ಲಯನ್ಸ್ ಕ್ಲಬ್ ಆವರಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ

| Published : Nov 04 2024, 12:32 AM IST

ಸಾರಾಂಶ

ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವನ್ನು ನವೆಂಬರ್ ೨ರಿಂದ ನವೆಂಬರ್ ೧೫ರವರೆಗೂ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ. ಸತತವಾಗಿ ೧೫ ದಿನಗಳ ಕಾಲ ಕುವೆಂಪು ನಗರದಲ್ಲಿರುವ ಲಯನ್ಸ್ ಸೇವಾ ಸಂಸ್ಥೆಯಲ್ಲಿ ಈ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ನವೆಂಬರ್ ೨ರಿಂದ ೧೫ರವರೆಗೂ ಬೆಳಿಗ್ಗೆ ೯:೩೦ರಿಂದ ಸಂಜೆ ೫:೩೦ರವರೆಗೂ ಈ ಚಟುವಟಿಕೆ ನಡೆಯಲಿದೆ ಎಂದರು. ಇಲ್ಲಿಗೆ ಬಂದು ಉಚಿತ ಸೇವೆ ಪಡೆಯಬಹುದು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಬಿ.ಎಂ. ರಸ್ತೆ, ಹುಡಾ ಕಚೇರಿ ಎದುರು ಕುವೆಂಪು ರಸ್ತೆ ಬಳಿ ಇರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವನ್ನು ನವೆಂಬರ್ ೨ರಿಂದ ನವೆಂಬರ್ ೧೫ರವರೆಗೂ ಉಚಿತವಾಗಿ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್ ತಿಳಿಸಿದರು. ಮಾಧ್ಯಮಕ್ಕೆ ಮಾಹಿತಿ ನೀಡಿದ ಐ.ಜಿ. ರಮೇಶ್ ಅವರು, ಈ ವರ್ಷ ನಾವು ಲಯನ್ಸ್ ಹಾಗೂ ಕಾಂಪಾನಿ ಕಂಪನಿಯಿಂದ ಉಚಿತ ಶಿಬಿರವನ್ನು ಏರ್ಪಡಿಸಿದ್ದು, ಅನೇಕರಲ್ಲಿ ಶುಗರ್, ಬಿಪಿ ಇರುವುದು, ಜೊತೆಯಲ್ಲಿ ಅನೇಕರಿಗೆ ಸೊಂಟ ನೋವು, ಮಂಡಿ ನೋವು ಇರುವುದನ್ನು ಗಮನಿಸಿದಾಗ ಈ ಕಾರ್ಯಕ್ರಮ ಆಯೋಜಿಸಿದರೇ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿ ಲಯನ್ಸ್ ಕ್ಲಬ್ ಸೇವಾ ಸಂಸ್ಥೆ ಹಾಗೂ ಕಂಪನಿಯೋ ಇವರ ಸಹಯೋಗದಲ್ಲಿ ಮೇಘನಾ ಮತು ರೋಹಿತ್ ಅವರು ಒಪ್ಪಿಕೊಂಡಿದ್ದಾರೆ. ಸತತವಾಗಿ ೧೫ ದಿನಗಳ ಕಾಲ ಕುವೆಂಪು ನಗರದಲ್ಲಿರುವ ಲಯನ್ಸ್ ಸೇವಾ ಸಂಸ್ಥೆಯಲ್ಲಿ ಈ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ನವೆಂಬರ್ ೨ರಿಂದ ೧೫ರವರೆಗೂ ಬೆಳಿಗ್ಗೆ ೯:೩೦ರಿಂದ ಸಂಜೆ ೫:೩೦ರವರೆಗೂ ಈ ಚಟುವಟಿಕೆ ನಡೆಯಲಿದೆ ಎಂದರು. ಇಲ್ಲಿಗೆ ಬಂದು ಉಚಿತ ಸೇವೆ ಪಡೆಯಬಹುದು. ಪ್ರತಿ ದಿನ ಅರ್ಧಗಂಟೆ ಚಿಕಿತ್ಸೆ ಪಡೆದರೆ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು.

ಶಿಬಿರದಲ್ಲಿ ಕಂಪಾನಿಯೋದ ರೋಹಿತ್ ಶೆಟ್ಟಿ ಕುಂದಾಪುರ, ಮೇಘನಾ ಮಂಜುನಾಥ್ ಮತ್ತಾವರ, ಲಯನ್ಸ್ ಕ್ಲಬ್ ಹಿರಿಯರಾದ ಅಶೋಕ್, ಎಚ್.ಆರ್‌. ಚಂದ್ರೇಗೌಡ, ಸೋಮಣ್ಣ, ರವಿ, ನಾಗರಾಜು, ಹೆಚ್.ಆರ್. ಪ್ರಕಾಶ್, ಲೀಲಾವತಿ, ಗಿರೀಶ್, ಅನಂತಣ್ಣ, ಶಿವಸ್ವಾಮಿ, ಇತರರು ಉಪಸ್ಥಿತರಿದ್ದರು.