ಸಾರಾಂಶ
ಇಳಕಲ್ಲ: ನಗರದಲ್ಲಿ ಫೆ.೧೪ರಂದು ನೀಲಕಂಠೇಶ್ವರ, ಹಿಂಗುಲಾಂಬಿಕಾ, ಅಂಬಾಭವಾನಿ, ಚೌಡೇಶ್ವರಿ ದೇವಿಯರ ಉತ್ಸವಗಳ ಅಂಗವಾಗಿ ನಗರದಲ್ಲಿ ನಾಲ್ಕು ದೇವರುಗಳ ಪಲ್ಲಕ್ಕಿ ಉತ್ಸವ ಅತ್ಯಂತ ಅದ್ಧೂರಿಯಾಗಿ ನಡೆದವು. ಉತ್ಸವ ನಿಮಿತ್ತ ನಗರದ ಎಲ್ಲ ದೇವಸ್ಥಾನಗಳಲ್ಲಿ ಮಹಾರುದ್ರಾಭಿಷೇಕ, ಸಹಸ್ರ ದಳ ಪತ್ರಿ ಅರ್ಪಣೆ ಹಾಗೂ ಮಹಾ ಮಂಗಳಾರತಿ, ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯಿತು.
ಇಳಕಲ್ಲ: ನಗರದಲ್ಲಿ ಫೆ.೧೪ರಂದು ನೀಲಕಂಠೇಶ್ವರ, ಹಿಂಗುಲಾಂಬಿಕಾ, ಅಂಬಾಭವಾನಿ, ಚೌಡೇಶ್ವರಿ ದೇವಿಯರ ಉತ್ಸವಗಳ ಅಂಗವಾಗ ನಗರದಲ್ಲಿ ನಾಲ್ಕು ದೇವರುಗಳ ಪಲ್ಲಕ್ಕಿ ಉತ್ಸವ ಅತ್ಯಂತ ಅದ್ಧೂರಿಯಾಗಿ ನಡೆದವು.
ಉತ್ಸವ ನಿಮಿತ್ತ ನಗರದ ಎಲ್ಲ ದೇವಸ್ಥಾನಗಳಲ್ಲಿ ಮಹಾರುದ್ರಾಭಿಷೇಕ, ಸಹಸ್ರ ದಳ ಪತ್ರಿ ಅರ್ಪಣೆ ಹಾಗೂ ಮಹಾ ಮಂಗಳಾರತಿ, ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯಿತು. ನೀಲಕಂಠೇಶ್ವರ ದೇವಸ್ಥಾನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರಿಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ ಮಾಡಲಾಯಿತು. ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ನೀಲಕಂಠಪ್ಪ ಗೋಟೂರ, ಉಪಾದ್ಯಕ್ಷ ಶಿವಪ್ಪ ಜೀರಗಿ ಹಾಗೂ ಮಹಾಂತೇಶ ಮನ್ನಾಪುರ. ಕಾರ್ಯಧ್ಯಕ್ಷ ಸಿದ್ದರಾಮಪ್ಪ ಮನ್ನಾಪುರ. ಉತ್ಸವ ಕಮಿಟಿ ಮುತ್ತಣ್ಣ ಜಕ್ಕುಂಡಿ, ನೀಲಕಂಠೇಶ್ವರ ತರುಣ ಸಂಘದ ಚೇರ್ಮನ್ ರಾಘವೇಂದ್ರ ಗೋಟೂರ. ಮಹಿಳಾ ಸಂಘದ ವಿಜಯಲಕ್ಷ್ಮೀ ಪೋಚಗುಂಡಿ, ಸಮಾಜದ ರಾಮಚಂದ್ರ ಗುಗ್ರಿ, ಮಹಾಂತೇಶ ಜೀರಗಿ, ಸುರೇಶ ಗೋಟೂರ, ರಾಘವೇಂದ್ರ ತಳುಗೇರಿ. ಬಸವರಾಜ ಗೋಟುರ. ಡಾ.ವಿಠಲ ಶ್ಯಾವಿ, ಅಶೋಕ ಶ್ಯಾವಿ. ನಾರಾಯಣ ಚೇಗೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.