ಸಾರಾಂಶ
ಮನುಷ್ಯನಿಗೆ ಎಲ್ಲ ಅಂಗಾಂಗಗಳಿಗಿಂತ ಕಣ್ಣು ಅತೀ ಅವಶ್ಯಕ. ಕಣ್ಣು ಇದ್ದರೆ ಇಡೀ ಪ್ರಪಂಚವನ್ನು ನೋಡಬಹುದು.
ಹರಪನಹಳ್ಳಿ: ತಾಲೂಕಿನ ತೌಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ದಾವಣಗೆರೆ ''''''''ವಾಸನ್ ಐ ಕೇರ್ ಕಣ್ಣಿನ ಆಸ್ಪತ್ರೆ'''''''' ಸಂಯುಕ್ತಾ ಆಶ್ರಯದಲ್ಲಿ ಕಣ್ಣಿನ ತಪಾಸಣೆ ಶಿಬಿರ ಜರುಗಿತು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಯರಬಳ್ಳಿ ಉಮಾಪತಿ ಮಾತನಾಡಿ, ಮನುಷ್ಯನಿಗೆ ಎಲ್ಲ ಅಂಗಾಂಗಗಳಿಗಿಂತ ಕಣ್ಣು ಅತೀ ಅವಶ್ಯಕ. ಕಣ್ಣು ಇದ್ದರೆ ಇಡೀ ಪ್ರಪಂಚವನ್ನು ನೋಡಬಹುದು. ಕಣ್ಣು ಇಲ್ಲದಿದ್ದರೆ ನಮ್ಮ ಜೀವನವೇ ಬರಡಾಗಿ ಹೋಗುತ್ತದೆ. ಪ್ರತಿಯೊಬ್ಬರು ಕಣ್ಣನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಹೇಳಿದರು. ಈ ಭಾಗದ 11 ಹಳ್ಳಿಯ ರೈತರಿಗೆ, ಬಡವರಿಗೆ, ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕೋರಿದರು.ಮುಖಂಡ ಕ್ಯಾರಕಟ್ಟೆ ಕೊಟ್ರುಗೌಡ ಮಾತನಾಡಿ, ಈ ಭಾಗದ ಜನರು ತಮ್ಮ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ದೂರದ ಊರಿಗೆ ಹೋಗಬೇಕಾಗಿತ್ತು. ಈ ಪ್ರಾಥಮಿಕ ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ 11 ಹಳ್ಳಿಯ ಜನರಿಗೆ ಉಪಯೋಗವಾಗಲು ''''''''ವಾಸನ್ ಐ ಕೇರ್ ''''''''ಆಸ್ಪತ್ರೆಯವರಿಂದ ಉಚಿತ ಕಣ್ಣಿನ ಶಿಬಿರ ಆಯೋಜಿಸಲಾಗಿದೆ ಎಂದರು.
ಯಶಸ್ವಿನಿ ಕಾರ್ಡ ಇದ್ದವರಿಗೆ ಉಚಿತವಾಗಿ ಕಣ್ಣಿನ ಸಮಸ್ಯೆ ಇದ್ದರೆ ಕಣ್ಣಿನ ಪೊರೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಹೇಳಿದರು.ಕಣ್ಣಿನ ವೈದ್ಯಾಧಿಕಾರಿ ಎಚ್.ಎಸ್. ನಾಗರಾಜ್ ಮಾತನಾಡಿದರು. ಶಿಬಿರದಲ್ಲಿ 11 ಹಳ್ಳಿಯ ಸಾರ್ವಜನಿಕರು, ಶಾಲಾ ಮಕ್ಕಳು ತಪಾಸಣೆ ಮಾಡಿಸಿಕೊಂಡರು. 200ಕ್ಕೂ ಹೆಚ್ಚು ಜನರು ತಪಾಸಣೆಗೊಳಪಟ್ಟರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಕೆ.ಎಂ. ಮಂಜುನಾಥಯ್ಯ, ತೌಡೂರು ಕೆಂಚಪ್ಪ, ಶೆಟ್ಟಿನಾಯ್ಕ್, ಕೊಟ್ರುಗೌಡ, ನಿರ್ದೆಶಕರಾದ ದೊಡ್ಡ ಸಿದ್ದಪ್ಪ, ಡಿ. ಕೆ.ಪರುಸಪ್ಪ, ಜಿಟ್ಟನಕಟ್ಟೆ ಹನುಮಂತಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವರಾಜ್, ಮಲ್ಲೇಶ್, ವೈದ್ಯಾಧಿಕಾರಿಗಳಾದ ಡಾ.ನಾಗರಾಜ್ ಎಚ್.ಎಸ್., ನೂರ್ ಅಹಮದ್, ಮನೋಜ್, ಕಾವ್ಯ ಭಾಗವಹಿಸಿದ್ದರು.