ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ 4 ದಿನ ಮೀಸಲು: ವಿಧಾನಪರಿಷತ್‌ ಸಭಾಪತಿ ಹೊರಟ್ಟಿ

| Published : Dec 09 2024, 12:46 AM IST

ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ 4 ದಿನ ಮೀಸಲು: ವಿಧಾನಪರಿಷತ್‌ ಸಭಾಪತಿ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಒಟ್ಟು ನಾಲ್ಕು ದಿನ ಮೀಸಲಿಡಲಾಗಿದೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಹು​ಬ್ಬ​ಳ್ಳಿ: ಬೆ​ಳ​ಗಾವಿಯಲ್ಲಿ ನ​ಡೆ​ಯುವ ಚ​ಳಿಗಾ​​ಲ ಅ​ಧಿ​ವೇ​ಶ​ನ​ದಲ್ಲಿ ಉ​ತ್ತರ ಕ​ರ್ನಾ​ಟಕ ಭಾ​ಗದ ಜ್ವ​ಲಂತ ಸ​ಮಸ್ಯೆ​ಗಳ ಕು​ರಿತು ಚ​ರ್ಚಿ​ಸಲು ಒಟ್ಟು ನಾಲ್ಕು ದಿನ ಮೀ​ಸ​ಲಿ​ಡ​ಲಾ​ಗಿದೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ನ​ಗ​ರ​ದಲ್ಲಿ ಸು​ದ್ದಿ​ಗೋ​ಷ್ಠಿ​ಯಲ್ಲಿ ಮಾ​ತ​ನಾ​ಡಿದ ಅವರು, ಎರಡು ವಾರದಲ್ಲೂ ಮಂಗಳವಾರ ಮತ್ತು ಬುಧವಾರ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಗುರುವಾರ ದಿನ ಸರ್ಕಾರದಿಂದ ಉತ್ತರ ಕೊಡಿಸಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಂಡು ಸಚಿವ, ಶಾಸಕರು ಆರೋಗ್ಯಕರ ಚರ್ಚೆಗೆ ಸಹಕಾರ ನೀಡಬೇಕು ಎಂದರು.

ಕೃಷ್ಣಾ ಮೇಲ್ದಂಡೆ, ಮಹದಾಯಿ ಮತ್ತು ಕಳಸಾ ಬಂಡೂರಿ, ತುಂಗ​ಭದ್ರಾ, ಕಾ​ರಂಜಾ, ಕೃಷಿ, ಅ​ರ​ಣ್ಯ​ಭೂಮಿ ಅ​ತಿ​ಕ್ರ​ಮ​ಣ​ದಾ​ರರು ಮತ್ತು ಸಂತ್ರ​ಸ್ತರ ಸ​ಮ​ಸ್ಯೆ​ಗಳ ಬಗ್ಗೆ ಚರ್ಚೆ ನ​ಡೆ​ಯ​ಲಿದೆ. ಸ​ಕ್ಕರೆ ಕಾ​ರ್ಖಾನೆ, ತೋ​ಟ​ಗಾ​ರಿಕೆ ಸೇ​ರಿ​ದಂತೆ ವಿ​ವಿಧ ಸ​ಮ​ಸ್ಯೆ​ಗ​ಳನ್ನು ಚ​ರ್ಚಿ​ಸು​ವಂತೆ ಸ​ಚಿವ, ಶಾ​ಸ​ಕ​ರಿಗೆ ಸೂ​ಚನೆ ನೀ​ಡ​ಲಾ​ಗಿದೆ ಎಂದ​ರು.

ಹಿಂದಿನ ಅಧಿವೇಶನಕ್ಕಿಂತ ಹೆಚ್ಚು ಕ್ರಿಯಾತ್ಮಕ ಅಧಿವೇಶನ ಇದಾಗ​ಲಿದ್ದು, ಅನಗತ್ಯ ಚರ್ಚೆಗೆ ಅವಕಾಶ ಇಲ್ಲ. ಯಾವ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂಬು​ದರ ಬಗ್ಗೆ ಈ​ಗಾ​ಗ​ಲೇ ವಿಷಯಪಟ್ಟಿ ಸಿದ್ಧಪಡಿಸಲಾಗಿದೆ. ಶೂನ್ಯ ವೇಳೆಯ ನಂತರ ಈ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಅ​ಧಿ​ವೇ​ಶ​ನಕ್ಕೂ ಎ​ಲ್ಲ​ರಿಗೂ ಹಾ​ಜ​ರಾ​ಗು​ವಂತೆ ಸೂ​ಚಿ​ಸ​ಲಾ​ಗಿದೆ. ಈ ಕುರಿತು ವಿರೋಧಪಕ್ಷದ ನಾಯಕರ ಜತೆಗೂ ಮಾತನಾಡಿದ್ದೇನೆ ಎಂದ​ರು.

ಅಧಿವೇಶನಕ್ಕೆ ಶಾಸಕರು ಗೈರಾಗುವ ಕುರಿತು ಕೇಳಿದ ಪ್ರಶ್ನೆಗೆ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಜನಪ್ರತಿನಿಧಿಗಳ ​ಕೆ​ಲಸ. ಕೆಲವು ಶಾಸಕರು ಸಹಿ ಮಾಡಿ ಹಾಗೆಯೇ ಹೋಗುತ್ತಾರೆ. ಅಧಿವೇಶನದಲ್ಲಿ ಪಾಲ್ಗೊಂಡು ಪ್ರಶ್ನೆ ಕೇಳುವಂತೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡುತ್ತಿದ್ದೇವೆ. ಈ ಬಾರಿ ಎಲ್ಲ ಶಾಸಕರು ಭಾ​ಗ​ವ​ಹಿ​ಸುವ ವಿ​ಶ್ವಾ​ಸ​ವಿದೆ. ಅಧಿವೇಶನದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಚರ್ಚೆ ನ​ಡೆ​ಸ​ಲಾ​ಗು​ವುದು ಎಂದ​ರು.