ರಾಮನಗರ: ಈ ಮುಂಗಾರಿನಲ್ಲಿ ತೀವ್ರ ಮಳೆಯ ಕೊರತೆಯ ನಡುವೆಯೂ ಜಿಲ್ಲೆಯಲ್ಲಿನ ಪ್ರಮುಖ ನಾಲ್ಕು ಅಣೆಕಟ್ಟೆಗಳಲ್ಲಿ ತಕ್ಕ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ರೈತರಲ್ಲಿ ಸಮಾಧಾನ ತಂದಿದೆ
ರಾಮನಗರ: ಈ ಮುಂಗಾರಿನಲ್ಲಿ ತೀವ್ರ ಮಳೆಯ ಕೊರತೆಯ ನಡುವೆಯೂ ಜಿಲ್ಲೆಯಲ್ಲಿನ ಪ್ರಮುಖ ನಾಲ್ಕು ಅಣೆಕಟ್ಟೆಗಳಲ್ಲಿ ತಕ್ಕ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ರೈತರಲ್ಲಿ ಸಮಾಧಾನ ತಂದಿದೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಮಾಗಡಿ ತಾಲೂಕಿನ ಮಂಚನಬೆಲೆ, ಚನ್ನಪಟ್ಟಣ ತಾಲೂಕಿನ ಕಣ್ವ, ಇಗ್ಗಲೂರು ಜಲಾಶಯ ಹಾಗೂ ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯಗಳಿವೆ. ಇವುಗಳಲ್ಲಿ ಕಣ್ವ ಮತ್ತು ಇಗ್ಗಲೂರು ಜಲಾಶಯ ಭರ್ತಿಯಾಗಿದ್ದರೆ, ಉಳಿದ ಎರಡು ಅಣೆಕಟ್ಟೆಗಳಲ್ಲಿ ಭಾಗಶಃ ನೀರಿನ ಸಂಗ್ರಹವಿದೆ.ಕಳೆದ ಎರಡು ವಾರಗಳಿಂದ ಸುರಿದ ಮಳೆಯಿಂದಾಗಿ ಅಣೆಕಟ್ಟೆಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ. ಅಲ್ಲದೆ, ಸತ್ತೇಗಾಲ ನೀರಾವರಿ ಯೋಜನೆ ಮೂಲಕವೂ ಜಲಾಶಯಗಳಲ್ಲಿ ನೀರು ಸಂಗ್ರಹಿಸಲಾಗಿದೆ. ಈ ಕಾರಣದಿಂದಾಗಿ ಬರದ ನಡುವೆಯೂ ಜಿಲ್ಲೆಯ ಪ್ರಮುಖ ಅಣೆಕಟ್ಟೆಗಳು ಬತ್ತಿಲ್ಲ.
ಮಂಚನಬೆಲೆಯಲ್ಲಿ 0.983 ಟಿಎಂಸಿ ನೀರು:ಮಾಗಡಿ ತಾಲೂಕಿನ ಮಂಚನಬೆಲೆ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಚನಬೆಲೆ ಜಲಾಶಯ ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಅಲ್ಲದೆ ನದಿ ಮೂಲಕ ರಾಮನಗರ ತಾಲೂಕಿಗೂ ನೀರು ಹರಿಯುತ್ತಿದೆ.
ಈ ಜಲಾಶಯ ಒಟ್ಟು 1.222 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 0.983 ಟಿಎಂಸಿಯಷ್ಟು ನೀರಿದೆ. ಗರಿಷ್ಠ 736.090 ಮೀಟರ್‌ವರೆಗೆ ನೀರು ಸಂಗ್ರಹ ಮಾಡಬಹುದಾಗಿದ್ದು, ಪ್ರಸ್ತುತ 734.820 ಮೀಟರ್‌ವರೆಗೆ ನೀರಿದೆ. ಒಳಹರಿವು 163 ಕ್ಯೂಸೆಕ್ ಇದ್ದರೆ, ಹೊರಹರಿವು 100 ಕ್ಯೂಸೆಕ್ ಇದೆ. ಇದರಿಂದಾಗಿ ಕುಡಿಯುವ ನೀರಿಗೆ ಜನರ ಜೊತೆಗೆ ಸುತ್ತಲಿನ ವನ್ಯಜೀವಿಗಳಿಗೂ ಅನುಕೂಲ ಆಗಿದೆ.ರಾಮನಗರದಿಂದ 15 ಕಿ.ಮೀ. ದೂರದಲ್ಲಿ ಇರುವ ಕಣ್ವ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 697.990 ಮೀಟರ್ ಇದ್ದು, ಪ್ರಸ್ತುತ 693.760 ಮೀಟರ್‌ನಷ್ಟು ಎತ್ತರದವರೆಗೆ ನೀರು ಸಂಗ್ರಹವಾಗಿದೆ. ಅಂದರೆ 0.322 ಟಿಎಂಸಿ ನೀರು ಶೇಖರಣೆಯಾಗಿದ್ದು, ಒಳ ಹರಿವು 70 ಕ್ಯುಸೆಕ್ ಇದ್ದು, ಹೊರ ಹರಿವು ಸ್ಥಗಿತಗೊಳಿಸಲಾಗಿದೆ. ಕಣ್ವ ಮತ್ತು ಸೀತನ ತೊರೆಗಳಿಗೆ ಅಡ್ಡಲಾಗಿ ಈ ಜಲಾಶಯ ನಿರ್ಮಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಆದರೆ, ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುತ್ತಿರುವ ಕಾರಣ ಇಲ್ಲಿ ಸೂಕ್ತ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ.
