ಮರೋಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ರು.17 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಶನಿವಾರ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ
ಬೆಳ್ತಂಗಡಿ: ಮರೋಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ರು.17 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಶನಿವಾರ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.
ಮಾಜಿ ತಾಂ. ಪಂ. ಮಾಜಿ ಸದಸ್ಯ ಜಯಂತ ಕೋಟ್ಯಾನ್, ಮರೋಡಿ ಪಂಚಾಯಿತಿ ಮಾಜಿ ಅಧ್ಯಕ್ಷ ರತ್ನಾಕರ್ ಬುಣ್ಣನ್ ಪದ್ಮಶ್ರೀ ಜೈನ್, ಬಾಲಕೃಷ್ಣ ಬಂಗೇರ, ಪಂಚಾಯಿತಿ ಮಾಜಿ ಸದಸ್ಯರಾದ ಯಶೋದಾ, ಅಶೋಕ್ ಪೂಜಾರಿ, ಧನಲಕ್ಷ್ಮೀ, ಉಮಾವತಿ, ಉಮೇಶ್ ಸಾಲ್ಯಾನ್, ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಜಿತ್ ಪೆರಾಡಿ, ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಪ್ರಮುಖರಾದ ಗಣೇಶ್ ಕರ್ಕೇರ, ಭಾಸ್ಕರ್ ಜೆ ಸಾಲಿಯಾನ್, ದೇವರಾಜ್ ಶೆಟ್ಟಿ, ರವಿ ಕುಲಾಲ್, ಸುರೇಂದ್ರ ಬಲ್ಲಾಳ್, ವಾಸು ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಕಾತ್ಯಾಯಿನಿ, ಬಾಲವಿಕಾಸ ಅಧ್ಯಕ್ಷ ಯಶ್ವಿತಾ, ಇಂಜಿನಿಯರ್, ಇಲಾಖಾ ಅಧಿಕಾರಿಗಳು ನಾಗರಿಕರು ಉಪಸ್ಥಿತರಿದ್ದರು.