ಸಾರಾಂಶ
ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಖ್ಯಾತ ವೈದ್ಯರಾದ ಡಾ.ಸತೀಶ ಮುಗ್ಗನವರ ಆನಂದ ಕ್ಲಿನಿಕ್‌ನಲ್ಲಿ ಜು.15 ರಂದು ಬೆಳಗ್ಗೆ 11 ರಿಂದ 2 ಗಂಟೆಯವರೆಗೆ ನೇತ್ರ ಉಚಿತ ಚಿಕಿತ್ಸಾ ಶಿಬಿರ ಜರುಗಲಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಖ್ಯಾತ ವೈದ್ಯರಾದ ಡಾ.ಸತೀಶ ಮುಗ್ಗನವರ ಆನಂದ ಕ್ಲಿನಿಕ್‌ನಲ್ಲಿ ಜು.15 ರಂದು ಬೆಳಗ್ಗೆ 11 ರಿಂದ 2 ಗಂಟೆಯವರೆಗೆ ನೇತ್ರ ಉಚಿತ ಚಿಕಿತ್ಸಾ ಶಿಬಿರ ಜರುಗಲಿದೆ. 4 ದಶಕಗಳಿಂದ ನಿರಂತ ಸೇವೆ ಸಲ್ಲಿಸುತ್ತಿರುವ ಆಕಾಶದೀಪ ನೇತ್ರಾಲಯದ ಸಂಯುಕ್ತಾಶ್ರಯದಲ್ಲಿ ತಪಾಷಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮೊತಿಬಿಂದು ಮತ್ತು ಕಾಜಬಿಂದು, ಲಾಸುರ್, ಪಡದೆಯ ರೋಗ, ಕಣ್ಣುಗಳ ಕ್ಯಾನ್ಸರ್, ಕಣ್ಣುಗುಡ್ಡಿಯ ರೋಗ ಸೇರಿದಂತೆ ಕಣ್ಣಿನ ಆರೋಗ್ಯ ಕುರಿತು ಕಾಳಜಿ ಹಾಗೂ ತಪಾಷಣೆಯನ್ನು ಆಕಾಶದೀಪ ನೇತ್ರಾಲಯದ ನೇತ್ರತಜ್ಞರಾದ ಡಾ.ಉದಯ ಪಾಟೀಲ, ಡಾ.ಕುಣಾಲ ಉದಯ ಪಾಟೀಲ ಅವರು ರೋಗಿಗಳ ತಪಾಷಣೆ ನಡೆಸುವರು. ಪಶ್ಚಿಮ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡಕದಿಂದ ಮುಕ್ತವಾಗಲು ರೊಬೊಟಿಕ್ ಲೇಝರ್ ಯಂತ್ರ ಬಳಕೆ ಮಾಡುತ್ತಿರುವುದು ವಿಶೇಷ. ಹೆಸರು ನೋಂದಾಯಿಸಿಕೊಳ್ಳಲು ಮೊ.7796425159 ಸಂಪರ್ಕಿಸಿ.