ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ಅಂಗಸಂಸ್ಥೆಯಾದ ಫಾ.ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ರೂಬಿ ಜ್ಯುಬಿಲಿ ಮಹೋತ್ಸವ ಕಂಕನಾಡಿಯ ಫಾ.ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು.ಅಂದು ಬೆಳಗ್ಗೆ ದೇರಳಕಟ್ಟೆಯ “ಅವರ್ ಲೇಡಿ ಆಫ್ ಲೂರ್ಡ್ಸ್” ಚಾಪೆಲ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧಿಕಾರಿ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷ ಅ.ವಂ.ಡಾ. ಪೀಟರ್ ಪೌಲ್ ಸಲ್ದಾನ್ಹಾ ಮುಖ್ಯ ಪೂಜಾಧಿಪತಿಯಾಗಿ ಭಾಗವಹಿಸಿ, ಕೃತಜ್ಞತಾ ಬಲಿಪೂಜೆ ಅರ್ಪಿಸಿದರು.
ರೂಬಿ ಜ್ಯುಬಿಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅ.ವಂ.ಡಾ. ಪೀಟರ್ ಪೌಲ್ ಸಲ್ದಾನ್ಹಾ ವಹಿಸಿದ್ದರು. ಮುಂಬೈನ ಪಾಲ್ಘರ್‌ನಲ್ಲಿರುವ ಡಾ.ಎಂ.ಎಲ್. ಧಾವಲೆ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ.ಕೆ.ಎಂ. ಧಾವಲೆ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಮಾಜಿ ನಿರ್ದೇಶಕ ವಂ.ಫಾ. ರಿಚರ್ಡ್ ಅಲೋಶಿಯಸ್ ಕೊವೆಲ್ಲೊ ಅತಿಥಿಗಳಾಗಿ ಭಾಗವಹಿಸಿದ್ದರು.ಫಾ.ಅಗಸ್ಟಸ್ ಮುಲ್ಲರ್ ಮತ್ತು ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸೇವೆ ಸಲ್ಲಿಸಿರುವ ಅಗಲಿದ ಪೂರ್ವಜರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ.ಫಾ. ಫೌಸ್ಟಿನ್ ಲೂಕಾಸ್ ಲೋಬೊ ಅತಿಥಿಗಳನ್ನು ಸ್ವಾಗತಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳ ಸಾಧನೆ ಮತ್ತು ಪ್ರಶಸ್ತಿಗಳನ್ನು ಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭು ಕಿರಣ್ ಪ್ರಸ್ತುತಪಡಿಸಿದರು, ನಂತರ ಮುಖ್ಯ ಅತಿಥಿ ಡಾ.ಕೆ.ಎಂ. ಧಾವಲೆ ಅವರು ರೂಬಿ ಜ್ಯುಬಿಲಿ ಸ್ಮರಣಿಕೆ ಬಿಡುಗಡೆ ಮಾಡಿದರು.ಸಂಜೆ ಮಾಜಿ ಆಡಳಿತಾಧಿಕಾರಿಗಳು, ಸಹಾಯಕ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ವೈದ್ಯಕೀಯ ಅಧೀಕ್ಷಕರು, ಹಳೆಯ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಜತೆಗೆ 25 ವರ್ಷಗಳ ಕಾಲ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಜತೆಗೆ, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಗೌರವಿಸಲಾಯಿತು.
ಕಾಲೇಜಿನ ಆಡಳಿತಾಧಿಕಾರಿ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ ವಂದಿಸಿದರು. ವಿದ್ಯಾರ್ಥಿಗಳು, ಕಲಿಕಾ ವೈದ್ಯರು, ಸ್ನಾತಕೋತ್ತರ ಪದವೀಧರರು ಮತ್ತು ಸಿಬ್ಬಂದಿಗಳಿಂದ ವಿವಿಧ ವರ್ಣರಂಜಿತ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.ಡಾ ದೀಪಾ ಪಾಯಾಸ್, ಡಾ ದೀರಜ್ ಫರ್ನಾಂಡಿಸ್, ಡಾ. ಕ್ರಿಸೆಲ್ ಡೆಸ್ಸ ಮತ್ತು ಅಖಿಲ್ ಮೊಂತೇರೊ ನಿರೂಪಿಸಿದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ.ಫಾ. ಫೌಸ್ಟಿನ್ ಲ್ಯೂಕಾಸ್ ಲೋಬೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ಫಾ.ಡೊನಾಲ್ಡ್ ನಿಲೇಶ್ ಕ್ರಾಸ್ತಾ ಇದ್ದರು.