ಇಲ್ಲಿನ ಪಡುಬೈಲೂರು ಶ್ರೀ ಇಷ್ಟಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್ ತನ್ನ ಸಾರ್ಥಕ 11 ವರ್ಷಗಳ ಸೇವೆಯನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ.
ಉಡುಪಿ : ಇಲ್ಲಿನ ಪಡುಬೈಲೂರು ಶ್ರೀ ಇಷ್ಟಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್ ತನ್ನ ಸಾರ್ಥಕ 11 ವರ್ಷಗಳ ಸೇವೆಯನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ.
ಬೈಲೂರು ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಅ. 2ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿರುವ ಶಿಬಿರವನ್ನು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಸರಕಾರದ ವಿಷನ್ ಕಮಿಟಿ ಅಧ್ಯಕ್ಷ ಡಾ . ಕೃಷ್ಣ ಪ್ರಸಾದ್ ಕೂಡ್ಲು ಉದ್ಘಾಟಿಸದ್ದಾರೆ. ಶಾಸಕ ಯಶ್ಪಾಲ್ ಎ. ಸುವರ್ಣ, ಹಿರಿಯ ನ್ಯಾಯವಾದಿ, ದೇವಸ್ಥಾನದ ಸಲಹಾ ಸಮಿತಿಯ ಸದಸ್ಯ ಮಟ್ಟಾರು ರತ್ನಾಕರ ಹೆಗಡೆ, ಮೊಕ್ತೇಸರ ಮೋಹನ ಮುದ್ದಣ್ಣ ಶೆಟ್ಟಿ ಹಾಗೂ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ತಂತ್ರಿ ಅವರು ಭಾಗವಹಿಸಲಿದ್ದಾರೆ.ಶಿಬಿರದಲ್ಲಿ ನೇತ್ರ ಉಚಿತ ತಪಾಸಣೆ, ಲಭ್ಯವಿರುವ ಉಚಿತ ಔಷಧಿ ವಿತರಣೆ, ಅಗತ್ಯ ಕಂಡು ಬಂದಂತವರಿಗೆ ಉಚಿತ ಕನ್ನಡಕ ನೀಡುವ ವ್ಯವಸ್ಥೆ ಹಾಗೂ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