ಕಣ್ವ ಜಲಾಶಯ ಭರ್ತಿ:ಚನ್ನಪಟ್ಟಣ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಆಧಾರವಾಗಿರುವ ಇಗ್ಗಲೂರು ಜಲಾಶಯದಲ್ಲಿ ಪ್ರಸ್ತುತ 606.090 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗಿದೆ. 0.182 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಈಗ 0.107 ಟಿಎಂಸಿ ನೀರು ಶೇಖರಣೆಯಾಗಿದೆ. ಒಳ ಹರಿವು 208.71 ಕ್ಯೂಸೆಕ್ ಇದ್ದು, 206.56 ಕ್ಯೂಸೆಕ್ ಹೊರ ಹರಿವು ಇದೆ. ಗರಕಹಳ್ಳಿ–ಶಿಂಷಾ ಏತ ನೀರಾವರಿ ಯೋಜನೆಗಳಿಗೆ ಇದೇ ಅಣೆಕಟ್ಟೆಯಿಂದ ನೀರು ಪೂರೈಸಲಾಗುತ್ತಿದೆ.
ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 605.028 ಮೀಟರ್ ಇದ್ದು, ಸದ್ಯ 603.829 ಮೀಟರ್‌ನಷ್ಟು ನೀರಿನ ಮಟ್ಟವಿದೆ. 1.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಪ್ರಸ್ತುತ 1.19 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 400 ಕ್ಯೂಸೆಕ್ ಇದ್ದರೆ, ಹೊರ ಹರಿವು 400 ಕ್ಯೂಸೆಕ್ ಇದೆ. ಇಲ್ಲಿಂದ ಕಾಲುವೆಗಳ ಮೂಲಕವೂ ಜಮೀನುಗಳಿಗೆ ನೀರು ಹರಿಸಲಾಗುತ್ತದೆ.ಬಾಕ್ಸ್ ................
ಕುಡಿವ ನೀರು, ಕೃಷಿಗೆ ಅನುಕೂಲಈ ಜಲಾಶಯಗಳಲ್ಲಿ ನೀರಿನ ಸಂಗ್ರಹದಿಂದ ಸುತ್ತಲಿನ ಅಂತರ್ಜಲ ಪ್ರಮಾಣ ವೃದ್ಧಿಸಿದ್ದು, ಕುಡಿಯುವ ನೀರು ಮತ್ತು ಕೃಷಿಗೂ ಅನುಕೂಲ ಆಗಿದೆ. ಮಂಚನಬೆಲೆ ಜಲಾಶಯದಿಂದಾಗಿ ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರಿಗೂ ಅನುಕೂಲ ಆಗಿದೆ. ಇಗ್ಗಲೂರು, ಕಣ್ವ ಜಲಾಶಯಗಳಿಂದ ಚನ್ನಪಟ್ಟಣ ತಾಲೂಕಿನ ಹಳ್ಳಿಗಳಲ್ಲಿ ನೀರಿನ ಬವಣೆ ತಪ್ಪಿದೆ. ಹಾರೋಬೆಲೆಯಿಂದಾಗಿ ಕನಕಪುರದಲ್ಲೂ ಅಂತರ್ಜಲ ವೃದ್ಧಿಸುತ್ತಿದೆ. ಹೀಗಾಗಿ ಅಣೆಕಟ್ಟೆ ಸುತ್ತಲಿನ ಜನರಿಗೆ ನೀರಿನ ಕೊರತೆ ಅಷ್ಟಾಗಿ ಕಾಡಿಲ್ಲ.
(ನಾಲ್ಕೂ ಫೋಟೋಗಳನ್ನೂ ಬಳಸಿ ಸರ್)6ಕೆಆರ್ ಎಂಎನ್ 1,2,3,4.ಜೆಪಿಜಿ
1.ಮಾಗಡಿಯ ಮಂಚನಬೆಲೆ ಜಲಾಶಯ2.ಚನ್ನಪಟ್ಟಣದ ಕಣ್ವ ಡ್ಯಾಂ
3.ಚನ್ನಪಟ್ಟಣದ ಇಗ್ಗಲೂರು ಬ್ಯಾರೇಜ್4.ಕನಕಪುರದ ಹಾರೋಬೆಲೆ ಜಲಾಶಯ