ಇಲ್ಲಿನ ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕದಾಸರ ಗುಡಿಯನ್ನು ಶಿಲಾಮಯಗೊಳಿಸುವ ಕಾಮಗಾರಿಗೆ ಶುಕ್ರವಾರ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶ್ರೀಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶರಾದ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಂಕುಸ್ಥಾಪನೆ ನೆರವೇರಿಸಿದರು.

ಉಡುಪಿ : ಇಲ್ಲಿನ ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕದಾಸರ ಗುಡಿಯನ್ನು ಶಿಲಾಮಯಗೊಳಿಸುವ ಕಾಮಗಾರಿಗೆ ಶುಕ್ರವಾರ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶ್ರೀಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶರಾದ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಂಕುಸ್ಥಾಪನೆ ನೆರವೇರಿಸಿದರು.

ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಿಡಿಯೋ ಕರೆ ಮೂಲಕ ಅನುಗ್ರಹಿಸಿದರು. ಕಾರ್ಯಕ್ರಮದಲ್ಲಿ ಶೀರೂರು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಹಾಗೂ ಉತ್ತರಾದಿ ಮಠದ ವಿದ್ವಾನ್ ಸತ್ಯಧ್ಯಾನ ಆಚಾರ್ಯ ಕಟ್ಟಿ, ವಿಧ್ವಾನ್ ವಿದ್ಯಾಸಿಂಹಾಚಾರ್ ಮಾಹುಲಿ, ವಿಧ್ವಾನ್ ವಿದ್ಯಾಧೀಶಾಚಾರ್ ಗುತ್ತಲ್, ಪ್ರಕಾಶ್ ಆಚಾರ್ ಸವಣೂರು, ಪಾಂಡುರಂಗಾಚಾರ್ ರೊಟ್ಟಿ, ಆನಂದತೀರ್ಥಚಾರ್ ಚಿಮ್ಮಲಿ, ಕಾರ್ತಿಕ್ ಅಚಾರ್ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಭಕ್ತ ಕುರುಬ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರಾದ ಸಿ. ಎಲ್. ಆನಂದ್, ಸಿದ್ದರಾಜು ಕೆ. ಎಸ್., ಬಾಬು ಎಸ್. ಎನ್., ದಯಾನಂದ್ ಸಿ. ಕೆ., ಚಂದ್ರಶೇಖರ್, ಹನುಮಂತ ಡೂಳ್ಳಿನ್, ಬಸವರಾಜ್ ಕುರುಬರ್, ಹನುಮಂತ್ ಆಡಿನ್, ಬ್ಯಾನಪ್ಪ ಎಚ್. ಕುರಿ, ದೇವು ಪೂಜಾರಿ, ನಿತಿನ್ ಮೈಸೂರು ಮುಂತಾದವರು ಉಪಸ್ಥಿತರಿದ್ದರು.