ಸಾರಾಂಶ
ಪತ್ರಿಕೆಗಳನ್ನು ಓದುವುದರಿಂದ ಮಕ್ಕಳಿಗೆ ಓದುವುದು ಹಲವಾರು ಮಾಹಿತಿಗಳು ಸಿಗಲಿದೆ, ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಪತ್ರಿಕೆಯಿಂದ ಬಹಳ ಅನುಕೂಲವಾಗಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಪಡುವಾರಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಗುಬ್ಬವಾಣಿ ಟ್ರಸ್ಟ್ ನಿಂದ ಕನ್ನಡಪ್ರಭ ಯುವ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.ಟ್ರಸ್ಟ್ ನ ಸಂಸ್ಥಾಪಕರಾದ ಮಾಳವಿಕಾ ಗುಬ್ಬಿವಾಣಿ ಯುವ ಆವೃತ್ತಿಯನ್ನು ಬಿಡುಗಡೆಗೊಳಿಸಿ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು.
ನಂತರ ಅವರು ಮಾತನಾಡಿ, ಪತ್ರಿಕೆಗಳನ್ನು ಓದುವುದರಿಂದ ಮಕ್ಕಳಿಗೆ ಓದುವುದು ಹಲವಾರು ಮಾಹಿತಿಗಳು ಸಿಗಲಿದೆ, ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಪತ್ರಿಕೆಯಿಂದ ಬಹಳ ಅನುಕೂಲವಾಗಲಿದೆ. ಇದರಿಂದ ಯಾರ ಮೇಲೂ ಅವಲಂಬಿತವಾಗದತಂತೆ ನೀವು ಸ್ವತಃ ಮಾಹಿತಿಗಳನ್ನು ಪಡೆದು ವಿವಿಧ ವಿಷಯಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದರು.ಪತ್ರಿಕೆಗಳನ್ನು ದಿನನಿತ್ಯ ಓದುವುದರಿಂದ ನಿಮ್ಮ ಭಾಷೆ ಮೇಲೆ ಹಿಡಿತವಿರುತ್ತದೆ. ಕ್ರೀಡೆ, ಕಲೆ, ರಾಜಕೀಯ ಸುತ್ತಮುತ್ತಲಿನ ನಡೆಯುವ ವಿಷಯ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ನಿಮಗೆ ಯೋಚನೆ ಮಾಡುವ ಶಕ್ತಿ ಬರುತ್ತದೆ. ಪತ್ರಿಕೆಗಳಲ್ಲಿ ಬರುವ ಸಾಧಕರ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನಿಮ್ಮ ಮುಂದಿನ ಸಾಧನೆಗೆ ಸ್ಪೂರ್ತಿಯಾಗಲಿದೆ. ಮುಂದಿನ ದಿನಗಳಲ್ಲಿ ನಿಮ್ಮ ಸಾಧನೆಯತ್ತ ಮುಖ ಮಾಡಬಹುದು ಎಂದು ಅವರು ಹೇಳಿದರು.
ಕನ್ನಡಪ್ರಭ ಯುವ ಆವೃತ್ತಿಯು ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಬೇಕಾಗಿರುವ ಉಪಮುಕ್ತ ಮಾಹಿತಿಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತಿದೆ. ವಿದ್ಯಾರ್ಥಿಗಳ ಇದರ ಪ್ರಯೋಜನ ಪಡೆದು ಶಾಲಾ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಅವರು ಕರೆ ನೀಡಿದರು.ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಇತರರು ಇದ್ದರು.