ಸಾರಾಂಶ
ಕಾಗಡಿಕಟ್ಟೆ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಉಚಿತ ನೇತ್ರ ತಪಸಣಾ ಶಿಬಿರ ನಡೆಯಿತು. 52 ಮಂದಿ ನೇತ್ರ ಪರೀಕ್ಷೆ ಮಾಡಿಸಿಕೊಂಡರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಕಾಗಡಿಕಟ್ಟೆ ಆಯುಷ್ಮನ್ ಆರೋಗ್ಯ ಮಂದಿರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಸೋಮವಾರ ನಡೆಯಿತು.52 ಮಂದಿ ಗ್ರಾಮೀಣ ಜನರು ನೇತ್ರ ಪರೀಕ್ಷೆ ಮಾಡಿಸಿಕೊಂಡರು. 10 ಮಂದಿ ವೃದ್ದರಿಗೆ ಕಣ್ಣಿನ ಪೊರೆ ಇದ್ದು, ಅವರನ್ನು ಅಮ್ಮಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿ, ಆಸ್ಪತ್ರೆಯ ವಾಹನದಲ್ಲೇ ಮಂಗಳವಾರ ವಾಪಾಸ್ಸು ತಂದು ಬಿಡಲಾಯಿತು.
ನೇತ್ರ ತಜ್ಞರಾದ ಸಂದೀಪ್, ಪ್ರೀತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದಿವ್ಯ, ಸಮುದಾಯ ಆರೋಗ್ಯ ಅಧಿಕಾರಿ ಧರಣೇಶ್ ರಾಜ್ ಇದ್ದರು.