ನಾಳೆ ಪರ್ಪಲೆಗಿರಿಯಲ್ಲಿ ಧರ್ಮದೈವಗಳ ಗುಡಿಗೆ ಶಿಲಾನ್ಯಾಸ

| Published : Feb 10 2024, 01:48 AM IST

ಸಾರಾಂಶ

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠದ ಉಡುಪಿಯ ಪೀಠಾಧಿಪತಿ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶಿಲಾನ್ಯಾಸ ನೆರವೇರಿದ ಬಳಿಕ ಧಾರ್ಮಿಕ ಸಭೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ಧರ್ಮದೈವಗಳ ಗುಡಿ ಶಿಲಾನ್ಯಾಸ ಕಾರ್ಯಕ್ರಮ ಫೆ.11ರಂದು ಬೆಳಗ್ಗೆ 9.58ಕ್ಕೆ ಅತ್ತೂರು ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ನಡೆಯಲಿದೆ ಎಂದು ಅತ್ತೂರು ಪರ್ಪಲೆಗಿರಿ ಪುನರುತ್ಥಾನದ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಅವರು ಕಾರ್ಕಳ ಪ್ರಕಾಶ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠದ ಉಡುಪಿಯ ಪೀಠಾಧಿಪತಿ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.ಅತ್ತೂರು ಪರ್ಪಲೆಗಿರಿ ಅನಾದಿಕಾಲದಿಂದಲೂ ಕಾರಣಿಕ ಹಿನ್ನೆಲೆಯುಳ್ಳ ಸ್ಥಳವಾಗಿದೆ. ತುಳುನಾಡಿನ ಪಾರ್ದನಗಳಲ್ಲಿ ಹಾಗೂ ಅಷ್ಟಮಂಗಳ ಪ್ರಶ್ನಾ ಚಿಂತನೆಗಳ ಮೂಲಕ ಈ ಪುಣ್ಯ ಭೂಮಿಯಲ್ಲಿ ಗುಡಿ ಗೋಪುರ ನಿರ್ಮಾಣವಾಗಲಿ ಎಂದು ತಿಳಿದು ಬಂದಿತ್ತು. ಇದರ ಬೆನ್ನಲ್ಲೇ ಟ್ರಸ್ಟ್ ನಿರ್ಮಾಣಗೊಂಡಿದ್ದು, ಊರವರ, ದಾನಿಗಳ ಸಹಕಾರದಿಂದ ಮೊದಲ ಹಂತದಲ್ಲಿ‌ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ಧರ್ಮದೈವಗಳ ಶಿಲಾಮಯ ಗುಡಿಯ ಶಿಲಾನ್ಯಾಸ ನೆರವೇರಲಿದೆ. ಎರಡನೇ ಹಂತದಲ್ಲಿ ಗೌರಿ ಶಂಕರ ದೇವಾಲಯ ನಿರ್ಮಾಣಗೊಳ್ಳಲಿದ್ದು, ರೂಪುರೇಷೆಗಳು ಸಿದ್ಧವಾಗಿದೆ. ಪೂಜಾ ವಿಧಿವಿಧಾನಗಳು ಕೇಂಜ ಶ್ರೀ ಧರ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.ಶಿಲಾನ್ಯಾಸ ನೆರವೇರಿದ ಬಳಿಕ ನಡೆಯುವ ಸಭೆಯಲ್ಲಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾ.ಸ್ವ. ಸಂಘದ ಮಂಗಳೂರು ವಿಭಾಗ ಸಂಚಾಲಕ ಡಾ.ನಾರಾಯಣ ಶೆಣೈ, ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಚಾಲಕ ದೋ. ಕೇಶವಮೂರ್ತಿ ಬೆಂಗಳೂರು, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಮಹೇಶ ಶೆಟ್ಟಿ ಕುಡುಪುಲಾಜೆ, ಶಶಿಧರ ಶೆಟ್ಟಿ ಬರೋಡಾ, ಎಸ್‌ಕೆಎಓಫ್‌ನ ರಾಮಕೃಷ್ಣ ಆಚಾರ್, ಬೋಳ ದಾಮೋದರ ಕಾಮತ್, ವಸಂತ್ ಭಟ್ ನಾರಾವಿ, ಶರತ್ ಸನಿಲ್ ಬೆಂಗಳೂರು, ಶಶಿಧರ ಶೆಟ್ಟಿ ಇನ್ನಂಜೆ, ಆನಂದ ಶೆಟ್ಟಿ ಮಿಯ್ಯಾರು, ಕಡ್ತಲ ವಿಶ್ವನಾಥ ಪೂಜಾರಿ, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ನಿವೃತ್ತ ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್ , ರಾ.ಸಾ.ಕ್ರೆ.ಕೋ.ಓ. ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಉಪಸ್ಥಿತರಿರುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅತ್ತೂರು ಕೃಷ್ಣಗಿರಿ ಕಲ್ಕುಡ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ನಿತ್ಯಾನಂದ ಪೈ ಮೊದಲಾದವರು ಉಪಸ್ಥಿತರಿದ್ದರು.