ಹೊಸಕೋಟೆ: ದಿವಂಗತ ಮಾಜಿ ಶಾಸಕ ಬಿ.ಚನ್ನಬೈರಗೌಡರ ಸ್ಮರಣಾರ್ಥ ಕರುನಾಡು ಪ್ರಜಾ ಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ಎಚ್.ಎಂ.ಸುಬ್ಬರಾಜು ತಾಲೂಕು ಕಚೇರಿಗೆ ಆಗಮಿಸುವ ರೈತರು ಹಾಗೂ ಸಾರ್ವಜನಿಕರಿಗಾಗಿ ಪ್ರತಿದಿನ ದಾಸೋಹಕ್ಕಾಗಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡರ ಮಾರ್ಗದರ್ಶನದಲ್ಲಿ ಉದ್ಘಾಟಿದ್ದೇವೆ ಎಂದು ಕರುನಾಡು ಪ್ರಜಾಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ಎಚ್.ಎಂ.ಸುಬ್ಬರಾಜು ಹೇಳಿದರು
ಹೊಸಕೋಟೆ: ದಿವಂಗತ ಮಾಜಿ ಶಾಸಕ ಬಿ.ಚನ್ನಬೈರಗೌಡರ ಸ್ಮರಣಾರ್ಥ ಕರುನಾಡು ಪ್ರಜಾ ಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ಎಚ್.ಎಂ.ಸುಬ್ಬರಾಜು ತಾಲೂಕು ಕಚೇರಿಗೆ ಆಗಮಿಸುವ ರೈತರು ಹಾಗೂ ಸಾರ್ವಜನಿಕರಿಗಾಗಿ ಪ್ರತಿದಿನ ದಾಸೋಹಕ್ಕಾಗಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡರ ಮಾರ್ಗದರ್ಶನದಲ್ಲಿ ಉದ್ಘಾಟಿದ್ದೇವೆ ಎಂದು ಕರುನಾಡು ಪ್ರಜಾಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ಎಚ್.ಎಂ.ಸುಬ್ಬರಾಜು ಹೇಳಿದರು.
ಬಳಿಕ ಮಾತನಾಡಿದ ಸುಬ್ಬರಾಜು, ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ 2ರವರೆಗೆ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಾಜಿ ಶಾಸಕ ಬಿ.ಚನ್ನಬೈರಗೌಡರು ಕ್ಷೇತ್ರದ ಅಭಿವೃದ್ಧಿಗೆ ಹಲವು ಶಾಶ್ವತ ಕೊಡುಗೆಗಳನ್ನು ನೀಡಿದ್ದರು. ಚನ್ನಬೈರಗೌಡರ ಜನಪರ ಸೇವೆ ಮತ್ತು ಅಭಿವೃದ್ಧಿ ದೃಷ್ಟಿಕೋನವನ್ನು ಸ್ಮರಿಸುವ ಉದ್ದೇಶದಿಂದ ಈ ಅನ್ನ ದಾಸೋಹ ಆರಂಭಿಸಲಾಗಿದೆ. ತಾಲೂಕು ಕಚೇರಿಗೆ ಬರುವ ಯಾವುದೇ ರೈತ ಅಥವಾ ಸಾರ್ವಜನಿಕರು ಹಸಿವಿನಿಂದ ತೆರಳಬಾರದು ಎಂಬುದು ನಮ್ಮ ಆಶಯ ಎಂದರು.ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ಚನ್ನಬೈರಗೌಡರ ಸ್ಮರಣಾರ್ಥ ಆರಂಭಗೊಂಡಿರುವ ಅನ್ನದಾಸೋಹವನ್ನು ರೈತರು ಹಾಗೂ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಅನ್ನಭಾಗ್ಯದ ಹೆಸರಿನಲ್ಲಿ ಅಕ್ಕಿ ವಿತರಿಸಿ ಹಸಿವು ಮುಕ್ತ ಸಮಾಜದ ನಿರ್ಮಿಸಲು ಸಂಕಲ್ಪ ತೊಟ್ಟಿದೆ ಎಂದರು.
ಈ ವೇಳೆ ಬಿಎಂಆರ್‌ಡಿಎ ಸದಸ್ಯ ಡಾ.ಹೆಚ್.ಎಂ.ಸುಬ್ಬರಾಜು, ಉದ್ಯಮಿ ಸುಭಾಷ್‌ಗೌಡ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರ.ಕಾರ್ಯದರ್ಶಿ ಹರೀಶ್ ಚಕ್ರವರ್ತಿ ಇತರರು ಹಾಜರಿದ್ದರು.ಫೋಟೋ: 18 ಹೆಚ್‌ಎಸ್‌ಕೆ 1 ಮತ್ತು 2
ಹೊಸಕೋಟೆ ತಾಲೂಕು ಕಚೇರಿ ಆವರಣದಲ್ಲಿ ದಾಸೋಹ ಕುಟೀರವನ್ನು ಕರುನಾಡು ಪ್ರಜಾಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ಎಚ್.ಎಂ.ಸುಬ್ಬರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ರಾಜಣ್ಣ ಉದ್ಘಾಟಿಸಿದರು.