ಚೆಂಬು ಗ್ರಾಮದ ಕುದುರೆಪಾಯ ಭಾಗದ ಫಲಾನುಭವಿಗಳು ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ನಾಪೋಕ್ಲು : ಚೆಂಬು ಗ್ರಾಮದ ಕುದುರೆಪಾಯ ಭಾಗದ ಫಲಾನುಭವಿಗಳು ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.ಚೆಂಬು ಗ್ರಾಮದ ಕುದುರೆಪಾಯ ಭಾಗದ ೯ ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಸರಕಾರದ ವತಿಯಿಂದ ಉಚಿತ ಕೊಳವೆ
ಬಾವಿ ಕೊರೆಸಿಕೊಡುವ ಮೂಲಕ ದೀರ್ಘಕಾಲದ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಟ್ಟ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣರನ್ನು ಫಲಾನುಭವಿಗಳು ಸನ್ಮಾನಿಸಿದರು.ಈ ಯೋಜನೆಯ ಯಶಸ್ವಿಗೆ ಶ್ರಮಿಸಿದ ಹಾಗೂ ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ಶಾಸಕರ ವಿಶೇಷ ಅಧಿಕಾರಿ ಬಟ್ಟಕಾಳಂಡ ಮುತ್ತಣ್ಣ ಇವರನ್ನು ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಫಲಾನುಭವಿಗಳು ಸನ್ಮಾನಿಸಿದರು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಕೆ ಎ ಇಸ್ಮಾಯಿಲ್ಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರಮುಖ ಫಲಾನುಭವಿಗಳಾದ ಕೆ.ಡಿ. ಚನಿಯಪ್ಪ ನಾಯ್ಕ, ವೇಣುಗೋಪಾಲ, ಕೆ.ಕೆ ಪುರುಷೋತ್ತಮ, ಕೆ.ಐ. ಹೊನ್ನಪ್ಪ, ಕೆ.ಕೆ.ಸದಾಶಿವ, ಈಶ್ವರ ನಾಯ್ಕ (ನೆಲ್ಲಿಕೊಚ್ಚಿ), ಕೆ. ಹರೀಶ್, ರೇವತಿ ರೆಂಗಿಲ್‌ಮೊಟ್ಟೆ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.===============================================================
