ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ಆರಂಭ

| Published : Apr 10 2025, 01:02 AM IST

ಸಾರಾಂಶ

ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಹಾಸನ್ ಹೊಯ್ಸಳ, ಬೆಂಗಳೂರು ಸೌತ್ ಪ್ರೈಡ್, ಬೆಂಗಳೂರು ಕೊರವಂಗಳ, ಬೆಂಗಳೂರು ಲೇಕ್‌ಸೈಡ್, ಇನ್ನರ್ ವೀಲ್ ಕ್ಲಬ್, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತ ಸಮಿತಿ, ಜೈಪುರ್ ಇವರ ವತಿಯಿಂದ ಇಂದಿನಿಂದ ಏ.11 ರ ವರೆಗೆ ನಡೆಯಲಿರುವ ಉಚಿತ ಕೈಕಾಲು ಜೋಡಣಾ ಶಿಬಿರವನ್ನು ರೋಟರಿ ಸದಸ್ಯರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಶಾಸಕ ಎಚ್.ಪಿ ಸ್ವರೂಪ್ ಪ್ರಕಾಶ್ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಬುಧವಾರದಿಂದ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ಆರಂಭವಾಗಿದೆ.

ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಹಾಸನ್ ಹೊಯ್ಸಳ, ಬೆಂಗಳೂರು ಸೌತ್ ಪ್ರೈಡ್, ಬೆಂಗಳೂರು ಕೊರವಂಗಳ, ಬೆಂಗಳೂರು ಲೇಕ್‌ಸೈಡ್, ಇನ್ನರ್ ವೀಲ್ ಕ್ಲಬ್, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತ ಸಮಿತಿ, ಜೈಪುರ್ ಇವರ ವತಿಯಿಂದ ಇಂದಿನಿಂದ ಏ.11 ರ ವರೆಗೆ ನಡೆಯಲಿರುವ ಉಚಿತ ಕೈಕಾಲು ಜೋಡಣಾ ಶಿಬಿರವನ್ನು ರೋಟರಿ ಸದಸ್ಯರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಅಪಘಾತ, ಹಾಗೂ ಇನ್ನಿತರ ಕಾಯಿಲೆಗಳಿಂದ ಕೈ, ಕಾಲುಗಳನ್ನು ಕಳೆದುಕೊಂಡ ಹಲವರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಗೆ ಒಳಗಾಗುವ ಜೊತೆಗೆ ಅಲ್ಲೇ ಅಳತೆ ತೆಗೆದುಕೊಂಡು ತುರ್ತಾಗಿ ಅಳವಡಿಸಿದ ಕೃತಕ ಕಾಲುಗಳನ್ನು ಹೊಂದಿ ಸಂತಸ ಪಟ್ಟರು, ಈ ವೇಳೆ ಅವರಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ವೇಳೆ ಮಾತನಾಡಿದ ರೋಟರಿ ಪದಾಧಿಕಾರಿಗಳು, ರೋಟರಿ ಸಂಸ್ಥೆ ಪ್ರತಿ ವರ್ಷ ಹಾಸನದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕೃತಕ ಕೈ ಕಾಲು ಜೋಡಣ ಶಿಬಿರಾಯೋದಿಸಿಕೊಂಡು ಬಂದಿದೆ. ಇದಕ್ಕೆ ಹಾಸನ ಮಾತ್ರವಲ್ಲದೆ ಹೋಗಿದ ಜಿಲ್ಲೆಗಳಿಂದ ಫಲಾನುಭವಿಗಳು ಆಗಮಿಸಿ ಇದರ ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು.

ಈ ವರ್ಷವೂ ಸ್ಥಳೀಯ ಶಾಸಕ ಸ್ವರೂಪ ಪ್ರಕಾಶ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ಶಿಬಿರವನ್ನು ಪುನರ್ ಆಯೋಜಿಸಿದ್ದು, ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ 300ಕ್ಕೂ ಹೆಚ್ಚು ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು ಇಂದಿನಿಂದ ಜೋಡಣಾ ಶಿಬಿರ ಆರಂಭವಾಗಿದೆ. ಏ.11ರವರೆಗೆ ಶಿಬಿರ ನಡೆಯಲಿದ್ದು ಹೆಚ್ಚಿನ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿವಿಧ ಕಾರಣಗಳಿಂದ ಕೈ - ಕಾಲುಗಳನ್ನು ಕಳೆದುಕೊಂಡವರಿಗೆ ಹೊಸ ಬದುಕು ಕಟ್ಟಿ ಕೊಡುವ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಂಡಿದ್ದು, ಹೊಸ ಭರವಸೆಯೊಂದಿಗೆ ಬದುಕುವ ಛಲ ಹುಟ್ಟುಹಾಕುವ ಸಲುವಾಗಿ ಈ ಕಾರ್ಯಕ್ರಮ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಈ ರೀತಿಯ ಶಿಬಿರಗಳನ್ನು ಆಯೋಜಿಸಲು ಸಂಸ್ಥೆ ಮುಂದಾಗಿದೆ ಎಂದರು.

ಈ ವೇಳೆ ಸಂಜೀವಿನಿ ಸಹಕಾರಿ ಆಸ್ಪತ್ರೆಯ ಸುರೇಶ್, ಗಣೇಶ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಹರೀಶ್, ಮೋಹನ್ ದಾಸ್, ಸತ್ಯಸ್ಕಂದ, ರವಿ ಕುಮಾರ್, ಇತರರು ಉಪಸ್ಥಿತರಿದ್ದರು