇಲ್ಲಿಗೆ ಜ್ಞಾನಾರ್ಜನೆಯಾಗಿ ಬರುವ ಮಕ್ಕಳ ಭವಿಷ್ಯ ರೂಪಿಸುವುದು ಕೂಡ ಇಲ್ಲಿನ ಶಿಕ್ಷಕರ ಮೂಲಧ್ಯೇಯವಾಗಿದೆ. ಯಾವುದೇ ಸಂದರ್ಭದಲ್ಲಿ, ಎಂತಹ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನೇ ಗುರಿಯಾಗಿಸಿಕೊಂಡು ಅವರ ಭವಿಷ್ಯಕ್ಕೆ ಬುನಾದಿ ಹಾಕುತ್ತಾ ಬಂದಿದೆ ವೇದ.

ಪ್ರವೇಶಕ್ಕೆ ಸದಾವಕಾಶ:

ಈಗಾಗಲೇ 4 ಹಾಗೂ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವೇದ ಕೋಚಿಂಗ್ ಅಕಾಡೆಮಿಯಲ್ಲಿ ರೆಗ್ಯೂಲರ್ ಕ್ಲಾಸಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ವಸತಿ ಸಹಿತ ಹಾಗೂ ವಸತಿ ರಹಿತವಾಗಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ವಾಹನ ಸೌಲಭ್ಯಕ್ಕಾಗಿ ಶಾಲಾ ಬಸ್‌ನ ವ್ಯವಸ್ಥೆ ಕೂಡ ಒದಗಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲೆಂದೇ ಹುಟ್ಟಿಕೊಂಡಿರುವ ಸಂಸ್ಥೆಯೇ ವೇದ ಕೋಚಿಂಗ್ ಅಕಾಡೆಮಿಯಾಗಿದೆ. ಎಲ್ಲರಂತೆ ಇಲ್ಲಿ ಕೋಚಿಂಗ್‌ ನೀಡುವುದಿಲ್ಲ. ಮಕ್ಕಳ ಮನಸನ್ನು ಕೋಚಿಂಗ್‌ನತ್ತ ಹೊರಳುವಂತೆ ಅವರನ್ನು ಮಾನಸಿಕವಾಗಿ ಇತ್ತ ಸೆಳೆದು ಅವರಿಗೆ ಏಕೆ ಕೋಚಿಂಗ್‌ ಬೇಕು? ಯಾಕಾಗಿ ನೀಡಲಾಗುತ್ತದೆ? ಮುಂದೆ ಎಲ್ಲಿ ಅಭ್ಯಾಸ ಮಾಡಬೇಕು? ಅಲ್ಲಿ ಅಭ್ಯಾಸ ಮಾಡಿದರೆ ನಿಮ್ಮ ಮುಂದಿನ ಭವಿಷ್ಯ ಹೇಗಿರುತ್ತದೆ? ಅದಕ್ಕಾಗಿ ನೀವು ಏನು ಮಾಡಬೇಕು ಹೀಗೆ ಹತ್ತು ಹಲವು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮೊದಲು ಮನವರಿಕೆ ಮಾಡುತ್ತಾರೆ. ನಂತರ ಮಕ್ಕಳಿಗೆ ಬೋಧನೆ ಮಾಡಲಾಗುತ್ತದೆ.

---

ಬಾಕ್ಸ್.

ಹೊಸ ಶಾಖೆ ಆರಂಭ

ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ವೇದ ಕೋಚಿಂಗ್ ಅಕಾಡೆಮಿಯ ನೂತನ ಶಾಖೆಯನ್ನು ಆರಂಭಿಸಲಾಗಿದೆ.

ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿರುವ ಗಣೇಶ ನಗರದ ಬಸ್‌ ನಿಲ್ದಾಣದ ಪಕ್ಕದಲ್ಲಿನ ಡಾ.ಬೀಳೂರ ಬಿಲ್ಡಿಂಗ್‌ನಲ್ಲಿ ನೂತನವಾಗಿ ವೇದ ಕೋಚಿಂಗ್ ಅಕಾಡೆಮಿ ಆರಂಭಿಸಲಾಗಿದೆ. ಈ ಭಾಗದ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

---

ವೇದ ಕೋಚಿಂಗ್ ವಿಳಾಸ

ವೇದ ಕೋಚಿಂಗ್ ಅಕಾಡೆಮಿ, ವೇದ ಅಕಾಡೆಮಿ ಹತ್ತಿರ, ಮಲ್ಲಿಕಾರ್ಜುನ ನಗರ, ಇಟ್ಟಂಗಿಹಾಳ ರಸ್ತೆ, ವಿಜಯಪುರ-04.

