ಸನ್ರೈಸ್ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

| Published : Jun 04 2024, 12:31 AM IST

ಸನ್ರೈಸ್ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಸನ್ರೈಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದಲ್ಲಿ ಕಲ್ಲು ಕಾಯಿಲೆಗಳ ಉಚಿತ ತಪಾಸಣೆ ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರು ರೋಗಿ ತಪಾಸಣೆಯಲ್ಲಿ ತೊಡಗಿರುವುದು.

ಕನ್ನಡಪ್ರಭ ವಾರ್ತೆ ಸಿಂಧನೂರು

ಸನ್ರೈಸ್ ಕಾಲೇಜ್ ಆಫ್ ಫಾರ್ಮಸಿ, ಸ್ಕೂಲ್ ಆಫ್ ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜ್ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಸನ್ರೈಸ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದಲ್ಲಿ ಕಲ್ಲು ಕಾಯಿಲೆಗಳ ಉಚಿತ ತಪಾಸಣೆ ಶಿಬಿರದಲ್ಲಿ 350 ಜನ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ, 50ಕ್ಕೂ ಹೆಚ್ಚು ರೋಗಿಗಳಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.

ತಪಾಸಣೆಯಲ್ಲಿ 70ಕ್ಕಿಂತ ಹೆಚ್ಚು ಜನರಿಗೆ ಇಸಿಜಿ ಹಾಗೂ 2ಡಿ ಎಕೋ ಪರೀಕ್ಷೆ, ಅವಶ್ಯಕತೆಯಿದ್ದ 100ಕ್ಕಿಂತ ಹೆಚ್ಚು ರೋಗಿಗಳಿಗೆ ಉಚಿತ ರಕ್ತ ತಪಾಸಣೆ ಮಾಡಲಾಯಿತು. ವಯಸ್ಕರಿಗೆ ಹಾಗೂ ದೂರದಿಂದ ಬರುವವರಿಗೆ ವಾಹನ ಮತ್ತು ಹಳ್ಳಿಗಳಿಂದ ಬಂದ ಪ್ರತಿಯೊಬ್ಬ ರೋಗಿಗಗಳಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.

ಶಿಬಿರದಲ್ಲಿ 350 ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ ಸಪ್ತಗಿರಿ ಆಸ್ಪತ್ರೆಯ ವ್ಯವಸ್ಥಾಪಕ ಹಾಗೂ ವೈದ್ಯ ವಿಶ್ವನಾಥ ಹಾಗೂ ರಂಜಿತ್ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ರೆಹಮತ್ ಪಾಷಾ ಶಿಬಿರ ಉದ್ಘಾಟಿಸಿದರು. ಜಮಾಅತೆ ಇಸ್ಲಾಂ ಹಿಂದ್ ಅಧ್ಯಕ್ಷ ಮಹ್ಮದ್ ಹುಸೇನಸಾಬ, ಲಿಂಗಸುಗೂರಿನ ಸ್ವಾಮಿ ವಿವೇಕಾನಂದ ಕಾಲೇಜು ಅಧ್ಯಕ್ಷ ಶಾಂತನಗೌಡ, ಸನ್ರೈನ್ ಕಾಲೇಜಿನ ಗೌರವಾಧ್ಯಕ್ಷರು ಖಾಜಾ ಮೋಹಿನುದ್ದೀನ್, ಅಧ್ಯಕ್ಷ ಇರ್ಫಾನ್ ಕೆ, ಕಾರ್ಯದರ್ಶಿ ಇರ್ಷಾದ್ ಕೆ, ನರ್ಸಿಂಗ್ ಪ್ರಾಂಶುಪಾಲ ಸಿರಿಲ್, ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಕ್ರವರ್ತಿ, ಮನೋಹರ್, ಸಮಾಜ ಸೇವಕ ಉಸ್ಮಾನ್ ಷಾ ಮಕಾಂದಾರ್ ಇದ್ದರು.