ಸಾರಾಂಶ
ಶಿಬಿರದಲ್ಲಿ ತಪಾಸಣೆಗೊಂಡು ಸಮಸ್ಯೆ ಪರಿಹಾರವಾಗದಿದ್ದರೆ ಡಿ.೩೧ ರೊಳಗಾಗಿ ಬೆಂಗಳೂರಿನ ಗರ್ಭಗುಡಿ (ಐವಿ) ಸೆಂಟರ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಲ್ಲಿ ಅಂಥವರಿಗೆ ಚಿಕಿತ್ಸಾ ವೆಚ್ಚದಲ್ಲಿ ಒಂದು ಲಕ್ಷ ರು. ವರೆಗೆ ರಿಯಾಯತಿ ನೀಡಲಾಗುವುದು
ಕನ್ನಡಪ್ರಭ ವಾರ್ತೆ ಇಳಕಲ್ಲ
ಬಂಜೆತನ ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರಿನ ಗರ್ಭಗುಡಿ (ಐವಿ) ಸೆಂಟರ್ ವತಿಯಿಂದ ಇಳಕಲ್ಲಿನ ಸಾಕಾ ಲೆಪ್ರೋಸ್ಕೋಪಿ ಆಸ್ಪತ್ರೆ ಸಹಯೋಗದೊಂದಿಗೆ ಡಿ.೭ರಂದು ಬಂಜೆತನ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶ್ರೀಕಾಂತ ಸಾಕಾ ಹೇಳಿದರು.ತಮ್ಮ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಹಲವರು ಬಂಜೆತನ ಸಮಸ್ಯೆ ಎದುರಿಸುತ್ತಿದ್ದಾರೆ. ಅದರ ಪರಿಹಾರಕ್ಕಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಕನಿಷ್ಟ ಒಂದು ವರ್ಷದಿಂದ ಗರ್ಭಿಣಿಯಾಗಲು ಪ್ರಯತ್ನಿಸಿದರೂ ಯಶಸ್ಸು ಕಾಣದವರು, ಫೆಲ್ವಿಕ್ ಉರಿಯೋತದ ಕಾಯಿಲೆಯಿಂದ ಅಥವಾ ನೋವಿನಿಂದ ಕೂಡಿದ ಮುಟ್ಟು, ಅನಿಯಮಿತ ಮುಟ್ಟಿನ ಚಕ್ರಗಳು, ಅಥವಾ ಶಂಕಿತ ಗರ್ಭಾಶಯದ ನಾಳದ ರೋಗದಿಂದ ಬಳಲುತ್ತಿರುವವರು, ಸಂಗಾತಿ ಕಡಿಮೆ ಮಟ್ಟದ ಸ್ಫರ್ಮ್ ಕೌಂಟ್ ಇರುವವರು, ಒಂದು ಅಥವಾ ಹೆಚ್ಚು ಗರ್ಭಪಾತ ಹೊಂದಿದ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡು ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ತಪಾಸಣೆಗೊಂಡು ಸಮಸ್ಯೆ ಪರಿಹಾರವಾಗದಿದ್ದರೆ ಡಿ.೩೧ ರೊಳಗಾಗಿ ಬೆಂಗಳೂರಿನ ಗರ್ಭಗುಡಿ (ಐವಿ) ಸೆಂಟರ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಲ್ಲಿ ಅಂಥವರಿಗೆ ಚಿಕಿತ್ಸಾ ವೆಚ್ಚದಲ್ಲಿ ಒಂದು ಲಕ್ಷ ರು. ವರೆಗೆ ರಿಯಾಯತಿ ನೀಡಲಾಗುವುದು. ಆದ್ದರಿಂದ ಬಂಜೆತನ ಸಮಸ್ಯೆ ಎದುರಿಸುತ್ತಿರುವ ಇಳಕಲ್ಲ ನಗರ ಹಾಗೂ ಸುತ್ತು ಗ್ರಾಮಗಳ ಜನತೆ ಇದರ ಪ್ರಯೋಜನೆ ಪೆಡೆದುಕೊಳ್ಳ ಬೇಕು ಎಂದು ಕೋರಿದ್ದಾರೆ. ಗೋಷ್ಠಿಯಲ್ಲಿ ಡಾ.ಆರತಿ ಸಾಕಾ, ಪಿಆರ್‌ಒ ಚಂದ್ರಕಾಂತ, ಡಾ.ಮಹಾಂತೇಶ ಇದ್ದರು.