--

ಹೊಸ ಶಾಖೆ ವಿಳಾಸ.

ಡಾ. ಬೀಳೂರ ಬಿಲ್ಡಿಂಗ್, ಗಣೇಶ ನಗರ ಬಸ್‌ ಸ್ಟಾಪ್ ಹತ್ತಿರ, ಮನಗೂಳಿ ರಸ್ತೆ, ವಿಜಯಪುರ.

ಸಂಪರ್ಕ ಸಂಖ್ಯೆಗಳು: 9449661767, 7406772770, 7975207459, 8105321643, 9900257764.

---

ಕೋಟ್:

ನಾನು 1996 ರಿಂದ ಎಕ್ಸಲಂಟ್ ಕೋಚಿಂಗ್ ಮೂಲಕ ಸಹಸ್ರ ಸಹಸ್ರ ವಿದ್ಯಾರ್ಥಿಗಳನ್ನು ಸಮಾಜದ ಉನ್ನತ ಹುದ್ದೆಗಳಿಗೆ ತಯಾರು ಮಾಡಿದ್ದೇನೆ. ಅಂದಿನಿಂದ ಇಂದಿನವರೆಗೆ ಎಡೆಬಿಡದೆ ನಿರಂತರವಾಗಿ ನನ್ನ ಶೈಕ್ಷಣಿಕ ಸೇವೆ ಮುಂದುವರಿಸಿದ್ದೇನೆ. ಗ್ರಾಮೀಣ ಹಾಗೂ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂಬುವುದು ನಮ್ಮ ವೇದ ಕೋಚಿಂಗ್ ಧ್ಯೇಯೋದ್ದೇಶವಾಗಿದೆ.

-ಡಾ.ಶಿವಾನಂದ ಕೆಲೂರ, ಅಧ್ಯಕ್ಷರು ವೇದ ಅಕಾಡೆಮಿ.

---

ವಿದ್ಯಾರ್ಥಿಗಳ ಏಳಿಗೆಯೇ ನನ್ನ ಪರಮ ಧ್ಯೇಯವಾಗಿದೆ. ಇಂಗ್ಲಿಷ್ ಶಿಕ್ಷಕನಾಗಿ ಇಂಗ್ಲಿಷ್ ಮಾಧ್ಯಮ ವಿಭಾಗದಿಂದ ಅತಿಹೆಚ್ಚು ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆ ಆಗುವಂತೆ ತರಬೇತಿ ನೀಡಿರುವುದು ನಮ್ಮ ಕೋಚಿಂಗ್‌ನ ಹೆಮ್ಮೆಯಾಗಿದೆ. ನಮ್ಮಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಸಾಧಕರಾಗಿ ಆಯ್ಕೆಯಾಗುತ್ತಿದ್ದಾರೆ.

-ಶ್ರೀ ದಯಾನಂದ ಕೆಲೂರ, ಉಪಾಧ್ಯಕ್ಷರು ವೇದ ಅಕಾಡೆಮಿ.

---

ಯಾಕೆ ವೇದ ಕೋಚಿಂಗ್‌ ಬೇಕು?

-ದಶಕಗಳ ಕೋಚಿಂಗ್ ಅನುಭವವಿರುವ, ವೃತ್ತಿನಿರತ ಶಿಕ್ಷಕ ಪಡೆ ಇಲ್ಲಿದೆ

-40ಕ್ಕೂ ಅಧಿಕ ನುರಿತ ಶಿಕ್ಷಕರಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ

-ವಸತಿ ಸಹಿತ ಹಾಗೂ ವಸತಿ ರಹಿತವಾಗಿ ಪ್ರವೇಶಾತಿ ಇದೆ

-ಮಕ್ಕಳ ಅನುಕೂಲಕ್ಕಾಗಿ ಶಾಲಾ ಬಸ್‌ನ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ

-2024ರಲ್ಲಿ ವಿವಿಧ ಶಾಲೆಗಳಿಗೆ 270ಕ್ಕೂ ಅಧಿಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ

-93 ವಿದ್ಯಾರ್ಥಿಗಳು 200ಕ್ಕೂ ಅಧಿಕ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