ಸಾರಾಂಶ
ಚನ್ನರಾಯಪಟ್ಟಣ ಪಟ್ಟಣದ ಸಂತೆ ಮೈದಾನದಲ್ಲಿ ಸಾರ್ವಜನಿಕರಿಗೆ ಮತ್ತು ಸಂತೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಪಟ್ಟಣದ ರೊಟರಿ ಕ್ಲಬ್ ಹಾಗೂ ರೊಟ್ರ್ಯಾಕ್ಟ್ ಕ್ಲಬ್ ಮಿಟ್ಟೌನ್ ಹಾಸನ ಏಡ್ಸ್ ಜಾಗೃತಿ ದಳ ಸಾರ್ವಜನಿಕ ಆಸ್ಪತ್ರೆ, ಹಾಸನ ಇವರ ವತಿಯಿಂದ ಉಚಿತ ರಕ್ತದ ಒತ್ತಡ ಮತ್ತು ಮಧುಮೇಹ, ರಕ್ತದ ಗುಂಪು ಪರೀಕ್ಷೆ ಹಾಗೂ ಏಡ್ಸ್ ಪರೀಕ್ಷೆ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ೧೨೦ ಜನ ಇದರ ಉಪಯೋಗವನ್ನು ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಸಂತೆ ಮೈದಾನದಲ್ಲಿ ಸಾರ್ವಜನಿಕರಿಗೆ ಮತ್ತು ಸಂತೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಪಟ್ಟಣದ ರೊಟರಿ ಕ್ಲಬ್ ಹಾಗೂ ರೊಟ್ರ್ಯಾಕ್ಟ್ ಕ್ಲಬ್ ಮಿಟ್ಟೌನ್ ಹಾಸನ ಏಡ್ಸ್ ಜಾಗೃತಿ ದಳ ಸಾರ್ವಜನಿಕ ಆಸ್ಪತ್ರೆ, ಹಾಸನ ಇವರ ವತಿಯಿಂದ ಉಚಿತ ರಕ್ತದ ಒತ್ತಡ ಮತ್ತು ಮಧುಮೇಹ, ರಕ್ತದ ಗುಂಪು ಪರೀಕ್ಷೆ ಹಾಗೂ ಏಡ್ಸ್ ಪರೀಕ್ಷೆ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸುಮಾರು ೧೨೦ ಜನ ಇದರ ಉಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಬಿ. ವಿ. ವಿಜಯ್ ಮಾತನಾಡಿ, ಜನಸಾಮಾನ್ಯರು ತಮ್ಮ ಕಾರ್ಯದ ಒತ್ತಡದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡದೆ ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುತ್ತಾರೆ ಹಾಗಾಗಿ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಬಾರಿಯಾದರೂ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆಗೆ ಒಳಪಡಬೇಕು ಎಂದು ತಿಳಿಸಿದರು. ಪುರಸಭೆಯ ಆರೋಗ್ಯದ ನಿರಿಕ್ಷಕ ರಾಜು ಮಾತನಾಡಿ ಲೈಂಗಿಕ ಕ್ರಿಯೆಯಲ್ಲಿ ಸುರಕ್ಷತೆಯನ್ನು ಕಾಪಾಡಿಕೊಂಡರೆ ಏಡ್ಸ್ ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಚನ್ನರಾಯಪಟ್ಟಣದ ರೋಟರಿ ಕ್ಲಬ್ ಖಜಾಂಚಿ ನಟರಾಜ್, ಜ್ಯೋತಿ, ಶ್ರೀನಿವಾಸ್, ಹಾಸನ ಏಡ್ಸ್ ಜಾಗೃತಿ ದಳದ ರಮೇಶ್, ತಾಲೂಕು ಅಧಿಕಾರಿ ಕೆಂಚೇಗೌಡ ಮತ್ತಿತರಿದ್ದರು.