ರಾಜೀವ್‌ ಕಾಲೇಜಲ್ಲಿ ಉಚಿತ ಕಣ್ಣಿನ ತಪಾಸಣೆ

| Published : Jul 26 2025, 12:00 AM IST

ರಾಜೀವ್‌ ಕಾಲೇಜಲ್ಲಿ ಉಚಿತ ಕಣ್ಣಿನ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

ವಾಸನ್ ಐ ಕೇರ್‌ನ ಎಕ್ಸಿಕ್ಯೂಟಿವ್ ಮ್ಯಾನೇಜರ್ ಸಂಜಯ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಣ್ಣು ನಮಗೆ ದಾರಿ ತೋರಿಸುವ ದಿವ್ಯಾನುಗ್ರಹ. ಸಣ್ಣದಾದರೂ ಯಾವುದೇ ತೊಂದರೆಯನ್ನು ನೀಡುತ್ತಿರುವುದನ್ನು ನಿರ್ಲಕ್ಷಿಸದೇ, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಇಂದು ಹಲವರು ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯವನ್ನು ಕಡೆಗಣಿಸುತ್ತಿರುವ ಸಂದರ್ಭದಲ್ಲಿ, ಇಂತಹ ಶಿಬಿರಗಳು ಆರೋಗ್ಯದ ಬಗ್ಗೆ ಹೊಸ ಚಿಂತನೆಗೆ ನಾಂದಿಯಾಗುತ್ತವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

"ಆರೋಗ್ಯವೇ ಭಾಗ್ಯ " ಎಂಬ ಮಾತು ಕೇವಲ ನುಡಿಮುತ್ತು ಅಲ್ಲ, ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ರಾಜೀವ್ ಪಾಲಿಟೆಕ್ನಿಕ್ ವತಿಯಿಂದ ಹಾಗೂ ರಾಜೀವ್ ಹೆಲ್ತ್ ಕ್ಲಬ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತ ಗುಂಪು ಪರೀಕ್ಷೆಯನ್ನು ವಾಸನ್ ಐ ಕೇರ್ ಮತ್ತು ರೆಡ್ ರಿಬ್ಬನ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.ವಾಸನ್ ಐ ಕೇರ್‌ನ ಎಕ್ಸಿಕ್ಯೂಟಿವ್ ಮ್ಯಾನೇಜರ್ ಸಂಜಯ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಣ್ಣು ನಮಗೆ ದಾರಿ ತೋರಿಸುವ ದಿವ್ಯಾನುಗ್ರಹ. ಸಣ್ಣದಾದರೂ ಯಾವುದೇ ತೊಂದರೆಯನ್ನು ನೀಡುತ್ತಿರುವುದನ್ನು ನಿರ್ಲಕ್ಷಿಸದೇ, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಇಂದು ಹಲವರು ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯವನ್ನು ಕಡೆಗಣಿಸುತ್ತಿರುವ ಸಂದರ್ಭದಲ್ಲಿ, ಇಂತಹ ಶಿಬಿರಗಳು ಆರೋಗ್ಯದ ಬಗ್ಗೆ ಹೊಸ ಚಿಂತನೆಗೆ ನಾಂದಿಯಾಗುತ್ತವೆ ಎಂದು ಹೇಳಿದರು.ಆರೋಗ್ಯ ಮತ್ತು ಕುಟುಂಬ ಇಲಾಖೆಯ , ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಬಲ್ಲೇನಹಳ್ಳಿ ಮಾತನಾಡಿ, ಮಕ್ಕಳು ಪೋಷಕರ ಪ್ರಪಂಚ, ಅವರ ಆರೋಗ್ಯವೇ ಕುಟುಂಬದ ಸುಖದ ಮೂಲ. ಜಂಕ್‌ಫುಡ್ ಸೇವನೆ, ನಿದ್ರೆಯ ಕೊರತೆ, ಫೋನ್‌ನ ಅತಿಯಾದ ಬಳಕೆ ಈ ಎಲ್ಲವೂ ದೀರ್ಘಕಾಲಿಕ ಆರೋಗ್ಯ ಹಾನಿಗೆ ಕಾರಣವಾಗಬಹುದು.ನಾವೆಲ್ಲರೂ ಜಾಗೃತರಾಗಬೇಕು. ಪರೀಕ್ಷೆ ಮಾಡಿಸಿಕೊಳ್ಳಬೇಕು, ಮಾಹಿತಿ ಹೊಂದಿರುವುದು ನಮ್ಮ ಕರ್ತವ್ಯವಾಗಿದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಶಿವೇಗೌಡ ಮಾತನಾಡಿ, ಬೇಗ ಮಲಗಿ, ಬೇಗ ಎದ್ದರೆ ದೇಹವೂ ಆರೋಗ್ಯವಾಗಿರುತ್ತದೆ, ಮನಸ್ಸು ಸಮತೋಲನದಲ್ಲಿರುತ್ತದೆ. ನಮ್ಮ ದೇಹದಲ್ಲಿ ಕಣ್ಣುಗಳು ಬಹುಪಾಲು ಕೆಲಸ ಮಾಡುತ್ತವೆ, ಅವುಗಳ ಆರೈಕೆ ಮೊದಲ ಆದ್ಯತೆ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಉಪದೇಶಿಸಿದರು.ರಾಜೀವ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಎಂ. ಆರ್‌. ಶಂಕರೇಗೌಡ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ರಕ್ತದಾನವು ಮಾನವೀಯತೆಗೆ ಅತ್ಯಂತ ಉನ್ನತವಾದ ಸೇವೆ. ಬದುಕಿನಲ್ಲಿ ನಾವು ಏನು ಪಡೆದವು ಎಂಬುದಕ್ಕಿಂತ, ನಾವು ಏನು ನೀಡಿದೆವು ಎಂಬುದೇ ನಮ್ಮ ಸಾರ್ಥಕತೆಯ ಪ್ರಮಾಣ. ರಕ್ತದಾನ ಮಾಡುವ ಮೂಲಕ ನಾವೊಂದು ಪ್ರಾಣ ಉಳಿಸಬಲ್ಲೆವು. ಇದಕ್ಕಿಂತ ದೊಡ್ಡ ಪುಣ್ಯವೇನಿದೆ. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಕೃತಕವಾಗಿ ತಯಾರಿಸಲಾಗುವುದಿಲ್ಲ. ಪ್ರತಿಯೊಬ್ಬ ಆರೋಗ್ಯವಂತನು, ಕಾಲಕಾಲಕ್ಕೆ ರಕ್ತದಾನ ಮಾಡಬೇಕು ಎಂದು ಹೇಳಿದರು.ಶಿಬಿರದಲ್ಲಿ ೪೦೦ ವಿದ್ಯಾರ್ಥಿಗಳು ಭಾಗವಹಿಸಿ ಕಣ್ಣಿನ ತಪಾಸಣೆ ಹಾಗೂ ರಕ್ತದ ಗುಂಪು ಪರೀಕ್ಷೆ ಮಾಡಿಸಿಕೊಂಡರು. ಕೆಲವರಿಗೆ ಸ್ವಲ್ಪಮಟ್ಟದ ದೃಷ್ಠಿ ಸಮಸ್ಯೆ ಕಂಡು ಬಂದಿದ್ದು, ಶಿಬಿರದಲ್ಲೇ ಸಲಹೆ ನೀಡಲಾಯಿತು.