ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ 31ರಂದು ಮಧುಮೇಹ ಪಾದ (ಪೋಡಿಯಾಟ್ರೀ) ಉಚಿತ ತಪಾಸಣಾ ಶಿಬಿರ

| Published : May 29 2025, 12:45 AM IST

ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ 31ರಂದು ಮಧುಮೇಹ ಪಾದ (ಪೋಡಿಯಾಟ್ರೀ) ಉಚಿತ ತಪಾಸಣಾ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಮಧುಮೇಹ ಪಾದ ತಪಾಸಣಾ ಶಿಬಿರ ನಡೆಯಲಿದೆ. ಈ ಉಚಿತ ಕಾರ್ಯಕ್ರಮವನ್ನು ಮಾಹೆಯ ಪೊಡಿಯಾಟ್ರಿ ಆ್ಯಂಡ್ ಡಯಾಬಿಟಿಕ್ ಫೂಟ್ ಕೇರ್ ಅಂಡ್ ರಿಸರ್ಚ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಮಧುಮೇಹ ಪಾದ ತಪಾಸಣಾ ಶಿಬಿರ ನಡೆಯಲಿದೆ. ಈ ಉಚಿತ ಕಾರ್ಯಕ್ರಮವನ್ನು ಮಾಹೆಯ ಪೊಡಿಯಾಟ್ರಿ ಆ್ಯಂಡ್ ಡಯಾಬಿಟಿಕ್ ಫೂಟ್ ಕೇರ್ ಅಂಡ್ ರಿಸರ್ಚ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ನವದೆಹಲಿಯ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಸಾಮಾಜಿಕ ಜವಾಬ್ದಾರಿ ಉಪಕ್ರಮದಿಂದ ಬೆಂಬಲಿತವಾಗಿದೆ.ಈ ಶಿಬಿರದಲ್ಲಿ ಮಧುಮೇಹ ರೋಗಿಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವ ಪಾದದ ಹುಣ್ಣುಗಳು, ಸೋಂಕುಗಳು ಅಥವಾ ರಕ್ತಪರಿಚಲನಾ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ರಕ್ತನಾಳಗಳ ಮತ್ತು ನರವೈಜ್ಞಾನಿಕ ಪರೀಕ್ಷೆ ಸೇರಿದಂತೆ ಸಮಗ್ರ ಪಾದದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಭಾಗವಹಿಸುವವರು ಪಾದದ ಆರೈಕೆ, ಪಾದರಕ್ಷೆಗಳ ಶಿಫಾರಸುಗಳು ಮತ್ತು ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಳ ಕುರಿತು ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನು ಸಹ ಪಡೆಯುತ್ತಾರೆ. ಮುಂದಿನ ಅವಶ್ಯ ಪರೀಕ್ಷೆಗಳು ಮತ್ತು ಚಿಕಿತ್ಸೆಯಲ್ಲಿ ಶೇ 20 ರಿಯಾಯಿತಿಯನ್ನು ಸಹ ಜೂ 15 ರವರೆಗೆ ಮಾಡಲಾಗುತ್ತದೆ.ಈ ಕಾರ್ಯಕ್ರಮದ ಕುರಿತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್, ‘ಮಧುಮೇಹದ ಕಾರಣದಿಂದ ಹಲವರು ಕಾಲಿನ ಸಮಸ್ಯೆಗಳ ಕಾರಣದಿಂದ ತಮ್ಮ ಚಲನೆ ಹಾಗೂ ಸ್ವತಂತ್ರತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಈ ಸಮಸ್ಯೆಗಳನ್ನು ತಡೆಯಬಹುದು. ಈ ಶಿಬಿರವು ಕಾಲಿನ ಸಮಸ್ಯೆಗಳನ್ನು ಬೇಗನೆ ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡಲು ಸಹಾಯಕವಾಗುತ್ತದೆ. ಕಾಲು ನೋವು, ಮರಗಟ್ಟುವಿಕೆ, ಅಥವಾ ಜುಮ್ಮೆನಿಸುವಿಕೆಯ ಲಕ್ಷಣಗಳಿರುವವರು ಸೇರಿದಂತೆ ಎಲ್ಲಾ ಮಧುಮೇಹ ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನಾನು ವಿನಂತಿಸುತ್ತೇನೆ’ ಎಂದಿದ್ದಾರೆ. ಎಂಸಿಎಚ್‌ಪಿಯ ಡೀನ್ ಮತ್ತು ಡಯಾಬಿಟಿಕ್ ಫೂಟ್ ಕೇರ್ ಆ್ಯಂಡ್ ರಿಸರ್ಚ್‌ನ ಮುಖ್ಯಸ್ಥ ಡಾ. ಜಿ. ಅರುಣ್ ಮಯ್ಯ, ಮಧುಮೇಹದ ತೊಡಕುಗಳನ್ನು ತಡೆಗಟ್ಟಲು ಆರಂಭಿಕ ತಪಾಸಣೆಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಹಾಗೂ ಕಸ್ತೂರ್ಬಾ ಆಸ್ಪತ್ರೆಗಳು ಮಧುಮೇಹ ಸಂಬಂಧಿತ ನರಗಳ ನೋವು (ಡಯಾಬಿಟಿಕ್ ನ್ಯೂರೋಪಥಿ) ನಿರ್ವಹಿಸಲು ಸಶಕ್ತವಾಗಿವೆ ಎಂದು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7338343777