ಶರಣಮಠದಲ್ಲಿ ಸಭಾಗೃಹ ನಿರ್ಮಾಣಕ್ಕೆ ಅಡಿಗಲ್ಲು

| Published : Feb 15 2025, 12:30 AM IST

ಸಾರಾಂಶ

Foundation, stone, laid, construction auditorium, Sharanamath

ಆಳಂದ: ಶರಣನಗರದ ರೇವಣಸಿದ್ದ ಶಿವಶರಣಸ್ವಾಮಿಗಳ ಮಂಟಪದಲ್ಲಿ ಭಕ್ತರ ಧನಸಹಾಯದಿಂದ 25ಲಕ್ಷ ವೆಚ್ಚದ ಸಭಾಮಂಟಪ ನಿರ್ಮಾಣ ಕಾರ್ಯಕ್ಕೆ ಪೀಠಾಧಿಪತಿ ಶ್ರೀ ಚೆನ್ನಬಸವ ಪಟ್ಟದೇವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ರೇವಣಸಿದ್ಧ ಶಿವಶರಣಸ್ವಾಮಿ ಲಿಂ. 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆ ಈ ಪವಿತ್ರ ಕಾರ್ಯದ ಸವಿನೆನಪಿಗೆ ಸಭಾಮಂಟಪ ಶ್ರೀಘ್ರವೇ ನಿರ್ಮಾಣಗೊಳ್ಳುತ್ತಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದು ಪಟ್ಟದೇವರು ಹೇಳಿದರು.

ಶರಣಮಂಟಪದ ಕಮಿಟಿಯ ಅಧ್ಯಕ್ಷ ಸೂರ್ಯಕಾಂತ್ ತಟ್ಟಿ ಮಾತನಾಡಿದರು.ಸಿದ್ಧರೂಢ ಕಂಟೆ, ಭೀಮಣ್ಣಪ್ಪ ಸ್ವಾಮಿ ಶಟ್ಟಗುಂಡೆ, ಶ್ರೀಶೈಲ ಉಳ್ಳೆ, ರಾಜಶೇಖರ ಜನವೇರಿ, ರಾಜಶೇಖರ ವಮ್ಮಣೆ, ಉಮೇಶ ಹಿಪ್ಪರಗಿ, ಚಂದ್ರಕಾಂತ ಫುಲಾರೆ, ಪರಮೇಶ್ವರ ತಟ್ಟಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು, ಹಟಗಾರ ಸಮಾಜದ ಕಮಿಟಿಯ ಪದಾಧಿಕಾರಿಗಳು ಇದ್ದರು.