ಮಾಚಿದೇವರ ಜಯಂತಿ ಪ್ರಯುಕ್ತ ಆರೋಗ್ಯ ಉಚಿತ ತಪಾಸಣಾ ಶಿಬಿರ

| Published : Feb 05 2025, 12:36 AM IST

ಸಾರಾಂಶ

ಗ್ರಾಮದ ಎಲ್ಲಾ ಜಾತಿಯ ಎಲ್ಲಾ ಜನಾಂಗವು ಸಮನ್ವಯದಿಂದ ಒಗ್ಗೂಡಿರುವುದು ಸಂತಸದ ವಿಚಾರ. ಊರಿನ ಜನರಲ್ಲಿ ಒಗ್ಗಟ್ಟಿದ್ದಾಗ ಅಭಿವೃದ್ಧಿ ಸಾಧ್ಯವಾಗಲಿದೆ. ಆದ್ದರಿಂದ ಶ್ರೀಮಡಿವಾಳ ಮಾಚಿದೇವರ ಜಯಂತಿ ಯಶಸ್ವಿಯಾಗಿದೆ. ನಮ್ಮ ಪೂರ್ವಿಕರು, ಹಿರಿಯರನ್ನು, ನಮಗೆ ಸನ್ಮಾರ್ಗವನ್ನು ತೋರಿಸಿದರನ್ನ ನೆನೆಯುವುದು ಮಾನವ ಧರ್ಮ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ಗ್ರಾಮದ ಶ್ರೀಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್‌ ವತಿಯಿಂದ ಶ್ರೀಮಡಿವಾಳ ಮಾಚಿದೇವರ ಜಯಂತಿ ಪ್ರಯುಕ್ತ ಆರೋಗ್ಯ ಶಿಬಿರ, ಹಿರಿಯರಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಗ್ರಾಮದ ಶ್ರೀ ತಗಡೂರಯ್ಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಹಿರಿಯರಿಗೆ ಸನ್ಮಾನ ಅಭಿನಂದನೆ ಸಲ್ಲಿಸಿ ಮಾತನಾಡಿದ ಲೇಖಕ ದ.ಕೋ.ಹಳ್ಳಿ ಚಂದ್ರಶೇಖರ್, ಗ್ರಾಮದ ಎಲ್ಲಾ ಜಾತಿಯ ಎಲ್ಲಾ ಜನಾಂಗವು ಸಮನ್ವಯದಿಂದ ಒಗ್ಗೂಡಿರುವುದು ಸಂತಸದ ವಿಚಾರ. ಊರಿನ ಜನರಲ್ಲಿ ಒಗ್ಗಟ್ಟಿದ್ದಾಗ ಅಭಿವೃದ್ಧಿ ಸಾಧ್ಯವಾಗಲಿದೆ. ಆದ್ದರಿಂದ ಶ್ರೀಮಡಿವಾಳ ಮಾಚಿದೇವರ ಜಯಂತಿ ಯಶಸ್ವಿಯಾಗಿದೆ ಎಂದರು.

ನಮ್ಮ ಪೂರ್ವಿಕರು, ಹಿರಿಯರನ್ನು, ನಮಗೆ ಸನ್ಮಾರ್ಗವನ್ನು ತೋರಿಸಿದರನ್ನ ನೆನೆಯುವುದು ಮಾನವ ಧರ್ಮ. 12ನೇ ಶತಮಾನದ ಮಡಿವಾಳ ಮಾಚಿದೇವರನ್ನು ನಾಡಿನ ಒಬ್ಬ ಶ್ರೇಷ್ಠ ವ್ಯಕ್ತಿ. ಅವರು ನಮಗಾಗಿ ಬದುಕಲಿಲ್ಲ ನಾಡಿಗಾಗಿ ಸಮಾಜಕ್ಕಾಗಿ ಬದುಕಿದರು ಎಂದರು.

ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಕೆಎಸ್‌ಎಫ್‌ಸಿ ನಿವೃತ್ತ ವ್ಯವಸ್ಥಾಪಕ ವಿಜಯಕುಮಾರ್ ಶ್ರೀಮಡಿವಾಳ ಮಾಚಿದೇವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಮಕ್ಕಳಿಗೆ ಬೋಧಿಸಿದರು.

ಅಧ್ಯಕ್ಷತೆಯನ್ನು ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ ವಹಿಸಿದ್ದರು. ಪತ್ರಿಕಾ ಛಾಯಾಗ್ರಾಹಕ ಕೆ.ಪಿ.ಕುಮಾರ್, ಹಿರಿಯ ಮುಖಂಡ ಪುಟ್ಟರಸಯ್ಯ ಹಾಗೂ ಎಸ್ಸೆಸ್ಸೆಲ್ಸಿ, ಪದವೀಧರ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ನಾರಾಯಣ, ಮಾಜಿ ಉಪಾಧ್ಯಕ್ಷ ಜಯಶಂಕರ್, ಡೈರಿ ಅಧ್ಯಕ್ಷ ಶಿವರಾಮು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗೇಗೌಡ, ಉಪಾಧ್ಯಕ್ಷ ಶಿವಸಿದ್ದಯ್ಯ, ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ಅಧ್ಯಕ್ಷ ಎಚ್.ಎಂ. ಜಗದೀಶ್, ಉಪಾಧ್ಯಕ್ಷ ಗುಣಶೇಖರ್, ಕಾರ್ಯದರ್ಶಿ ಕುಮಾರ್, ಇತರರಿದ್ದರು.